More

    ವಾಹನಗಳಲ್ಲಿ ಇನ್ನು ಹೆಚ್ಚುವರಿ ಟೈಯರ್​ ಅವಶ್ಯಕತೆ ಇಲ್ಲ!

    ನವದೆಹಲಿ: ವಾಹನಗಳಲ್ಲಿ ಹೆಚ್ಚುವರಿ ಟೈಯರ್​ಗಳ ಅವಶ್ಯಕತೆ ಇಲ್ಲ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು 1989ರ ಕೇಂದ್ರೀಯ ಮೋಟಾರು ವಾಹನ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಇತ್ತೀಚಿನ ಅಂತಾರಾಷ್ಟ್ರೀಯ ಮಾನದಂಡಗಳನ್ನು ಸರಿಗಟ್ಟುವ ಸಲುವಾಗಿ ಈ ಬದಲಾವಣೆಯನ್ನು ಸರ್ಕಾರ ಮಾಡಿದೆ.

    ಪರಿಷ್ಕೃತ ನಿಯಮದ ಪ್ರಕಾರ,
    1. ಟಿಪಿಎಂಎಸ್ ಅಳವಡಿಕೆ: ಗರಿಷ್ಠ 3.5 ಟನ್​ ತೂಕದ ವಾಹನಗಳಿಗೆ ಅನ್ವಯವಾಗುವಂತೆ ಟೈಯರ್ ಪ್ರೆಷರ್​ ಮಾನಿಟರಿಂಗ್ ಸಿಸ್ಟಮ್​(ಟಿಪಿಎಂಎಸ್​)ಗೆ ನಿಶ್ಚಿತ ಮಾನದಂಡ ನಿಗದಿ ಮಾಡಲಾಗಿದೆ. ಅದರ ಮೂಲಕ ಟೈಯರ್​ ಮೇಲಿನ ಒತ್ತಡ ಎಷ್ಟಿದೆ ಅಥವಾ ಅದರಲ್ಲೇನಾದರೂ ವ್ಯತ್ಯಾಸವಾದರೆ ಅದರ ಮಾಹಿತಿಯನ್ನು ಚಾಲನಾ ಸ್ಥಿತಿಯಲ್ಲೇ ಚಾಲಕನಿಗೆ ತಿಳಿಸುತ್ತದೆ. ಮುಂಚಿತವಾಗಿಯೇ ಚಾಲಕನನ್ನು ಎಚ್ಚರಿಸುವ ಮಾಹಿತಿ ಸಿಕ್ಕಾಗ ರಸ್ತೆ ಸುರಕ್ಷತೆಯನ್ನೂ ಖಾತರಿಗೊಳಿಸಿದಂತಾಗುತ್ತದೆ. ಈ ಸಿಸ್ಟಂ ಅನ್ನು ವಾಹನದಲ್ಲಿ ಅಳವಡಿಸಬೇಕು.

    ಇದನ್ನೂ ಓದಿ: ಬಿಜೆಪಿಗೆ ಸೇರಿ ಎಂದ ನೆಟ್ಟಿಗನಿಗೆ ಡ್ರೋನ್​ ಪ್ರತಾಪ್​ ನೀಡಿದ ಉತ್ತರ ಕೇಳಿದ್ರೆ ನಿಮ್ಗೆ ಶಾಕ್​ ಆಗ್ಬೋದು!

    2 ಟೈಯರ್ ರಿಪೇರ್ ಕಿಟ್​ ಬೇಕು: ಟೈಯರ್ ಪಂಕ್ಚರ್(ಟ್ಯೂಬ್​ಲೆಸ್ ಟೈಯರ್) ಆದ ಸಂದರ್ಭದಲ್ಲಿ ರಿಪೇರ್ ಕಿಟ್ ಬಳಸಬೇಕು. ಪಂಕ್ಚರ್ ಆಗಿರುವ ಜಾಗ ಗುರುತಿ ಸೀಲಂಟ್​ ಅದಕ್ಕೆ ಹುಯ್ಯಬೇಕು ಮತ್ತು ಅದರ ಜತೆಗೆ ಏರ್​ಸೀಲ್​ಗಳನ್ನು ಟೈಯರ್ ತೂತಾದ ಜಾಗಕ್ಕೆ ಬಳಸಬೇಕು. ಟಿಪಿಎಂಎಸ್​ ಮತ್ತು ಟೈಯರ್ ರಿಪೇರ್ ಕಿಟ್ ಇರುವಂತಹ ವಾಹನಗಳಲ್ಲಿ ಹೆಚ್ಚುವರಿ ಟೈಯರ್ ಅಗತ್ಯ ಇರುವುದಿಲ್ಲ. ಇದು ವಿದ್ಯುತ್​ ಚಾಲಿತ ವಾಹನಗಳಲ್ಲಿ ಬ್ಯಾಟರಿ ಕೂಡಿಸುವುದಕ್ಕೆ ಸ್ಥಳಾವಕಾಶ ಮಾಡಿಕೊಡುವ ಸಲುವಾಗಿ ಇರುವ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾದ ನಿಯಮವಾಗಿದೆ.

    3. ಸೇಫ್ಟಿ ಗ್ಲಾಸ್​: ಮುಂಭಾಗ ಮತ್ತು ಹಿಂಭಾಗದ ವಿಂಡ್ ಶೀಲ್ಡ್​ ಗಳಿಗೆ ಸೇಫ್ಟ್ ಗ್ಲಾಸ್ ಅಳವಡಿಸಬೇಕು. ಆದಾಗ್ಯೂ, ಎದುರು ಭಾಗದಿಂದ ಕಣ್ಣಿಗೆ ಹೊಡೆಯುವ ಲೈಟ್​ಗಳ ಬೆಳಕು ಹಾಯುವ ಪ್ರಮಾಣ ಈ ವಿಂಡ್ ಶೀಲ್ಡ್​ಗಳಲ್ಲಿ ಶೇಕಡ 70 ಮತ್ತು ಎರಡೂ ಬದಿಯ ಕಿಟಕಿಗಳ ಗಾಜಿನಲ್ಲಿ ಶೇಕಡ 50 ಇರಬೇಕು. ಶೀಲ್ಡ್​ಗೆ ಬಳಸುವ ಗಾಜು ಕೂಡ ಸುರಕ್ಷತೆಯನ್ನು ಹೊಂದಿರಬೇಕು.

    ಇದನ್ನೂ ಓದಿ: ಸೈಬರಾಬಾದ್​ ಪೊಲೀಸ್​ ಆಯುಕ್ತ ವಿಶ್ವನಾಥ ಸಜ್ಜನರ್​ರಿಂದ ಕನ್ನಡಿಗರಲ್ಲಿ ವಿಶೇಷ ಮನವಿ

    4. ಪ್ರಸ್ತುತ ದ್ವಿಚಕ್ರವಾಹನಗಳ ಸ್ಟ್ಯಾಂಡ್​ಗಳಿಗೆ ಯಾವುದೇ ನಿಬಂಧನೆ, ನಿಯಂತ್ರಣಗಳಿಲ್ಲ. ಮತ್ತು ಅವುಗಳು ಎಐಎಸ್ ಮಾನದಂಡಗಳಿಗೆ ಅನುಗುಣವಾಗಿರಬೇಕಾದ್ದಿಲ್ಲ.

    5. ಕೇಂದ್ರೀಯ ಮೋಟಾರು ವಾಹನ ನಿಯಮಗಳ ಪ್ರಕಾರ ದ್ವಿಚಕ್ರ ವಾಹನಗಳ ಬಾಹ್ಯ ರೂಪಕ್ಕೆ ಯಾವುದೇ ಹೊಸ ಮಾನದಂಡಗಳಿಲ್ಲ. ಆದಾಗ್ಯೂ, ದ್ವಿಚಕ್ರವಾಹನ ಸಂಚರಿಸುವಾಗ ಅಕಸ್ಮಾತ್ ಅಪಘಾತವಾದರೆ ಪಾದಚಾರಿಗೆ ಅಥವಾ ಸವಾರರಿಗೆ ವಾಹನದ ಭಾಗಗಳು ತಾಗಿ ಗಾಯವಾಗದಂತಹ ಮಾನದಂಡಗಳಿಗೆ ಅನುಗುಣವಾಗಿ ವಾಹನಗಳನ್ನು ಉತ್ಪಾದಿಸಬೇಕು. ಅಂದರೆ ಸಾಫ್ಟ್ ಮೆಟೀರಿಯಲ್​ಗಳನ್ನು ಬಳಸಬೇಕು.

    ಇದನ್ನೂ ಓದಿ: ದುಬೆ ಎನ್‌ಕೌಂಟರ್‌ ತನಿಖೆಗೆ ಜಡ್ಜ್‌ ನೇಮಕ: ಹಲವು ಸರ್ಕಾರಗಳು ಸಂಕಷ್ಟದಲ್ಲಿ!

    6. ದ್ವಿಚಕ್ರ ವಾಹನಗಳಲ್ಲಿ ಫೂಟ್ ರೆಸ್ಟ್​ ಅಗತ್ಯವಿದೆ. ಹಿಂಬದಿ ಸವಾರರಿಗೆ ಇದರ ಅವಶ್ಯಕತೆ ಇದ್ದು, ಇದನ್ನು ಪೂರೈಸಬೇಕು. ಇದಲ್ಲದೆ, ಲೈಟ್​ ವೈಟ್​ ಕಂಟೇನರ್​ ಹಿಂಬದಿ ಸವಾರರ ಹಿಂದೆ ಇರಿಸುವುದಾದರೆ ಅದಕ್ಕೆ ಆ ವಾಹನದ ಒಟ್ಟಾರೆ ತೂಕಕ್ಕೆ ಹೊಂದಿಕೊಂಡ ಮಾನದಂಡಗಳಿಗೆ ಅನುಗುಣವಾಗಿ ಇರಬೇಕು. (ಏಜೆನ್ಸೀಸ್)

    ಅಸ್ಸಾಂ ಪ್ರವಾಹ: ಸಂಕಷ್ಟದಲ್ಲಿವೆ 2,525 ಗ್ರಾಮಗಳು, ಮರಣ ಪ್ರಮಾಣ 89

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts