More

    ಐಟಿ ರಿಟರ್ನ್ಸ್ ಅರ್ಜಿಗಳನ್ನು ಬಿಡುಗಡೆ ಮಾಡಿದ ಸಿಬಿಡಿಟಿ

    ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆದಾಯ ತೆರಿಗೆ ರಿಟರ್ನ್ಸ್​ಗೆ ಸಂಬಂಧಿಸಿದ 1ರಿಂದ 7 ರ ತನಕದ ಅರ್ಜಿಗಳನ್ನು ಬಿಡುಗಡೆ ಮಾಡಿರುವುದಾಗಿ ಶನಿವಾರ ಪ್ರಕಟಿಸಿದೆ. ಪರಿಷ್ಕೃತ 2020ರ ಆದಾಯ ತೆರಿಗೆ ನಿಯಮಗಳ ಪ್ರಕಾರ ಈ ನೋಟಿಫಿಕೇಷನನ್ನು ಅದು ಪ್ರಕಟಿಸಿದೆ.

    ಇದನ್ನೂ ಓದಿ: ಜಿ7 ಔಟ್​ಡೇಟೆಡ್​!: ಹೊಸತನ್ನು ಕಟ್ಟೋಣ, ಭಾರತವನ್ನೂ ಸೇರಿಸೋಣ ಎಂದ್ರು ಅಧ್ಯಕ್ಷ ಟ್ರಂಪ್​

    ಈ ಐಟಿಆರ್​ ಅರ್ಜಿಗಳು “Sahaj (ITR-1), Form ITR-2, Form ITR-3, Form ITR-4 (Sugam), Form ITR-5, Form ITR-6, Form ITR-7 and Form ITR-V” ಈ ರೀತಿ ಇದ್ದು, ತೆರಿಗೆದಾರರು ಅವರಿಗೆ ಸಂಬಂಧಿಸಿದ ಅರ್ಜಿಯನ್ನು ತೆಗೆದುಕೊಂಡು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.

    ಇದನ್ನೂ ಓದಿ:1962 ಅಲ್ಲ ಈಗ ನಡೀತಿರೋದು- ಚೀನಾಕ್ಕೆ ಪಂಜಾಬ್ ಸಿಎಂ ವಾರ್ನಿಂಗ್​!

    ಈ ತಿಂಗಳ ಆರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐಟಿಆರ್ ಸಲ್ಲಿಸುವ ಅಂತಿಮ ದಿನಾಂಕವನ್ನು ಜುಲೈ 31ರಿಂದ ನವೆಂಬರ್ 30ಕ್ಕೆ ವಿಸ್ತರಿಸಿರುವುದಾಗಿ ಘೋಷಿಸಿದ್ದರು. ಅಲ್ಲದೆ, ಫಾರ್ಮ್​ 16 ಪಡೆಯುವ ದಿನಾಂಕವನ್ನೂ 2020ರ ಜೂನ್​ 20ರಿಂದ ಜೂನ್​ 30ರ ತನಕ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ತೆರಿಗೆ ಆಡಿಟ್ ಕೆಲಸ ಸೆಪ್ಟೆಂಬರ್​ 30 ರಿಂದ ಅಕ್ಟೋಬರ್​ 31ರ ನಡುವೆ ನಡೆಯಲಿದೆ ಎಂದೂ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. (ಏಜೆನ್ಸೀಸ್)

    ಐಟಿ ರಿಟರ್ನ್ಸ್ ಅರ್ಜಿಗಳನ್ನು ಬಿಡುಗಡೆ ಮಾಡಿದ ಸಿಬಿಡಿಟಿ

    ‘ಸ್ಟಡಿ ಫ್ರಂ ಹೋಂ’ ಜಮಾನಾ ಶುರು: ಸುಳಿವು ನೀಡಿದ್ರು ಶಿಕ್ಷಣ ಸಚಿವ ಸುರೇಶ್ ಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts