More

    ವಸಿಷ್ಠ ಸಿಂಹ ಹೆಸರಿನಲ್ಲೊಂದು ಕ್ಯಾಲೆಂಡರ್​

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಟ ಎಂದರೆ ಅದು ವಸಿಷ್ಠ ಸಿಂಹ. ‘ಟಗರು’ ಚಿತ್ರದಲ್ಲಿನ ‘ಚಿಟ್ಟೆ’ ಪಾತ್ರದ ಮೂಲಕ ಸಖತ್​ ಫೇಮಸ್​ ಆಗಿರುವ ವಸಿಷ್ಠ ಸಿಂಹಗೆ ಇದೀಗ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.

    ವಸಿಷ್ಠ ಸಿಂಹ ಹೆಸರಿನಲ್ಲೊಂದು ಕ್ಯಾಲೆಂಡರ್​

    ಇದನ್ನೂ ಓದಿ: ‘ಕೆಜಿಎಫ್​ 2’ ಟೀಸರ್​ ನೋಡಲು ವಿಶೇಷ ಪ್ರದರ್ಶನ

    ಈ ಪೈಕಿ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಟೌನ್​ನ ವಸಿಷ್ಠ ಸಿಂಹ ಅವರ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ 2021ರ ಕ್ಯಾಲೆಂಡರ್​ ಹೊರತಂದಿದ್ದಾರೆ. ಪುಟಕ್ಕೊಂದರಂತೆ, 12 ಪುಟಗಳಲ್ಲಿ ವಸಿಷ್ಠ ಸಿಂಹ ಅವರ ಹಲವು ವಿಭಿನ್ನ ಫೋಟೋಗಳಿವೆ.

    ಈ ಕ್ಯಾಲೆಂಡರ್​ನ್ನು ಸ್ವತಃ ವಸಿಷ್ಠ ಸಿಂಹ ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಏರ್​ಪೋರ್ಟ್​​ನಲ್ಲಿ ವಸಿಷ್ಠ ಸಿಂಹ ಬಾಯ್ಸ್​ ಸಂಘದ ಸದಸ್ಯರನ್ನು ಭೇಟಿ ಮಾಡಿರುವ ಅವರು, ಅಲ್ಲೇ ಕ್ಯಾಲೆಂಡರ್​ ಲೋಕಾರ್ಪಣೆ ಮಾಡಿದ್ದಾರೆ.

    ಇದನ್ನೂ ಓದಿ: ಪ್ರಶಾಂತ್ ನೀಲ್- ಪ್ರಭಾಸ್ ‘ಸಲಾರ್​’ ಸಿನಿಮಾಕ್ಕೆ ಬಾಲಿವುಡ್​ನ ಈ ಖ್ಯಾತ ನಟ ವಿಲನ್​!?

    ಕನ್ನಡದ ಹಲವು ನಟರ ಕ್ಯಾಲೆಂಡರ್​ ಇದುವರೆಗೂ ಬಿಡುಗಡೆಯಾಗಿದ್ದು, ಆ ಸಾಲಿಗೆ ಇದೀಗ ವಸಿಷ್ಠ ಸಹ ಸೇರ್ಪಡೆಯಾಗಿದ್ದಾರೆ. ಡಾ. ರಾಜಕುಮಾರ್, ಶಿವರಾಜಕುಮಾರ್​, ವಿಷ್ಣುವರ್ಧನ್​ ಅವರ ಹೆಸರಿನಲ್ಲಿ ಅವರ ಅಭಿಮಾನಿಗಳು ಪ್ರತೀ ವರ್ಷ ಒಂದೊಂದು ಕ್ಯಾಲೆಂಡರ್​ ಹೊರತರುತ್ತಿದ್ದು, ಈ ಬಾರಿ ಸಹಡಾ. ರಾಜಕುಮಾರ್​ ಮತ್ತು ವಿಷ್ಣುವರ್ಧನ್​ ಅವರ ಕ್ಯಾಲೆಂಡರ್​ಗಳನ್ನು ಹೊರತರಲಾಗಿದೆ.

    ದರ್ಶನ್​ ಲೈವ್​ ಬರ್ತಾರೆ … ಡೇಟ್ ಟೈಮ್ ಮಾರ್ಕ್ ಮಾಡಿಟ್ಟಿಕೊಳ್ಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts