More

    ‘ಅಮಿತ್ ಶಾಗೆ ಇತಿಹಾಸ ತಿಳಿಯುತ್ತದೆ ಎಂದು ನಿರೀಕ್ಷಿಸಲಾಗದು: ನೆಹರು ವಿರುದ್ಧದ ವಾಗ್ದಾಳಿಗೆ ರಾಹುಲ್ ತಿರುಗೇಟು

    ನವದೆಹಲಿ: ಪಂಡಿತ್ ನೆಹರು ಅವರು ಭಾರತಕ್ಕಾಗಿ ತಮ್ಮ ಪ್ರಾಣವನ್ನು ನೀಡಿದರು. ಅವರು ವರ್ಷಗಳ ಕಾಲ ಜೈಲಿನಲ್ಲಿದ್ದರು. ಅಮಿತ್ ಶಾ ಅವರಿಗೆ ಇತಿಹಾಸದ ಅರಿವಿಲ್ಲ. ಅವರು ಇತಿಹಾಸವನ್ನು ತಿಳಿದುಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ, ಅವರು ಅದನ್ನು ಪುನಃ ಬರೆಯುವ ಅಭ್ಯಾಸವನ್ನು ಹೊಂದಿದ್ದಾರೆ…

    ಗೃಹ ಸಚಿವರಿಗೆ ಇತಿಹಾಸವನ್ನು ಮತ್ತೆ ಬರೆಯುವ ಅಭ್ಯಾಸವಿದೆ…
    ಕಾಶ್ಮೀರದ ಸಮಸ್ಯೆಗೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪ್ರಮಾದಗಳೇ ಕಾರಣ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ರೀತಿ ತಿರುಗೇಟು ನೀಡಿದ್ದಾರೆ.

    ನೆಹರು ಅವರ ಮೊಮ್ಮಗ ಕೂಡ ಆಗಿರುವ ರಾಹುಲ್​ ಅವರು ಮಂಗಳವಾರ ಸಂಸತ್ತಿನ ಹೊರಗೆ ಸುದ್ದಿಗಾರರ ಜತೆ ಮಾತನಾಡಿದರು. “ಇದು ಜನರನ್ನು ನೈಜ ಸಮಸ್ಯೆಗಳಿಂದ ದೂರವಿಡುವ ಒಂದು ಮಾರ್ಗವಾಗಿದೆ” ಎಂದು ಟೀಕಿಸಿದರು.


    ನಾಲ್ಕು ವರ್ಷಗಳ ಹಿಂದೆ 370 ನೇ ವಿಧಿಯನ್ನು ರದ್ದುಗೊಳಿಸುವ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ಕೇಂದ್ರದ ಕ್ರಮವನ್ನು ಸುಪ್ರೀಂ ಕೋರ್ಟ್ ಬೆಂಬಲಿಸಿದ ಕೆಲವೇ ಗಂಟೆಗಳ ನಂತರ ಅಮಿತ್ ಶಾ ಅವರು ಸಂಸತ್ತಿನಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ಕ್ರಮಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ನೆಹರು ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಕದನ ವಿರಾಮವನ್ನು ಘೋಷಿಸಿದರು ಹಾಗೂ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋದರು. ಇದರಿಂದಾಗಿ ಪಾಕ್​ ಆಕ್ರಮಿತ ಕಾಶ್ಮೀರ ಸೃಷ್ಟಿಯಾಯಿತು ಎಂದು ಆಪಾದಿಸಿದ್ದರು.

    “ಅಕಾಲಿಕ ಕದನ ವಿರಾಮ ಇಲ್ಲದಿದ್ದರೆ (ಪಾಕಿಸ್ತಾನದೊಂದಿಗಿನ ಯುದ್ಧದ ಸಮಯದಲ್ಲಿ), ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಇರುತ್ತಿರಲಿಲ್ಲ, ನಮ್ಮ ದೇಶ ಗೆಲ್ಲುತ್ತಿತ್ತು, ಅವರು (ನೆಹರು) ಎರಡು ದಿನ ಕಾಯುತ್ತಿದ್ದರೆ, ಇಡೀ ಕಾಶ್ಮೀರ ನಮ್ಮದಾಗುತ್ತಿತ್ತು” ಎಂದು ಶಾ ಹೇಳಿದ್ದರು.

    ಜನರಲ್ ರಾಯ್ ಬುಚೆರ್ ಸಲಹೆ:

    ಜವಾಹರಲಾಲ್ ನೆಹರು ವಿರುದ್ಧದ ಅಮಿತ್ ಶಾ ಹೇಳಿಕೆಯನ್ನು ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಅವರು, “ಸಂಪೂರ್ಣ ತಪ್ಪು” ಎಂದು ಹೇಳಿದ್ದಾರೆ. ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಜನರಲ್ ರಾಯ್ ಬುಚೆರ್ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದರಿಂದ ಕದನ ವಿರಾಮ ಘೋಷಿಸಲಾಗಿತ್ತು, ಇದು ಅನಿವಾರ್ಯವಾಗಿತ್ತು ಎಂದು ತಿವಾರಿ ಅವರು ಸುದ್ದಿ ಸಂಸ್ಥೆಗೆ ಸ್ಪಷ್ಟನೆ ನೀಡಿದ್ದಾರೆ.

    ಛತ್ತೀಸ್​ಗಢ, ಮಧ್ಯಪ್ರದೇಶದಂತೆ ರಾಜಸ್ಥಾನದಲ್ಲೂ ಕಾದಿದೆ ಅಚ್ಚರಿ: ಸಿಎಂ ಘೋಷಣೆಗೂ ಮುನ್ನ ಕುತೂಹಲ

    ಕಾಂಗ್ರೆಸ್​ ದರೋಡೆ ಮುಂದುವರಿದಿರುವಾಗ ಯಾರಿಗೆ ಬೇಕು ‘ಮನಿ ಹೀಸ್ಟ್’ ಕಾಲ್ಪನಿಕ ಕಥೆ: ಪ್ರಧಾನಿ ಲೇವಡಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts