ಏರೇಟರ್​ ಅಳವಡಿಸಲು ಗಡುವು ವಿಸ್ತರಿಸಿದ ಬೆಂಗಳೂರು ಜಲಮಂಡಳಿ; ಮೇ 8ರಿಂದ ದಂಡ

ಬೆಂಗಳೂರು: ನೀರು ಉಳಿತಾಯ ಪೋತ್ಸಾಹಿಸುವ ಉದ್ದೇಶದಿಂದ ಮಾಲ್​, ವಾಣಿಜ್ಯ ಸಂಕೀರ್ಣ, ಅಪಾರ್ಟ್​ಮೆಂಟ್​, ಸರ್ಕಾರಿ ಕಟ್ಟಡ, ಹೋಟೇಲ್​ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿರುವ ನಲ್ಲಿಗಳಿಗೆ ಕಡ್ಡಾಯವಾಗಿ ಏರೇಟರ್​ ಅಳವಡಿಸಲು ನೀಡಿದ್ದ ಗಡುವನ್ನು ಮೇ 7ರವರೆಗೆ ವಿಸ್ತರಿಸಿ ಜಲಮಂಡಳಿ ಆದೇಶಿಸಿದೆ. ಏರೇಟರ್​ ಅಳವಡಿಸಿಕೊಳ್ಳಲು ಏ.30 ವರೆಗೆ ಅವಕಾಶ ನೀಡಿತ್ತು. ಸಾರ್ವಜನಿಕರು ಗಡುವು ವಿಸ್ತರಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಅವಕಾಶ ವಿಸ್ತರಿಸಲಾಗಿದೆ. ಮೇ 8ರ ನಂತರ ಪರಿಶೀಲನೆ ನಡೆಸಿ ಏರೇಟರ್​ ಅಳವಡಿಸಿಕೊಳ್ಳದೇ ಇರುವವರ ಮೇಲೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ನಗರದಾದ್ಯಂತ … Continue reading ಏರೇಟರ್​ ಅಳವಡಿಸಲು ಗಡುವು ವಿಸ್ತರಿಸಿದ ಬೆಂಗಳೂರು ಜಲಮಂಡಳಿ; ಮೇ 8ರಿಂದ ದಂಡ