More

    VIDEO| ಮುಂದುವರೆದ ಹೀಟ್​ವೇವ್​; ಬಿಸಿ ಮರಳಿನಲ್ಲಿ ಹಪ್ಪಳವನ್ನು ಹುರಿದ BSF​ ಯೋಧ

    ಬಿಕಾನೇರ್​: ದೇಶದಲ್ಲಿ ಚುನಾವಣೆಯ ಕಾವಿನೊಂದಿಗೆ ತಾಪಮಾನವು ಹೆಚ್ಚಳವಾಗುತ್ತಿದ್ದು, ಜನರು ಬಿಸಿಲಿನಿಂದ ಬಳಲಿ ಬೆಂಡಾಗಿದ್ದಾರೆ. ಉತ್ತರ ಭಾರತದ ಹಲವೆಡೆ ಬಿಸಿಲಿಗೆ ಜನ ತತ್ತರಿಸಿದ್ದು, ಪ್ರತಿನಿತ್ಯ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಉತ್ತರ ಭಾಗದ ಕೆಲವು ಭಾಗಗಳಿಗೆ ರೆಡ್​ ಅಲರ್ಟ್​ ಘೋಷಿಸಿದೆ.

    ದೆಹಲಿ, ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ಪ್ರತಿನಿತ್ಯ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಬಹುತೇಕ ಕಡೆಗಳಲ್ಲಿ ಶಾಲಾ-ಕಾಲೇಜು ಹಾಗೂ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಇದೀಗ ಗಡಿ ಭದ್ರತಾ ಪಡೆಯ ಯೋಧರೊಬ್ಬರು ರಾಜಸ್ಥಾನದಲ್ಲಿ ಬಿಸಿಲಿನ ಬೇಗೆ ತೋರಿಸಲು ಪಾಪಡ್ ಅನ್ನು ಮರಳುಗಾಡಿನಲ್ಲಿ ಹುರಿಯುವ ಮೂಲಕ ಸುದ್ದಿಯಾಗಿದ್ಧಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: ಗಂಡ-ಹೆಂಡತಿ ಜಗಳ ಮಗಳ ಕೊಲೆಯಲ್ಲಿ ಅಂತ್ಯ; ಶವದೊಂದಿಗೆ ಬೀದಿ ಸುತ್ತಿದ ತಾಯಿ

    ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ರಾಜಸ್ಥಾನದ ಬಿಕಾನೇರ್‌ನಲ್ಲಿ ತಾಪಮಾನವು 47 ° C ಇದೆ ಎಂದು ಕ್ಯಾಪ್ಷನ್​ ನೀಡಲಾಗಿದೆ. 48 ಸೆಕೆಂಡ್​ ಇರುವ ವಿಡಿಯೋದಲ್ಲಿ ಬಿಎಸ್​ಎಫ್​ ಯೋಧರೊಬ್ಬರು ಬಿಸಿಲಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಖದ ಸುತ್ತ ಬಟ್ಟೆ, ಸನ್‌ಗ್ಲಾಸ್ ಮತ್ತು ಟೋಪಿಯನ್ನು ಧರಿಸಿರುವುದನ್ನು ನೋಡಬಹುದಾಗಿದೆ.

    ತಮ್ಮ ಕೈಯಲ್ಲಿರುವ ಹಪ್ಪಳವನ್ನು ಮರಳಿನ ಮೇಲಿಡುವ ಯೋಧ ಬಿಸಿಲಿನ ಶಾಖೆಗೆ ಸಂಪೂರ್ಣವಾಗಿ ಹುರಿಯುವುವರೆಗೂ ಕಾಯುತ್ತಾರೆ. ಬಳಿಕ ಅದು ಸಂಪೂರ್ಣವಾಗಿ ಹುರಿಯಲಾಗಿದೆ ಎಂದು ತೋರಿಸಲು ಅದನ್ನು ಪುಡಿ ಮಾಡುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ವಿಡಿಯೋ ಶೇರ್​ ಮಾಡಿದ ಕೆಲವೇ ಗಂಟೆಗಳಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ನೆಟ್ಟಿಗರು ಯೋಧರಿಗೆ ಮೆಚ್ಚುಗೆ ಸೂಚಿಸಿ ಕಮೆಂಟ್​ ಹಾಕುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts