More

    ಭಾರತದಿಂದ ನೇರ ವಿಮಾನಗಳಿಗೆ ಪ್ರವೇಶ ನೀಡಿದ ಕೆನಡಾ

    ನವದೆಹಲಿ/ಒಟ್ಟಾವಾ: ಭಾರತ-ಕೆನಡಾ ನಡುವಿನ ನೇರ ಪ್ರಯಾಣಿಕರ ವಿಮಾನಗಳ ಹಾರಾಟವನ್ನು ಸೆಪ್ಟೆಂಬರ್ 27ರ ಸೋಮವಾರದಿಂದ ಪುನರಾರಂಭಿಸಲಾಗುತ್ತಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಭಾರತವನ್ನು ಕೋವಿಡ್-19 ರ ಎರಡನೇ ಅಲೆಯು ಅಪ್ಪಳಿಸಿದಾಗ ವಿಧಿಸಿದ್ದ ನಿಷೇಧವನ್ನು 5 ತಿಂಗಳ ನಂತರ ಕೆನಡಾ ತೆಗೆದುಹಾಕಿದೆ.

    ಸೆಪ್ಟೆಂಬರ್​ 27 ರಂದು ಭಾರತೀಯ ಸಮಯ ಬೆಳಿಗ್ಗೆ 9.30ರಿಂದ ಕೆನಡಾಕ್ಕೆ ನೇರ ವಿಮಾನಗಳಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿರುವ ಕೆನಡಾ ಏರ್​ ಟ್ರಾನ್ಸ್​ಪೋರ್ಟ್​ ಇಲಾಖೆ, ಹೆಚ್ಚುವರಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಪಾಲಿಸಬೇಕು ಎಂದಿದೆ. “ಯಾತ್ರಿಕರು, ವಿಮಾನ ಹೊರಡುವ 18 ಗಂಟೆಗಳ ಒಳಗಿನ, ಅನುಮೋದಿತ ಜೀನ್​​ಸ್ಟ್ರಿಂಗ್ಸ್​ ಲ್ಯಾಬೋರೇಟರಿಯ ಕರೊನಾ ನೆಗೆಟೀವ್ ಆರ್​ಟಿಪಿಸಿಆರ್​ ವರದಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಹೊಂದಿರಬೇಕು. ಏರ್​ ಆಪರೇಟರ್​ಗೆ ಲ್ಯಾಬ್​ ನೀಡಿರುವ ಪರೀಕ್ಷಾ ವರದಿಯ ಕ್ಯೂಆರ್​ ಕೋಡ್​ಅನ್ನು ತೋರಿಸಬೇಕು” ಎಂದು ಟ್ರಾವೆಲ್​ ಅಡ್ವೈಸರಿ ಹೇಳಿದೆ.

    ಇದನ್ನೂ ಓದಿ: ಚಿಕಿತ್ಸೆಗೆ ಟೆಲಿ ರೊಬಾಟಿಕ್ ಅಲ್ಟ್ರಾಸೌಂಡ್: ಕನ್ನಡಿಗನ ವಿನೂತನ ಸಂಶೋಧನೆ

    ‘ಕೆನಡಾ ಏರ್’ ಸೋಮವಾರ ಎರಡು ದೇಶಗಳ ನಡುವಿನ ಮೊದಲ ನೇರ ಹಾರಾಟ ನಡೆಸಲಿದೆ. ‘ಏರ್ ಇಂಡಿಯಾ’ ವಿಮಾನಗಳು ಸೆಪ್ಟೆಂಬರ್ 30 ರಂದು ಸೇವೆಗಳನ್ನು ಪುನರಾರಂಭಿಸಲಿವೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

    VIDEO| 20 ಮೀ.​ ನಡಿಗೆಯಲ್ಲಿ ವಿಶ್ವ ದಾಖಲೆ ಮಾಡಿದ ಕಾಲಿಲ್ಲದ ಯುವಕ!

    ಗಡಿಯಾಚೆಗಿನ ಭಯೋತ್ಪಾದನೆ, ಪ್ರಾಕ್ಸಿ ಕಾರ್ಯಾಚರಣೆಗಳ ವಿರುದ್ಧ ಕೈಜೋಡಿಸಿದ ಭಾರತ-ಅಮೆರಿಕ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts