More

    ಭಾರತಿರಾಜಗೆ ಫಾಲ್ಕೆ ಪ್ರಶಸ್ತಿ ಕೊಡಿ … ಕಮಲ್​, ಧನುಶ್​ ಆಗ್ರಹ

    ತಮಿಳಿನ ಜನಪ್ರಿಯ ನಿರ್ದೇಶಕರಲ್ಲೊಬ್ಬರು ಹಿರಿಯ ನಿರ್ದೇಶಕ ಭಾರತಿರಾಜ. ರಜನಿಕಾಂತ್​, ಕಮಲ್​ ಹಾಸನ್​ಮತ್ತು ಶ್ರೀದೇವಿ ನಿರ್ದೇಶನದ ’16 ವಯದಿನಲೇ’ ಸೇರಿದಂತೆ ಹಲವು ಸೂಪರ್​ ಹಿಟ್​ ಚಿತ್ರಗಳನ್ನು ನಿರ್ದೇಶಿಸಿರುವ ಭಾರತಿರಾಜ, ಹಿಂದಿಯಲ್ಲೂ ಕೆಲವು ಚಿತ್ರಗಳನ್ನು ನಿರ್ದೇಶಿಸಿದವರು.

    ಇದನ್ನೂ ಓದಿ: ವಿಜಯ್​ ನಂಬರ್​ 1, ಲಾರೆನ್ಸ್​ ನಂಬರ್​ 2 … ಯಾವುದರಲ್ಲಿ ಗೊತ್ತಾ?

    ಈ ಹಿರಿಯ ನಿರ್ದೇಶಕರಿಗೆ ಇದೀಗ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಕೊಡಿ ಎಂದು ದಕ್ಷಿಣ ಭಾರತದ ಜನಪ್ರಿಯ ನಟರು ಮತ್ತು ತಂತ್ರಜ್ಱರು ಇದೀಗ ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​ ಅವರನ್ನು ಆಗ್ರಹಿಸಿದ್ದಾರೆ.

    ಅಂದಹಾಗೆ, ಇದರ ಮುಂಚೂಣಿಯಲ್ಲಿರುವವರು ಯಾರು ಗೊತ್ತಾ? ಭಾರತೀರಾಜ ಅವರ ಹಲವು ಚಿತ್ರಗಳಲ್ಲಿ ನಟಿಸಿರುವ ಕಮಲ್​ ಹಾಸನ್​. ಕಮಲ್​ ಅಲ್ಲದೇ ನಟ ಧನುಶ್​, ಪಾರ್ಥಿಬನ್​, ನಿರ್ದೇಶಕರಾದ ವೆಟ್ರಿಮಾರನ್​, ಬಾಲ, ಪ್ರಿಯದರ್ಶನ್​ ಸೇರಿದಂತೆ ಹಲವರು ಸಚಿವರಿಗೆ ಪತ್ರ ಬರೆದು, ಭಾರತೀರಾಜ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್​ ಪ್ರಶಸ್ತಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

    ಈ ಕುರಿತು ಪತ್ರ ಬರೆದಿರುವ ಅವರು, ಭಾರತೀಯ ಚಿತ್ರರಂಗಕ್ಕೆ ಭಾರತರಾಜ ಅವರ ಕೊಡುಗೆ ಅಪಾರ. ನಿರುದ್ಯೋಗ, ಅಸ್ಪೃಶ್ಯತೆ, ಮಹಿಳಾ ಸಬಲೀಕರಣ, ಮಾನವೀಯ ಸಂಬಂಧಗಳು … ಹೀಗೆ ಭಾರತಿರಾಜ ಮುಟ್ಟದ ವಿಷಯಗಳೇ ಇಲ್ಲ. ಗಂಭೀರವಾದ ವಿಷಯಗಳನ್ನು ಕಮರ್ಷಿಯಲ್​ ಚೌಕಟ್ಟಿನಲ್ಲಿ ಹೇಳುವ ಪ್ರಯತ್ನವನ್ನು ಭಾರತಿರಾಜ ಮಾಡುತ್ತಲೇ ಬಂದಿದ್ದಾರೆ. ಈ ಬಾರಿ ಅವರಿಗೆ ಪ್ರಶಸ್ತಿ ಕೊಟ್ಟು ಗೌರವಿಸಬೇಕು ಎಂದು ಈ ಪತ್ರದಲ್ಲಿ ಬರೆದಯಲಾಗಿದೆ.

    ಇದನ್ನೂ ಓದಿ: ‘ಪಾನಿ’ ನಿಲ್ಲೋಕೆ ಕಾರಣ ಯಾರು ಗೊತ್ತಾ? ಆದಿತ್ಯ ಚೋಪ್ರಾ ಹೇಳ್ತಾರೆ ಕೇಳಿ …

    ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರತೀ ವರ್ಷ ಭಾರತೀಯ ಚಿತ್ರರಂಗದ ದಿಗ್ಗಜರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಪಟ್ಟಿಯಲ್ಲಿ ದಕ್ಷಿಣ ಭಾರತೀಯರಿಗಿಂತ ಉತ್ತರ ಭಾರತದವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬ ದೂರು ಪ್ರತೀ ವರ್ಷ ಕೇಳಿ ಬರುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಅಮಿತಾಭ್​ ಬಚ್ಚನ್​ ಮತ್ತು ವಿನೋದ್​ ಖನ್ನಾ ಅವರಿಗೆ ಈ ಪ್ರಶಸ್ತಿ ಸಿಕ್ಕಿದ್ದು, ಅದಕ್ಕೂ ಮುನ್ನ 2016ರಲ್ಲಿ ತೆಲುಗಿ ಹಿರಿಯ ನಿರ್ದೇಶಕ ಕೆ. ವಿಶ್ವನಾಥ್​ ಅವರಿಗೆ ಸಿಕ್ಕಿತ್ತು ಎಂಬುದು ಗಮನಾರ್ಹ.

    ಅರ್ಜುನ್​ ಸರ್ಜಾ ಪುತ್ರಿ ಐಶ್ವರ್ಯಾಗೆ ಕರೊನಾ ಸೋಂಕು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts