More

    ವ್ಯತ್ಯಯ ತುಟ್ಟಿ ಭತ್ಯೆ 1 ವರ್ಷ ಮುಂದೂಡಿಕೆ

    ಬೆಂಗಳೂರು: ರಾಜ್ಯದ ವಿವಿಧ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ವಿುಕರ 2020-21ನೇ ಹಣಕಾಸು ವರ್ಷದ ವ್ಯತ್ಯಯ ತುಟ್ಟಿ ಭತ್ಯೆಯನ್ನು (ವಿಡಿಎ) ಒಂದು ವರ್ಷ ಮುಂದೂಡಿ ಕಾರ್ವಿುಕ ಇಲಾಖೆ ಆದೇಶ ಹೊರಡಿಸಿದೆ. ಇದಕ್ಕೆ ಮಾಲೀಕರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದರೆ, ಕಾರ್ವಿುಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

    2020-21ರ ಸಾಲಿನ ಗ್ರಾಹಕ ಬೆಲೆ ಸೂಚ್ಯಂಕ 348 ಅಂಕ ಏರಿಕೆಯಾಗಿದ್ದು, ಪ್ರತಿ ಸೂಚ್ಯಂಕಕ್ಕೆ 4 ಪೈಸೆಯಂತೆ ಲೆಕ್ಕ ಹಾಕಿದಾಗ, ಮಾಸಿಕ 417.6 ರೂ.ನಂತೆ ವ್ಯತ್ಯಯ ತುಟ್ಟಿ ಭತ್ಯೆ ಏರಿಕೆಯಾಗುತ್ತದೆ. ಇದನ್ನು ಕಾರ್ವಿುಕರಿಗೆ ಏಪ್ರಿಲ್​ನಿಂದಲೇ ಪಾವತಿಸಬೇಕು. ಆದರೆ, ಕಾರ್ವಿುಕ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದರು. ಲಾಕ್​ಡೌನ್​ನಿಂದ ಕೆಲಸ ಮಾಡದಿದ್ದರೂ ಕಾರ್ವಿುಕರಿಗೆ ಪೂರ್ಣ ವೇತನ ಪಾವತಿಸಿದ್ದೇವೆ. ಪ್ರಸ್ತುತ ಬೇಡಿಕೆ ಇಲ್ಲದಿರುವ ಕಾರಣ ಉತ್ಪಾದನಾ ಕಾರ್ಯ ನಿಂತುಹೋಗಿದೆ.

    ಇದನ್ನೂ ಓದಿ: ‘ರಬ್ಬರ್ ಸ್ಟ್ಯಾಂಪ್ ಸಿಎಂ’ ಆಗಿದ್ದೆ ಕಾಂಗ್ರೆಸ್ ಜತೆಗಿನ ಮೈತ್ರಿ ಸರ್ಕಾರದಲ್ಲಿ: ಎಚ್​.ಡಿ.ಕುಮಾರಸ್ವಾಮಿ ಹೇಳಿಕೆ!

    ಹೀಗಾಗಿ ಕಾರ್ವಿುಕರಿಗೆ ವೇತನ ಪಾವತಿಸುವುದು ಕಷ್ಟವಾಗಿದ್ದು, ಸಾಲದ ಹಾಗೂ ಇತರೆ ಕಾರಣದಿಂದ ಆರ್ಥಿಕ ಸಂಕಷ್ಟ ಎದುರಾಗಿ ಮುಚ್ಚುವ ಪರಿಸ್ಥಿತಿ ಬಂದಿವೆ. ಹೀಗಾಗಿ 4 ತಿಂಗಳ ಅವಧಿಗೆ ವಿಡಿಎ ಮುಂದೂಡುವಂತೆ ಮನವಿ ಮಾಡಿದ್ದರು.

    ಇದನ್ನೂ ಓದಿ: ವಾಹನಗಳಲ್ಲಿ ಇನ್ನು ಹೆಚ್ಚುವರಿ ಟೈಯರ್​ ಅವಶ್ಯಕತೆ ಇಲ್ಲ!

    ಕಾರ್ವಿುಕ ಸಂಘಟನೆ ವಿರೋಧ: ರಾಜ್ಯ ಸರ್ಕಾರ ಕಾರ್ಖಾನೆ ಮಾಲೀಕರ ಲಾಬಿಗೆ ಮಣಿದು ಕಾರ್ವಿುಕರಿಗೆ ಅನ್ಯಾಯ ಮಾಡಿದೆ. ಮಾಸಿಕ 417.60 ರೂ.ನಂತೆ ಪ್ರತಿ ಕಾರ್ವಿುಕನಿಗೆ ಒಂದು ವರ್ಷದಲ್ಲಿ ಸಿಗಬೇಕಿದ್ದ 6255.43ರೂ.ಗಳನ್ನು ಮಾಲೀಕರಿಗೆ ಉಡುಗೊರೆಯಾಗಿ ನೀಡುತ್ತಿದೆ. ರಾಜ್ಯದ 35 ಲಕ್ಷ ಕಾರ್ವಿುಕರಿಗೆ 2,189.4 ಕೋಟಿ ರೂ. ನಷ್ಟವಾಗಲಿದೆ ಎಂದು ಸಿಪಿಎಂ, ಸಿಐಟಿಯು ಸೇರಿ ವಿವಿಧ ಕಾರ್ವಿುಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
    ರಾಜ್ಯದ ಶೇ.80 ಮಾಲೀಕರು ಲಾಕ್​ಡೌನ್ ಅವಧಿಯಲ್ಲಿ ಕಾರ್ವಿುಕರಿಗೆ ವೇತನ ನೀಡಿಲ್ಲ. ಶೇ.70 ಕಾರ್ವಿುಕರನ್ನು ಕೆಲಸದಿಂದ ತೆಗೆದಿರುವ ಮಾಲೀಕರಿಗೆ ಸರ್ಕಾರ ಕೋಟ್ಯಂತರ ರೂ. ಕೊಡುಗೆ ನೀಡುತ್ತಿದೆ ಎಂದು ಕಿಡಿಕಾರಿವೆ.

    ಸಹಾಯವಾಣಿಗೆ ಕರೆ ಬಂದರೆ ಕೂಡಲೇ ಸ್ಪಂದಿಸಿ- ಅಧಿಕಾರಿಗಳಿಗೆ ಸಿಎಂ ತಾಕೀತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts