More

    ವಿಪ್ರೊ ಸಂಸ್ಥೆಗೆ ನಿತ್ಯ 3 ಲಕ್ಷ ಲೀ.​ ಸಂಸ್ಕರಿಸಿದ ನೀರು ಪೂರೈಕೆ; ಜಲಮಂಡಳಿ ಅಧ್ಯಕ್ಷ ಮಾಹಿತಿ

    ಬೆಂಗಳೂರು: ದೇಶೀಯ ತಂತ್ರಜ್ಞಾನದ ಮೂಲಕ ಬೆಂಗಳೂರು ಜಲಮಂಡಳಿ ಉತ್ಪಾದಿಸುತ್ತಿರುವ ಶೂನ್ಯ ಬ್ಯಾಕ್ಟೀರಿಯಾ ಸಂಸ್ಕರಿಸಿದ ನೀರನ್ನು ವಿಪ್ರೊ ಸಂಸ್ಥೆಗೆ ಸರಬರಾಜು ಕಾರ್ಯಕ್ಕೆ ಗುರುವಾರ ಚಾಲನೆ ದೊರೆತಿದೆ.

    ವಿಪ್ರೊ ಸಂಸ್ಥೆ ಕೆಲ ದಿನಗಳ ಹಿಂದೆ ಸಂಸ್ಕರಿಸಿದ ನೀರು ಸರಬರಾಜು ಮಾಡುವಂತೆ ಜಲಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಟ್ಯಾಂಕರ್​ ಮೂಲಕ ನಿತ್ಯ 3 ಲಕ್ಷ ಲೀಟರ್​ ನೀರನ್ನು ಪೂರೈಸಲಾಗುತ್ತದೆ. ಎಚ್​ಎಎಲ್​, ಬ್ರೂಕ್​ಫಿಲ್ಡ್​ ಮತ್ತು ಅಡೋಬ್​ ಸಿಸ್ಟಮ್ಸ್​ ಸೇರಿ 40 ಐಟಿ ಸಂಸ್ಥೆಗಳು ಸಂಸ್ಕರಿಸಿದ ನೀರಿಗಾಗಿ ಬೇಡಿಕೆಯಿಟ್ಟಿದ್ದು, ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

    ಜಲಮಂಡಳಿ ವತಿಯಿಂದ ಪ್ರಾರಂಭಿಸಲಾಗಿರುವ 34ಕ್ಕೂ ಹೆಚ್ಚು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ ನಿತ್ಯ 1,200 ಎಂಎಲ್​ಡಿ ಸಂಸ್ಕರಿಸಿದ ನೀರು ಲಭ್ಯವಾಗುತ್ತಿದೆ. ಇದರ ಬಳಕೆ ಹೆಚ್ಚಿಸುವ ಮೂಲಕ ಕಾವೇರಿ ನೀರಿನ ಮೇಲಿನ ಅವಲಂಬನೆ ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ಸಂಸ್ಕರಿಸಿದ ನೀರಿನ ಬೇಡಿಕೆ 60 ಸಾವಿರ ಲೀಟರ್​ಗಳಿಂದ 6 ಎಂಎಲ್​ಡಿಗೆ ತಲುಪಿದೆ ಎಂದರು.

    ಐಟಿ ಸಂಸ್ಥೆಗಳಿಂದ ಹೆಚ್ಚಿನ ಬೇಡಿಕೆ:

    ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ವಿಜ್ಞಾನಿಗಳ ಸಹಯೋಗದಲ್ಲಿ ಜಲಮಂಡಳಿ ಇಂಜಿನಿಯರ್​ಗಳು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ದೇಶೀಯ ತಂತ್ರಜ್ಞಾನ ರೂಪಿಸಿದ್ದಾರೆ. ಎರಡು ವಾರಗಳ ಹಿಂದೆ ಪ್ರಾರಂಭಿಸಲಾದ ಈ ಯೋಜನೆಯಿಂದ ನಿತ್ಯ 1 ಕೋಟಿ ಲೀಟರ್​ನಷ್ಟು ಶೂನ್ಯ ಬ್ಯಾಕ್ಟೀರಿಯಾ ಸಂಸ್ಕರಿಸಿದ ನೀರು ಉತ್ಪಾದಿಸಬಹುದಾಗಿದೆ. ನಗರದ ಅಗರ, ಕೆ.ಸಿ. ವ್ಯಾಲಿ ಮತ್ತು ಬೆಳ್ಳಂದೂರು ಶುದ್ಧೀಕರಣ ಟಕಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು, ಈ ನೀರಿಗೆ ಐಟಿ ಕಂಪನಿಗಳಿಂದ ಬೇಡಿಕೆ ಬರುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts