More

    ಕಂಗನಾ ನಂತರ ಸೋನು ಸೂದ್​ ವಿರುದ್ಧ ಮೊಕದ್ದಮೆ ಹೇರಿದ ಬೃಹನ್ಮುಂಬೈ ಪಾಲಿಕೆ

    ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ಕಚೇರಿಯ ಕಟ್ಟಡವನ್ನು ಬೃಹನ್ಮುಂಬೈ ಪಾಲಿಕೆಯವರು (ಬಿಎಂಪಿ) ಧ್ವಂಸ ಮಾಡಲು ಯತ್ನಿಸಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಕಂಗನಾ ನಂತರ ಇದೀಗ ಮತ್ತೊಬ್ಬ ಬಾಲಿವುಡ್​ ನಟನ ವಿರುದ್ಧ ಬಿಎಂಪಿ ಮೊಕದ್ದಮೆ ದಾಖಲಿಸಿದೆ. ಲಾಕ್​ಡೌನ್​ ಸಮಯದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿ ರಿಯಲ್​ ಹೀರೋ ಎನಿಸಿಕೊಂಡ ನಟ ಸೋನು ಸೂದ್​ ವಿರುದ್ಧ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ‘ಅಮ್ಮ’ನ ಆಪ್ತೆಗೆ ಜ. 27ರಂದು ಬಿಡುಗಡೆ ಭಾಗ್ಯ?; ವಕೀಲರಿಂದ ಹೊರಬಿತ್ತು ಮಾಹಿತಿ..

    ಸೋನು ಸೂದ್​ ಅವರು ವಸತಿ ಕಟ್ಟಡವನ್ನು ಅಕ್ರಮವಾಗಿ ಹೋಟೆಲ್​ ಆಗಿ ಪರಿವರ್ತಿಸುತ್ತಿದ್ದಾರೆ ಎನ್ನುವ ಆರೋಪವನ್ನು ಬಿಎಂಪಿ ಮಾಡಿದೆ. ಆದರೆ ಈ ಆರೋಪವನ್ನು ಸೋನು ಸೂದ್​ ಅವರು ತಳ್ಳಿ ಹಾಕಿದ್ದಾರೆ. ಮುಂಬೈನ ಜುಹುನಲ್ಲಿರುವ ಆರು ಮಹಡಿಯ ಶಕ್ತಿ ಸಾಗರ್​ ನಿವಾಸವನ್ನು ಹೋಟೆಲ್​ ಆಗಿ ಪರವರ್ತಿಸಲಾಗಿದೆ ಎನ್ನುವುದು ಬಿಎಂಪಿ ವಾದ.

    ಇದನ್ನೂ ಓದಿ: ‘ನಾನು ಸಂಸತ್ತಿನಲ್ಲಿರಬೇಕಿತ್ತು’ ರಾಜಕೀಯ ಸೇರುವ ಬಯಕೆ ಬಿಚ್ಚಿಟ್ಟ ಸೋನಿಯಾ ಗಾಂಧಿ ಅಳಿಯ

    ಕಟ್ಟಡದ ಪರಿವರ್ತನೆಗೆ ತಾವು ಅಗತ್ಯ ಅನುಮತಿ ಪಡೆದಿರುವುದಾಗಿ ಸೋನು ಸೂದ್​ ಹೇಳಿದ್ದಾರೆ. ಮಹಾರಾಷ್ಟ್ರದ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರದ (ಎಂಸಿಜಡ್​ಎಂಎ) ಅನುಮತಿ ಮಾತ್ರ ಬಾಕಿಯಿದೆ ಎಂದು ಅವರು ತಿಳಿಸಿದ್ದಾರೆ. ಮಹಾರಾಷ್ಟ್ರ ಪ್ರದೇಶ ಮತ್ತು ಯೋಜನಾ ಕಾನೂನಿನ ಅನ್ವಯ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಬಿಎಂಪಿ ಸೂಚಿಸಿದೆ. ಬಿಎಂಪಿ ನೋಟಿಸ್​ಗೆ​ ತಡೆ ತರಲು ನಟ ಕಳೆದ ವರ್ಷ ಅಕ್ಟೋಬರ್​ನಲ್ಲಿ ಸಿಟಿ ಸಿವಿಲ್​ ಕೋರ್ಟ್​ ಮೊರೆ ಹೋಗಿದ್ದರು. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಬಿಎಂಪಿಯಿಂದ ಎಲ್ಲ ಅನುಮತಿ ಪಡೆಯಲಾಗಿದೆ. ಆದರೆ ಕರೊನಾ ಕಾರಣದಿಂದಾಗಿ ಕರಾವಳಿ ಪ್ರಾಧಿಕಾರದ ಅನುಮೋದನೆ ಮಾತ್ರ ಸಿಕ್ಕಿಲ್ಲ ಎಂದು ಅವರು ಸ್ಪಷ್ಪಪಡಿಸಿದ್ದಾರೆ. ನೋಟಿಸ್​ ವಿರುದ್ಧ ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕ್ಲಾಸ್​ಮೇಟ್​ ನಂಬಿ ಚಾಟಿಂಗ್​ ಮಾಡುತ್ತಿದ್ದ ಯುವತಿಗೆ ವರ್ಷದ ಬಳಿಕ ಕಾದಿತ್ತು ಬಿಗ್​ ಶಾಕ್​!

    ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts