More

    ಅಂಚೆ ಇಲಾಖೆಯಲ್ಲಿ ಬ್ಯಾಂಕಿಂಗ್ ವ್ಯವಹಾರ ದಾಪುಗಾಲು

    ಕೂಡ್ಲಿಗಿ: ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಂಚೆ ಇಲಾಖೆ ಸದಾ ಸನ್ನದ್ಧವಾಗಿದೆ ಎಂದು ಬಳ್ಳಾರಿ ಯುವ ವಿಭಾಗದ ಅಂಚೆ ಅಧೀಕ್ಷಕ ವಿ.ಎಲ್.ಚಿತ್ಕೋಟೆ ಹೇಳಿದರು.

    ಪಟ್ಟಣದ ಎಸ್‌ಎವಿಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಅಂಚೆ ಇಲಾಖೆ ಏರ್ಪಡಿಸಿದ್ದ ಅಂಚೆ ಇಲಾಖೆಯಲ್ಲಿನ ವ್ಯವಹಾರಗಳ ಸಮಾಲೋಚನಾ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಪ್ರಧಾನ ಮಂತ್ರಿ ಜಾರಿಗೊಳಿಸಿರುವ ನೂರಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಅಂಚೆ ಇಲಾಖೆ ಸಮರ್ಪಕವಾಗಿ ಮನೆ ಮನೆಗಳಿಗೆ ಯೋಜನೆಗಳನ್ನು ಮುಟ್ಟಿಸುವ ಕಾರ್ಯ ಅಂಚೆ ಪಾಲಕರು ಮಾಡುತ್ತಿದ್ದಾರೆ. ಇಲಾಖೆ ಬರೀ ಕಾಗದ ಪತ್ರಗಳ ವಿಲೇವಾರಿಗೆ ಸಿಮೀತವಾಗಿಲ್ಲ. ಬ್ಯಾಂಕಿಂಗ್ ವ್ಯವಹಾರದಲ್ಲಿಯೂ ದಾಪುಗಲು ಇಡುತ್ತಿದೆ ಎಂದು ಹೇಳಿದರು.

    ಗಟ್ಟಿಯಾಗಿ ಉಳಿದ ಅಂಚೆ ಇಲಾಖೆ

    ದೇಶದಲ್ಲಿ ಅನೇಕ ಇಲಾಖೆಗಳು ಖಾಸಗೀಕರಣಗೊಂಡಿವೆ. ಆದರೆ 150 ವರ್ಷ ಹಳೆಯದಾದ ಅಂಚೆ ಇಲಾಖೆ ಮಾತ್ರ ಗಟ್ಟಿಯಾಗಿ ಉಳಿದುಕೊಂಡಿದೆ. ಬಳ್ಳಾರಿ ವಿಭಾಗಕ್ಕೆ ಈ ಬಾರಿ 1,56,000 ಖಾತೆಗಳನ್ನು ತೆರೆಯುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಗುರಿಯನ್ನು ಈಡೇರಿಸುವಲ್ಲಿ ಕೂಡ್ಲಿಗಿ ಉಪ ವಿಭಾಗದ ಎಲ್ಲಾ ಅಂಚೆ ನೌಕರರು ಹಾಗೂ ಗ್ರಾಮೀಣ ಅಂಚ ನೌಕರರು ಸಫಲರಾಗಬೇಕು. ಕೆಲಸದಿಂದ ಮಾತ್ರ ಬದಲಾವಣೆ ಸಾಧ್ಯ ಎಂದರು.

    ಇದನ್ನೂ ಓದಿ: ಈ ಅಂಗಡಿಗೆ ಹೋಗುವ ಮುನ್ನ ಎಚ್ಚರ! ಬರಿಗೈಯಲ್ಲಿ ವಾಪಸ್ಸಾದರೆ ಬೀಳುತ್ತೆ 500 ರೂ. ದಂಡ!

    ಕೂಡ್ಲಿಗಿ ಉಪ ವಿಭಾಗದ ಅಂಚೆ ನಿರೀಕ್ಷಕರಾದ ಬಾರಿಕರ ರಾಜಪ್ಪ ಮಾತನಾಡಿ, ಉತ್ತರ ಕರ್ನಾಟಕದ ವಲಯ ಮಟ್ಟದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಖಾತೆ ತೆರೆಯುವಲ್ಲಿ ಕೂಡ್ಲಿಗಿ ಪ್ರಥಮ ಸ್ಥಾನ ಪಡೆದಿದೆ. ಹೊಸಹಳ್ಳಿ ದ್ವಿತೀಯ ಸ್ಥಾನವನ್ನು ಮತ್ತು ಕೂಡ್ಲಿಗಿ ಉಪ ವಿಭಾಗ ಪ್ರಥಮ ಸ್ಥಾನವನ್ನು ಅಲಂಕರಿಸಿದೆ ಎಂದರು.


    ಕೂಡ್ಲಿಗಿ ಅಂಚೆ ಪಾಲಕ ಅಂಚೆ ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎನ್.ಕಲ್ಲಪ್ಪ, ಅಂಚೆ ವಿಮೆಯ ಅಭಿವೃದ್ಧಿ ಅಧಿಕಾರಿ ಮಾರುತಿ, ಬಳ್ಳಾರಿಯ ವಿಭಾಗದ ಮಾರುಕಟ್ಟೆ ವ್ಯವಸ್ಥಾಪಕ ಕೆ. ವೆಂಕಟೇಶ್, ಅಖಿಲ ಭಾರತ ಅಂಚೆ ನೌಕರರ ಸಂಘಗಳ ಕಾರ್ಯದರ್ಶಿ ಎಲ್.ಎಸ್.ಸುರೇಶ ಕುಮಾರ ಕೆ. ವೆಂಕಟೇಶ್, ಕೆ. ಎಂ. ರವಿಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts