More

    ಮುಂದುವರೆದ ಭ್ರಷ್ಟಾಚಾರ ಆರೋಪ : ಮಾಜಿ ಪೊಲೀಸ್​ ಕಮಿಷನರ್​ ವಿರುದ್ಧ ವ್ಯಾಪಾರಿಗಳ ಹೇಳಿಕೆ ದಾಖಲು

    ಮುಂಬೈ : ಮಾಜಿ ಮುಂಬೈ ಪೊಲೀಸ್​ ಕ​ಮಿಷನರ್​ ಪರಮ್​ ಬೀರ್ ಸಿಂಗ್​ ಅವರು ಮಹಾರಾಷ್ಟ್ರದ ಅಂದಿನ ಗೃಹ ಮಂತ್ರಿ ಅನಿಲ್​ ದೇಶ್​ಮುಖ್ ವಿರುದ್ಧ ಭಾರೀ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೇಶಮುಖ್ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿರುವುದಲ್ಲದೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದೀಗ ಮುಂಬೈನ ಇಬ್ಬರು ಬಿಸಿನೆಸ್​ಮೆನ್​ ಪರಮ್​ ಬೀರ್​ ಸಿಂಗ್ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

    ಕ್ರಿಕೆಟ್​ ಬುಕಿ ಆಗಿರುವ ಆರೋಪ ಎದುರಿಸುತ್ತಿರುವ ವ್ಯಾಪಾರಿ ಸೋನು ಜಾಲನ್​, ಸಿಂಗ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ತಮ್ಮಿಂದ 3.45 ಕೋಟಿ ರೂ. ಸುಲಿಗೆ ಮಾಡಿದ್ದರು ಎಂದು ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದಿದ್ದಾರೆ. ಮತ್ತೊಬ್ಬ ವ್ಯಾಪಾರಿ ಮಯೂರೇಶ್​ ರೌತ್ ಕೂಡ ಈ ವಾರದ ಆರಂಭದಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಥಾಣೆ ಪೊಲೀಸ್​ ಇನ್ಸ್​ಪೆಕ್ಟರ್ ರಾಜ್​ಕುಮಾರ್​ ಕೊತಮಿರೆ ಮತ್ತು ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮ 2017 ರಲ್ಲಿ ಪರಮ್ ಬೀರ್ ಸಿಂಗ್​ ಅವರ ಸೂಚನೆ ಮೇರೆಗೆ ತಮಗೆ ಕಿರುಕುಳ ನೀಡಿದ್ದರು ಮತ್ತು ತಮ್ಮ ಎರಡು ಐಷಾರಾಮಿ ಕಾರುಗಳನ್ನು ಕಸಿದಿದ್ದರು ಎಂದು ರೌತ್ ಆರೋಪಿಸಿದ್ದಾರೆ.

    ಇದನ್ನೂ ಓದಿ: ಜೈಲಿನಲ್ಲಿ ಜನದಟ್ಟಣೆ : ಚಿಕ್ಕ ಅಪರಾಧಗಳಲ್ಲಿ ಬಂಧನ ಬೇಡ ಎಂದ ಸುಪ್ರೀಂ

    ಜಾಲನ್ ಮತ್ತು ರೌತ್ ಇಬ್ಬರೂ ದಕ್ಷಿಣ ಮುಂಬೈನಲ್ಲಿರುವ ನ್ಯಾಷನಲ್ ಇನ್​ವೆಸ್ಟಿಗೇಷನ್ ಏಜೆನ್ಸಿ(ಎನ್ಐಎ) ಕಛೇರಿಗೆ ನಿನ್ನೆ ಭೇಟಿ ನೀಡಿದ್ದಾರೆ. ಎನ್​ಐಎ ಅಧಿಕಾರಿಗಳು ಈ ಇಬ್ಬರು ವ್ಯಾಪಾರಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
    ಉದ್ಯಮಿ ಮುಖೇಶ್​ ಅಂಬಾನಿ ಮನೆ ಬಳಿಯ ಬಾಂಬ್​ ಸ್ಕೇರ್ ಮತ್ತು ತದನಂತರ ಸಂಭವಿಸಿದ ವ್ಯಾಪಾರಿ ಮನ್​ಸುಖ್ ಹಿರೇನ್ ಅವರ ಅನುಮಾನಾಸ್ಪದ ಸಾವಿನ ತನಿಖೆಯನ್ನು, ಅದಾಗಲೇ ಎನ್​ಐಎ ನಡೆಸುತ್ತಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್ ಇನ್ಸ್​​ಪೆಕ್ಟರ್​ ಸಚಿನ್ ವಾಜ್​ ಅವರನ್ನು ಅಮಾನತುಗೊಳಿಸಲಾಗಿದೆ. (ಏಜೆನ್ಸೀಸ್)

    ಕರೊನಾ ಸಮರದಲ್ಲಿ ಸಾಥ್​ ನೀಡಲಿದ್ದಾರೆ 8 ಲಕ್ಷ ಆಯುಷ್​​ ವೈದ್ಯರು

    ಗಿವ್‌ ಇಂಡಿಯಾದಿಂದ ಆಮ್ಲಜನಕ ಸಾಂದ್ರಕಗಳ ಕೊಡುಗೆ ; ಯಲಹಂಕದಲ್ಲಿ ಬೋಯಿಂಗ್​​ನ ಚಿಕಿತ್ಸಾ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts