More

    ಹಾಲುಣಿಸಿದರೆ ಸೋಂಕು ಹರಡಲ್ಲ: ಸರ್ಕಾರಿ ಡೆಲಿವರಿ ಆಸ್ಪತ್ರೆಗೆ ಹೆಚ್ಚಾಗಿದೆ ಬೇಡಿಕೆ!

    ಬೆಂಗಳೂರು: ಕರೊನಾ ಕಾಣಿಸಿಕೊಂಡ ನಂತರ ರಾಜಧಾನಿಯಲ್ಲಿ ಖಾಸಗಿ ಆಸ್ಪತ್ರೆಗಳ ಹೆರಿಗೆ ವಾರ್ಡ್ ಮುಚ್ಚಿದ್ದು, ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಪ್ರತಿ ತಿಂಗಳು 800 ಹೆರಿಗೆಗಳು ಆಗುತ್ತಿದ್ದ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಈಗ 1,500ಕ್ಕೆ ಹೆರಿಗೆಗಳ ಸಂಖ್ಯೆ ಏರಿಕೆಯಾಗಿದೆ. ಗರ್ಭಿಣಿಯರಿಗೂ ಸೋಂಕು ತಗುಲುತ್ತಿದೆ. ಒಂದು ವೇಳೆ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದಲ್ಲಿ, ಆಸ್ಪತ್ರೆ ಸೀಲ್​ಡೌನ್ ಮಾಡುವುದಲ್ಲದೆ ಹೆರಿಗೆ ಮಾಡಿಸಿದ ಸಿಬ್ಬಂದಿ ಕೂಡ ಕ್ವಾರಂಟೈನ್ ಆಗಬೇಕು. ಹೀಗಾಗಿ, ಕೆಲವು ಖಾಸಗಿ ಆಸ್ಪತ್ರೆಗಳು ಹೆರಿಗೆ ವಾರ್ಡ್​ಗಳನ್ನೇ ಮುಚ್ಚಿವೆ.

    ಮೂರು ತಿಂಗಳಲ್ಲಿ 4 ಸಾವಿರ ಹೆರಿಗೆ: ಬಿಬಿಎಂಪಿಯ 26 ಹೆರಿಗೆ ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳು ಸರಾಸರಿ 800ರಿಂದ 900 ಹೆರಿಗೆ ಮಾಡಿಸಲಾಗುತ್ತಿತ್ತು. ಆದರೆ, ಏಪ್ರಿಲ್​ನಿಂದ ಹೆಚ್ಚು ಗರ್ಭಿಣಿಯರು ಆಗಮಿಸುತ್ತಿದ್ದು, ಪ್ರತಿ ತಿಂಗಳು 1,300- 1,500ಕ್ಕೆ ಹೆರಿಗೆ ಮಾಡಿಸಲಾಗುತ್ತಿದೆ. ಕಳೆದ 3 ತಿಂಗಳಲ್ಲಿ 4 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಲಾಗಿದೆ. ಪ್ರಸ್ತುತ 4 ಆಸ್ಪತ್ರೆ ನವೀಕರಣ ನಡೆಯುತ್ತಿದ್ದು, 22 ಆಸ್ಪತ್ರೆಗಳು ಹೆರಿಗೆ ಕಾರ್ಯ ನಿರ್ವಹಿಸುತ್ತಿವೆ. ಹೆರಿಗೆ ಪ್ರಮಾಣ ಹೆಚ್ಚಳವಾಗಿರುವುದು ಹೊಸ ದಾಖಲೆಯಾಗಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಾಲಿಕೆ ವೈದ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ‘ರಬ್ಬರ್ ಸ್ಟ್ಯಾಂಪ್ ಸಿಎಂ’ ಆಗಿದ್ದೆ ಕಾಂಗ್ರೆಸ್ ಜತೆಗಿನ ಮೈತ್ರಿ ಸರ್ಕಾರದಲ್ಲಿ: ಎಚ್​.ಡಿ.ಕುಮಾರಸ್ವಾಮಿ ಹೇಳಿಕೆ!

    ಶಂಕಿತರ ಹೆರಿಗೆಗೆ ಪ್ರತ್ಯೇಕ ಆಸ್ಪತ್ರೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕರೊನಾ ಶಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲು ಅನುಕೂಲವಾಗುವಂತೆ ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆಯನ್ನು ಮೀಸಲಿಡಲಾಗಿದೆ. ಕೆಲವೊಮ್ಮೆ ನೇರವಾಗಿ ಹೆರಿಗೆಗೆ ಹೋಗುವವರಿಗೆ ಸೋಂಕಿನ ಲಕ್ಷಣಗಳಿದ್ದರೆ, ಇಲ್ಲಿ ದಾಖಲಿಸಿಕೊಂಡು ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಅಗತ್ಯ ಪಿಪಿಇ ಕಿಟ್ ಧರಿಸಿ ಹೆರಿಗೆ ಮಾಡಿಸುತ್ತಾರೆ. ಗರ್ಭಿಣಿ ಅಥವಾ ಬಾಣಂತಿಯರಲ್ಲಿ ಸೋಂಕು ದೃಢಪಟ್ಟಲ್ಲಿ, ಚಿಕಿತ್ಸೆ ನೀಡಲು ಸಿದಟಛಿತೆ ಮಾಡಿಕೊಳ್ಳಲಾಗಿದೆ.

    ಇದನ್ನೂ ಓದಿ: ಸಹಾಯವಾಣಿಗೆ ಕರೆ ಬಂದರೆ ಕೂಡಲೇ ಸ್ಪಂದಿಸಿ- ಅಧಿಕಾರಿಗಳಿಗೆ ಸಿಎಂ ತಾಕೀತು

    ಪ್ರಸವದ 15 ದಿನ ಮೊದಲು ಟೆಸ್ಟ್ ಗರ್ಭಿಣಿಯರಿಗೆ ತಮ್ಮ ಪ್ರಸವದ ದಿನಾಂಕದ 15 ದಿನಗಳ ಮುನ್ನ ಗಂಟಲು ದ್ರವದ ಪರೀಕ್ಷೆ ನಡೆಸಲಾಗುತ್ತಿದೆ. ಅದರ ಆಧಾರಲ್ಲಿ ಯಾವ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಬೇಕು ಎಂದು ನಿರ್ಧರಿಸಲಾಗುತ್ತದೆ. ಸೋಂಕು ಇದ್ದರೆ ವಾಣಿವಿಲಾಸ ಆಸ್ಪತ್ರೆ, ಸೋಂಕಿನ ಲಕ್ಷಣಗಳಿದ್ದವರು ಮತ್ತು ಕರೊನಾ ಪರೀಕ್ಷೆ ವರದಿ ವಿಳಂಬವಾಗಿದ್ದರೆ ವಿಲ್ಸನ್ ಗಾರ್ಡನ್ ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಲ್ಲಿ ಹಾಗೂ ನೆಗೆಟಿವ್ ಬಂದಿದ್ದರೆ ಉಳಿದ ಸಾಮಾನ್ಯ ಆಸ್ಪತ್ರೆಗಳಲ್ಲಿ ಹೆರಿಗೆಗೆ ದಾಖಲಿಸಿಕೊಳ್ಳಲಾಗುತ್ತಿದೆ.

    ಇದನ್ನೂ ಓದಿ: ವಾಹನಗಳಲ್ಲಿ ಇನ್ನು ಹೆಚ್ಚುವರಿ ಟೈಯರ್​ ಅವಶ್ಯಕತೆ ಇಲ್ಲ!

    ಹಾಲುಣಿಸಿದರೆ ಸೋಂಕು ಹರಡಲ್ಲ: ಬಿಬಿಎಂಪಿಯ ಕೆಲವು ಹೆರಿಗೆ ಆಸ್ಪತ್ರೆಗಳಲ್ಲಿ ಹೆರಿಗೆಗೆ ದಾಖಲಿಸಿಕೊಳ್ಳುವ ವೇಳೆ ಗರ್ಭಿಣಿಯರಿಗೆ ಸೋಂಕು ಇರುವುದಿಲ್ಲ. ಹೆರಿಗೆಯಾದ ನಂತರ ಬಾಣಂತನದಲ್ಲಿ ಸೋಂಕು ದೃಢವಾಗುತ್ತದೆ. ಈ ಸಂದರ್ಭದಲ್ಲಿ ಅವರನ್ನು ಪ್ರತ್ಯೇಕ ನಿಗಾದಲ್ಲಿಟ್ಟು ಆರೈಕೆ ಮಾಡಲಾಗುತ್ತದೆ. ಸೋಂಕಿತ ತಾಯಿ ಹಾಲುಣಿಸುವುದರಿಂದ ಮಗುವಿಗೆ ಸೋಂಕು ಹರಡುವುದಿಲ್ಲ. ತಾಯಿ ಮುದ್ದಾಡುವುದು, ಉಸಿರಾಟ ಅಥವಾ ಕೆಮ್ಮು ಮಗುವಿಗೆ ತಾಗುವುದು, ಹ್ಯಾಂಡ್​ಗ್ಲೌಸ್ ಹಾಕದೆ ಮಗು ಮುಟ್ಟಿದಲ್ಲಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ವ್ಯತ್ಯಯ ತುಟ್ಟಿ ಭತ್ಯೆ 1 ವರ್ಷ ಮುಂದೂಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts