More

    ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದುಹೋಗುತ್ತಿದ್ದಂತೆ ರಾಜ್ಯಕ್ಕೆ ಕೋಟಿಗಟ್ಟಲೆ ಹಣ ಮಂಜೂರು!

    ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ಕರ್ನಾಟಕಕ್ಕೆ ಬಂದು ಹೋಗಿದ್ದು, ಇಂದು ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಕೋಟಿಗಟ್ಟಲೆ ಹಣ ಬಿಡುಗಡೆ ಆಗಿರುವ ಖುಷಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಅದೇ ಕಾರಣಕ್ಕೆ ಅವರು ಪ್ರಧಾನಿಗೆ ಧನ್ಯವಾದವನ್ನೂ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಬೆಂಗಳೂರು-ಮೈಸೂರು ದಶಪಥ: ನಾಳೆಯಿಂದಲೇ ಟೋಲ್ ಕಲೆಕ್ಷನ್; ಪೊಲೀಸ್ ಭದ್ರತೆಯಲ್ಲಿ ಹಣ ಸಂಗ್ರಹಕ್ಕೆ ಸಜ್ಜು

    ಪ್ರವಾಹ, ಭೂಕುಸಿತದಿಂದ ಆದ ಹಾನಿಯ ಬಾಬ್ತು ಪರಿಹಾರಾರ್ಥವಾಗಿ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಪ್ರಧಾನಿ ಪ್ರವಾಹ ಬಂದಾಗ ಬರಲಿಲ್ಲ, ಭೂಕುಸಿತವಾಗಿದ್ದಾಗ ಬರಲಿಲ್ಲ, ಚುನಾವಣೆ ಬಂದಾಗ ಮಾತ್ರ ಮೇಲಿಂದ ಮೇಲೆ ಬರುತ್ತಿದ್ದಾರೆ ಎಂದು ಅವರ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಅವುಗಳಿಗೆಲ್ಲ ಈಗ ಈ ಮೂಲಕ ಉತ್ತರ ಕೊಟ್ಟಂತಾಗಿದೆ.

    ಇದನ್ನೂ ಓದಿ: ತಾತನ ಮರಣದ ಬೆನ್ನಿಗೇ ಮೊಮ್ಮಗನಿಗೂ ಸಾವು; ಮಾವನ ಕಣ್ಣೆದುರೇ ಪ್ರಜ್ಞೆ ತಪ್ಪಿ ಬಿದ್ದಿದ್ದ 17 ವರ್ಷದ ಹುಡುಗ!

    “2022ರ ಅವಧಿಯಲ್ಲಿ ಉಂಟಾದ ಪ್ರವಾಹ, ಭೂ ಕುಸಿತ, ಅತಿವೃಷ್ಟಿಯಿಂದ ಹಾನಿಗೊಳಗಾಗಿದ್ದ ರಾಜ್ಯಕ್ಕೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಹೆಚ್ಚುವರಿಯಾಗಿ 941.04 ಕೋಟಿ ರೂ. ಮಂಜೂರು ಮಾಡಿದ್ದು, ಸಹಜವಾಗಿಯೇ ಹರ್ಷ ತಂದಿದೆ. ಕರ್ನಾಟಕದ ಬಗೆಗಿನ ವಿಶೇಷ ಕಾಳಜಿಗಾಗಿ, ಪ್ರಧಾನಮಂತ್ರಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಮೊಬೈಲ್​ಫೋನ್ ಕಳೆದುಹೋದರೆ ತಕ್ಷಣ ಹೀಗೆ ಮಾಡಿ; ಕೊರಿಯರ್​ನಲ್ಲಿ ಫೋನ್​ ವಾಪಸ್!

    ಕರಗ ಕುರಿತು ಅವಹೇಳನಕಾರಿ ಮಾತಾಡಿದ ಶಾಸಕ ಹ್ಯಾರಿಸ್; ಭಾರಿ ಪ್ರತಿಭಟನೆಯ ಸುಳಿವು ಸಿಗುತ್ತಿದ್ದಂತೆ ಕ್ಷಮೆಯಾಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts