More

    ಏರೇಟರ್​ ಅಳವಡಿಸಲು ಗಡುವು ವಿಸ್ತರಿಸಿದ ಬೆಂಗಳೂರು ಜಲಮಂಡಳಿ; ಮೇ 8ರಿಂದ ದಂಡ

    ಬೆಂಗಳೂರು: ನೀರು ಉಳಿತಾಯ ಪೋತ್ಸಾಹಿಸುವ ಉದ್ದೇಶದಿಂದ ಮಾಲ್​, ವಾಣಿಜ್ಯ ಸಂಕೀರ್ಣ, ಅಪಾರ್ಟ್​ಮೆಂಟ್​, ಸರ್ಕಾರಿ ಕಟ್ಟಡ, ಹೋಟೇಲ್​ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿರುವ ನಲ್ಲಿಗಳಿಗೆ ಕಡ್ಡಾಯವಾಗಿ ಏರೇಟರ್​ ಅಳವಡಿಸಲು ನೀಡಿದ್ದ ಗಡುವನ್ನು ಮೇ 7ರವರೆಗೆ ವಿಸ್ತರಿಸಿ ಜಲಮಂಡಳಿ ಆದೇಶಿಸಿದೆ.

    ಏರೇಟರ್​ ಅಳವಡಿಸಿಕೊಳ್ಳಲು ಏ.30 ವರೆಗೆ ಅವಕಾಶ ನೀಡಿತ್ತು. ಸಾರ್ವಜನಿಕರು ಗಡುವು ವಿಸ್ತರಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಅವಕಾಶ ವಿಸ್ತರಿಸಲಾಗಿದೆ.

    ಮೇ 8ರ ನಂತರ ಪರಿಶೀಲನೆ ನಡೆಸಿ ಏರೇಟರ್​ ಅಳವಡಿಸಿಕೊಳ್ಳದೇ ಇರುವವರ ಮೇಲೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ನಗರದಾದ್ಯಂತ ಸುಮಾರು 6 ಲಕ್ಕೂ ಹೆಚ್ಚು ಏರೇಟರ್​​ಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts