More

    VIDEO| ವಿಷಾನಿಲ ಹರಡುತ್ತಿದ್ದಂತೆ ಜನರು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಸ್ಥಳೀಯ ನಿವಾಸಿ

    ವಿಶಾಖಪಟ್ಟಣಂ: ನನ್ನ ಚರ್ಮ ಸುಡುತ್ತಿತ್ತು. ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು. ನಮಗ್ಯಾರಿಗೂ ಸರಿಯಾಗಿ ಉಸಿರಾಡಲು ಆಗುತ್ತಿರಲಿಲ್ಲ… ಇದು ವಿಶಾಖಪಟ್ಟಣಂ ಜಿಲ್ಲೆಯ ಆರ್​.ಆರ್​. ವೆಂಕಟಪುರಂ ಜನ ಅನುಭವಿಸಿದಂತಹ ನರಕಯಾತನೆ.

    ಆರ್​. ಆರ್​. ವೆಂಕಟಪುರಂನ ಕೆಮಿಕಲ್​ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಿಂದಾಗಿ 10 ಮಂದಿ ಸಾವಿಗೀಡಾಗಿದ್ದು, 800ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಯನ್ನು ಸೇರಿದ್ದಾರೆ. ಲಾಕ್​ಡೌನ್​ ನಡುವೆ ಸಂಭವಿಸಿದ ಭೀಕರ ಘಟನೆಯನ್ನು ಸ್ಥಳೀಯ ಯುವಕನೊರ್ವ ವಿವರಿಸಿದ್ದಾರೆ.

    ಇದನ್ನೂ ಓದಿ: VIDEO-PHOTO| ಆಂಧ್ರ ಅನಿಲ ದುರಂತದ ಮನಕಲಕುವ ಚಿತ್ರಣ

    ವೆಂಕಟಪುರಂ ನಿವಾಸಿ ನವೀನ್​ ಮಾತಿನಂತೆ ಗ್ಯಾಸ್​ ಸೋರಿಕೆಯಿಂದಾಗಿ ತಡರಾತ್ರಿ 2 ಗಂಟೆಗೆ ಎದ್ದೆವು. ಸದ್ಯ ಬೇಸಿಗೆಯಾಗಿದ್ದರಿಂದ ಮನೆಯ ಎಲ್ಲ ಕಿಟಕಿಗಳು ತೆರೆದಿದ್ದವು. ಇದ್ದಕ್ಕಿದ್ದಂತೆ ನಮ್ಮ ಚರ್ಮಗಳು ಸುಡಲು ಆರಂಭಿಸಿತು. ಕಣ್ಣುಗಳಲ್ಲಿ ನೀರು ಸುರಿಯಿತು. ಉಸಿರಾಡಲು ಸಾಧ್ಯವಾಗಲಿಲ್ಲ. ಮನೆಯಿಂದ ಹೊರಗೆ ಬರಲು ಯತ್ನಿಸಿದೆವು. ಆದರೆ, ಗ್ಯಾಸ್​ ಎಲ್ಲೆಡೆ ಹರಡಿ ಹೊಗೆಯಂತೆ ಆವರಿಸಿತ್ತು. ನಮಗೆ ಯಾವುದೂ ಕೂಡ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಏನು ನಡೆಯುತ್ತಿದೆ ಎಂಬುದು ಅರ್ಥವಾಗಲಿಲ್ಲ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜನರು ಇದ್ದಕ್ಕಿದ್ದಂತೆ ಕೆಳಗೆ ಬೀಳಲು ಆರಂಭಿಸಿದರು. ಅದರಲ್ಲೂ ಮಕ್ಕಳು ಮತ್ತು ಹಿರಿಯರು ಪ್ರಜ್ಞೆಯಿಲ್ಲದೇ ಬಿದ್ದಿದ್ದರು ಎಂದು ತಿಳಿಸಿದ್ದಾರೆ.

    ಇನ್ನು ವೈರಲ್​ ಆಗಿರುವ ವಿಡಿಯೋಗಳಲ್ಲಿಯೂ ಸಹ ಮಕ್ಕಳು ಹಾಗೂ ವಯಸ್ಕರು ಪ್ರಜ್ಞೆಯಿಲ್ಲದೇ ಬೀಳುತ್ತಿರುವುದು ಕಂಡುಬಂದಿದೆ. ಸಹಾಯಕ್ಕಾಗಿ ಕೂಗಾಡುತ್ತಾ ಸ್ಥಳದಲ್ಲಿಯೇ ತಲೆ ತಿರುಗಿ ಬಿದ್ದಿದ್ದಾರೆ. ಕೆಲವರು ಬಿದ್ದ ಸ್ಥಳದಲ್ಲಿಯೇ ವಾಂತಿ ಮಾಡಿದ್ದಾರೆ. ಅನೇಕ ಮಂದಿ ಅಸ್ವಸ್ಥರಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ಇಡೀ ಗ್ರಾಮದ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

    ಇದನ್ನೂ ಓದಿ: ಆಂಧ್ರ ಅನಿಲ ದುರಂತ: ಸೋರಿಕೆಯಾಗಿರುವುದು ಸ್ಟೈರೀನ್ ಗ್ಯಾಸ್, ಇದರಿಂದಾಗುವ ದುಷ್ಪರಿಣಾಮಗಳೇನು?​

    ಅನಿಲ ಸೋರಿಕೆ ಸುಮಾರು 4 ಕಿ.ಮೀ ವ್ಯಾಪ್ತಿಗೆ ಹರಡಿದ್ದು, ಒಂದು ಮಗು ಸೇರಿ 10 ಮಂದಿ ಮೃತರಾಗಿದ್ದಾರೆ. ಇನ್ನು ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 11 ಗಂಟೆಗೆ ಆಂಧ್ರಪ್ರದೇಶ ಗೃಹಸಚಿವಾಲಯದ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಎಂಎ) ಸಿಬ್ಬಂದಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಸಂಪೂರ್ಣ ವರದಿ ಕೇಳಿದ್ದಾರೆ. ಹಾಗೇ ಸ್ಥಳದಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಯ ಬಗ್ಗೆಯೂ ವಿಚಾರಿಸಿದ್ದಾರೆ. ನಂತರ ಟ್ವೀಟ್ ಮಾಡಿರುವ ಮೋದಿಯವರು, ವಿಶಾಖಪಟ್ಟಣದಲ್ಲಿ ವಿಷಾನಿಲ ಸೋರಿಕೆಯಿಂದ ಕಷ್ಟಪಡುತ್ತಿರುವ ಎಲ್ಲರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    ಘಟನಾ ಸ್ಥಳಕ್ಕೆ ಸಿಎಂ ಜಗನ್​ ಭೇಟಿ
    ವಿಷಾನಿಲ ಸೋರಿಕೆಯಾದ ಸ್ಥಳಕ್ಕೆ ಆಂಧ್ರ ಸಿಎಂ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಅವರು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. (ಏಜೆನ್ಸೀಸ್​)

    ಇದನ್ನೂ ಓದಿ: ವಿಷಾನಿಲ ದುರಂತ ಸಂಭವಿಸಿದ ಬಹುರಾಷ್ಟ್ರೀಯ ಕಂಪನಿ ಎಲ್​ಜಿ ಪಾಲಿಮರ್ಸ್​ ಕಾರ್ಖಾನೆ ಇತಿಹಾಸ ಗೊತ್ತಾ?

    ವಿಷ ಅನಿಲ ಸೋರಿಕೆ ದುರಂತ; ಗೃಹಸಚಿವಾಲಯ, ಎನ್​ಡಿಎಂಎ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts