More

    ಲೋಕಲ್​ ಫೈಟ್​ ಎಫೆಕ್ಟ್​! ಮೂರೇ ದಿನದಲ್ಲಿ 10 ಸಾವಿರ ಕೋಳಿ ಮಾರಾಟ

    ಚಿಕ್ಕಮಗಳೂರು: ಗ್ರಾಪಂ ಚುನಾವಣೆ ಪ್ರಚಾರದ ಕಡೆಯ ದಿನಗಳಲ್ಲಿ ಕೋಳಿಗೂ ಬೇಡಿಕೆ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಮೂರು ದಿನಕ್ಕೆ 10 ಸಾವಿರಕ್ಕೂ ಹೆಚ್ಚು ಕೋಳಿ ಮಾರಾಟವಾಗಿವೆ. ಪ್ರತಿದಿನ ಬೆಂಬಲಿಗರಿಗೆ, ಮತದಾರರಿಗೆ ನಾನ್​ವೆಜ್ ಊಟ ಹಾಕಿಸದಿದ್ದರೆ ಹತ್ತಿರ ಯಾರೂ ಸುಳಿಯುವುದೇ ಇಲ್ಲ. ಇದನ್ನರಿತ ಕೆಲ ಗ್ರಾಪಂ ಅಭ್ಯರ್ಥಿಗಳು ಅಡುಗೆ ಸಿದ್ಧಪಡಿಸಿ ಮನೆಮನೆಗೆ ಹಂಚಿದರೆ, ಇನ್ನೂ ಕೆಲವರು ಕೋಳಿಗಳನ್ನೇ ನೀಡಿದ್ದಾರೆ. ಅಲ್ಲದೆ ಚುನಾವಣೆ ನಂತರವೂ ಬಾಡೂಟ ಹಾಕಿಸುವ ಆಮಿಷವೊಡ್ಡಿದ್ದಾರೆ. ಹಾಗಾಗಿ ಕೋಳಿಗಳ ವ್ಯಾಪಾರ ಭರ್ಜರಿಯಾಗಿ ನಡೆದಿದೆ.

    ಒಂದು ವಾರದಿಂದ ಸಂಜೆಯಾಗುತ್ತಿದ್ದಂತೆ ಕೆಲವು ಹಳ್ಳಿಗಳಲ್ಲಿ ಕಾಲಿಟ್ಟರೆ ಹಬ್ಬದ ರಂಗು. ಗ್ರಾಮದ ಬಹುತೇಕ ಮನೆಗಳಲ್ಲಿ ಮಾಂಸಾಹಾರ ಫಿಕ್ಸ್. ಕುರುವಂಗಿ, ನೆಟ್ಟೆಕೆರೆಹಳ್ಳಿ, ಕರ್ತಿಕೆರೆ, ಇಂದಾವರ, ಹುಕ್ಕುಂದ, ಬೀಕನಹಳ್ಳಿಯಿಂದ ಹಂಪಾಪುರ, ಚಿಕ್ಕನಹಳ್ಳಿ, ಮರ್ಲೆ, ಮಾಗಡಿ, ಹೊಸಕೋಟೆ ರಾಮನಹಳ್ಳಿ, ಆರದವಳ್ಳಿ, ಮುಗುವಳ್ಳಿ ಬಹುತೇಕ ಗ್ರಾಮಗಳಲ್ಲಿ ಪ್ರತಿದಿನ ಪಾರ್ಟಿ ನಡೆಸಲಾಗುತ್ತಿದೆ.

    ಭಾನುವಾರ ಹೊರತು ಪಡಿಸಿ ಬೇರೆ ದಿನಗಳಲ್ಲಿ ಅಂದಾಜು ಒಂದು ಸಾವಿರ ಕೋಳಿ ವ್ಯಾಪಾರವಾಗುತ್ತಿತ್ತು. ಚುನಾವಣೆ ಪರಿಣಾಮ ನಗರದಲ್ಲಿ ಮೂರು ದಿನಗಳಿಂದ ಅಭ್ಯರ್ಥಿಗಳು ಚಿಕನ್​ಗಾಗಿ ಮಾಂಸದಂಗಡಿಗಳಿಗೆ ಮುಗಿಬಿದ್ದಿದ್ದರು. ಕೋಳಿ ಸಿಗದೆ ಕೆಲವರು ಸಖರಾಯಪಟ್ಟಣ, ಕಡೂರು ಸಂತೆಗಳಿಗೆ ತೆರಳಿದರೆ ಮತ್ತೆ ಕೆಲವರು ದಾವಣಗೆರೆ, ಹಿರಿಯೂರು, ಶಿವಮೊಗ್ಗಕ್ಕೂ ತೆರಳಿ ಕೋಳಿ ಖರೀದಿಸಿ ಮತದಾರರ ಹಸಿವು ನೀಗಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts