More

    ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​​ನ 2022 ಹಾಲ್​ ಆಫ್​ ಫೇಮ್​ ಸೇರಿದ BTS

    ನವದೆಹಲಿ: ಹಲವಾರು ಬಿಲ್​ಬೋರ್ಡ್​ ಸಂಗೀತ ಪ್ರಶಸ್ತಿಗಳು, ಏಷಿಯನ್​ ಸಂಗೀತ ಪ್ರಶಸ್ತಿ ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಗೆದ್ದಿರುವ ಕೆ-ಪಾಪ್​ ಗುಂಪು, ಬ್ಯಾಂಗ್​ಟನ್ ಸಾನ್ಯೋನ್​ಡಾನ್(ಬಿಟಿಎಸ್​), ಇದೀಗ ಗಿನ್ನೆಸ್ ವರ್ಲ್ಡ್​ ರೆಕಾರ್ಡ್ಸ್​ನ 2022 ರ ಹಾಲ್​ ಆಫ್​ ಫೇಮ್​ ಸೇರಿದೆ.

    ಸಂಗೀತಪ್ರಿಯರ ನೆಚ್ಚಿನ ‘ಸ್ಪಾಟಿಫೈ’ ಆ್ಯಪ್​ನಲ್ಲಿ ಅತಿಹೆಚ್ಚು ಸ್ಟ್ರೀಮ್​ ಆಗುವ ಮ್ಯೂಸಿಕ್​ ಬ್ಯಾಂಡ್​ ಆಗಿರುವುದೂ ಸೇರಿ, ದಕ್ಷಿಣ ಕೊರಿಯಾದ ಬಿಟಿಎಸ್​ ಸಂಗೀತ ತಂಡವು, ತನ್ನ 23 ಗಿನ್ನೆಸ್ ​ರೆಕಾರ್ಡ್​ಗಳೊಂದಿಗೆ ಈ ವಿಶಿಷ್ಟ ಗೌರವಕ್ಕೆ ಪಾತ್ರವಾಗಿದೆ. ಈ ಬಗ್ಗೆ ಗಿನ್ನೀಸ್​ ರೆಕಾರ್ಡ್ಸ್​ ಅಧಿಕೃತ ಪ್ರಕಟಣೆ ನೀಡಿದ್ದು, ಗಿನ್ನೆಸ್ ರೆಕಾರ್ಡ್​ ಸರ್ಟಿಫಿಕೇಟ್​ಗಳನ್ನು ಹಿಡಿದಿರುವ ಬಿಟಿಎಸ್​​ ತಂಡದ ಏಳೂ ಸದಸ್ಯರ ಚಿತ್ರವೊಂದನ್ನು ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ಭರವಸೆ ಕಳೆದುಕೊಳ್ಳಬೇಡಿ, ಧೈರ್ಯವಾಗಿರಿ : ‘ಆರ್ಮಿ’ಗೆ ಬಿಟಿಎಸ್​​ ಸಂದೇಶ !

    ಬುಲೆಟ್​ಪ್ರೂಫ್​ ಬಾಯ್ ಸ್ಕೌಟ್ಸ್​ ಎಂಬ ಅರ್ಥ ಬರುವ ಕೊರಿಯನ್ ನಾಮಧೇಯವುಳ್ಳ ಬಿಟಿಎಸ್​, ಬಿಯಾಂಡ್ ದ ಸೀನ್​ ಎಂಬ ಇಂಗ್ಲೀಷ್​ ಬ್ರ್ಯಾಂಡಿಂಗ್​ ಹೊಂದಿದೆ. ಈ ತಂಡದ ಯುವ ತಾರೆಗಳೆಂದರೆ ಆರ್​ಎಂ, ಜಿನ್, ಶುಗಾ, ಜೆ-ಹೋಪ್​​, ಜಿಮಿನ್, ವಿ ಮತ್ತು ಜಂಗ್​ಕೂಕ್. ತಮ್ಮ ಅಭಿಮಾನಿಗಳನ್ನು ‘ಆರ್ಮಿ’ ಎಂಬ ವಿಶಿಷ್ಟ ಹೆಸರಿನಿಂದ ಕರೆಯುವ ಈ ತಂಡದ ಸಂಗೀತಕ್ಕೆ ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ವಿಶೇಷವಾಗಿ ಮಕ್ಕಳು ಮತ್ತು ಯುವಜನರು ಆಕರ್ಷಿತರಾಗಿದ್ದಾರೆ.

    ಬಿಟಿಎಸ್​ನ ಯಾವ್ಯಾವ ರೆಕಾರ್ಡ್​ಗಳು ಗಿನ್ನೆಸ್ ಹಾಲ್​ ಆಫ್​ ಫೇಮ್​ ಸೇರುತ್ತಿದೆ ಎಂದು ಗಿನ್ನೆಸ್ ವರ್ಲ್ಡ್​ ರೆಕಾರ್ಡ್ಸ್​ ಕ್ಲಬ್​ನ ಕಮ್ಯುನಿಟಿ ಮ್ಯಾನೇಜರ್​​ ಯೂಟ್ಯೂಬ್ ವಿಡಿಯೋದಲ್ಲಿ ತಿಳಿಸಿದ್ದಾರೆ. ಬಿಟಿಎಸ್​​ ತಂಡದ ಗಿನ್ನೆಸ್ ದಾಖಲೆಗಳ ಬಗ್ಗೆ ಇದೇ ತಿಂಗಳು ಬಿಡುಗಡೆಯಾಗುತ್ತಿರುವ ಗಿನ್ನೆಸ್ ವರ್ಲ್ಡ್​ ರೆಕಾರ್ಡ್ಸ್​ ಬುಕ್​ ಆಫ್​ 2022 ರಲ್ಲಿ ಪ್ರಕಟಿಸಲಾಗಿದೆ ಎಂದಿದ್ದಾರೆ.

    ಬಿಟಿಎಸ್​ನ ಕೆಲವು ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ – ಇನ್​​ಸ್ಟಾಗ್ರಾಂನಲ್ಲಿ ಅತಿಹೆಚ್ಚು ಫಾಲೋ ಮಾಡಲ್ಪಟ್ಟಿರುವ ಸಂಗೀತ ತಂಡವಾಗಿರುವುದು ಮತ್ತು ನಾಲ್ಕು ಬಾರಿ ಅತಿಹೆಚ್ಚು ಟ್ವಿಟರ್​ ಎಂಗೇಜ್​ಮೆಂಟ್ಸ್​​ ಪಡೆದುಕೊಂಡಿರುವ ಸಂಗೀತ ತಂಡವಾಗಿರುವುದು ಸೇರಿದೆ. ಬಹುತೇಕ ಕೊರಿಯನ್​ ಗೀತೆಗಳನ್ನೇ ಮಾಡುವ ಈ ತಂಡ ಮೇ 2021 ರಲ್ಲಿ ಬಿಡುಗಡೆ ಮಾಡಿದ ಎರಡನೇ ಇಂಗ್ಲೀಷ್​ ಹಾಡು ‘ಬಟರ್​’ 5 ಗಿನ್ನೆಸ್ ದಾಖಲೆಗಳನ್ನು ಹೊಂದಿದೆ. ಇವುಗಳಲ್ಲಿ ಮ್ಯೂಸಿಕ್​ ವಿಡಿಯೋ ಒಂದರ ಯೂಟ್ಯೂಬ್​​ ಪ್ರೀಮಿಯರ್​ಗೆ ಅತಿಹೆಚ್ಚು ವೀಕ್ಷಕರನ್ನು ಪಡೆದ ದಾಖಲೆಯೂ ಒಂದು. (ಏಜೆನ್ಸೀಸ್)

    ಕಿಮ್​ ಶರ್ಮ – ಲಿಯಾಂಡರ್​ ಪೇಸ್ ಪ್ರೇಮಸಂಬಂಧ ಜಗಜ್ಜಾಹೀರು!

    ಬೆಳಗಾವಿಯಲ್ಲಿ ಕಾಂಗ್ರೆಸ್​​ಗೆ​ ಜನ ಉತ್ತರ ಕೊಟ್ಟಿದ್ದಾರೆ: ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts