More

    ಉಗ್ರರ ಗುಂಡೇಟಿಗೆ ಬಲಿಯಾದ ತಾತನ ಶವದ ಮೇಲೆ ಕುಳಿತು ಬಾಲಕನ ಕಣ್ಣೀರು: ಓರ್ವ ಯೋಧ ಹುತಾತ್ಮ

    ಸಪೋರ್: ಬುಧವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಸಪೋರ್​ ಪಟ್ಟಣದಲ್ಲಿ ಕೇಂದ್ರೀಯ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್​) ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯ ವೇಳೆ ಮೂರು ವರ್ಷದ ಬಾಲಕನೊಬ್ಬ ಬದುಕುಳಿದಿದ್ದು, ದುರಾದೃಷ್ಟವಶಾತ್​ ಬಾಲಕನ ತಾತಾ ಗುಂಡೇಟಿನಿಂದ ಪ್ರಾಣ ಬಿಟ್ಟಿದ್ದಾರೆ.

    ಗಡಿಯಲ್ಲಿ ಕರ್ತವ್ಯ ನಿರತರಾಗಿದ್ದ ಗಸ್ತು ತಂಡದ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಿಆರ್​ಪಿಎಫ್​ ಯೋಧ ಹುತಾತ್ಮರಾಗಿದ್ದಾರೆ. ಗುಂಡಿನ ದಾಳಿಗೆ ಸ್ಥಳೀಯ ನಾಗರಿಕರೊಬ್ಬರು ಬಲಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರ ಮೃತದೇಹದ ಮೇಲೆ ಅವರ ಮೊಮ್ಮಗ ಕುಳಿತು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿದೆ.

    ಇದನ್ನೂ ಓದಿ: ಅತ್ಯಾಚಾರ, ಲೈಂಗಿಕ ಕಿರುಕುಳ ಸಂತ್ರಸ್ತರ ಬಾಯಿ ಮುಚ್ಚಿಸಲು 143 ಕೋಟಿ ರೂ. ಕೊಟ್ಟ ಚಿತ್ರ ನಿರ್ಮಾಪಕ

    ಬಾಲಕನನ್ನು ಪೊಲೀಸರು ಎತ್ತಿಕೊಂಡಾಗ ಆತ ತುಂಬಾ ಭಯಭೀತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಫೋಟೋವನ್ನು ಕಾಶ್ಮೀರ ಪೊಲೀಸರು ಟ್ವೀಟ್​ ಮಾಡಿದ್ದು, ಪೊಲೀಸ್​ ಸಿಬ್ಬಂದಿಯೊಬ್ಬರು ಮಗುವನ್ನು ಸುರಕ್ಷಿತವಾಗಿ ಎತ್ತಿಕೊಂಡಿರುವುದನ್ನು ಕಾಣಬಹುದಾಗಿದೆ.

    ಮಗು ತನ್ನ ತಾತನೊಂದಿಗೆ ಮಾರುತಿ ಕಾರಿನಲ್ಲಿ ಶ್ರೀನಗರದಿಂದ ಹಂದ್ವಾರಾಗೆ ತೆರಳುತ್ತಿತ್ತು. ಈ ವೇಳೆ ಸಪೋರ್​ ಪಟ್ಟಣದಲ್ಲಿ ಉಗ್ರರು ಹಾಗೂ ಸೇನೆ ನಡುವೆ ಗುಂಡಿನ ದಾಳಿ ನಡೆದಿದ್ದು, ಬಾಲಕನ ತಾತನಿಗೆ ಗುಂಡು ತಗುಲಿ ಸ್ಥಳದಲ್ಲೇ ಅಸುನೀಗಿದ್ದಾರೆ. ಸಿಆರ್​ಪಿಎಫ್​ ಯೋಧರು ಸಹ ಉಗ್ರರ ವಿರುದ್ಧ ಗುಂಡಿನ ದಾಳಿ ನಡೆಸಿದಾದರೂ ಉಗ್ರರು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ಜಮ್ಮುವಿನ ಬಳಿ ಉಗ್ರರ ದಾಳಿಗೆ ಓರ್ವ ಯೋಧ ಹುತಾತ್ಮ- ಇಬ್ಬರ ಸ್ಥಿತಿ ಗಂಭೀರ

    ಕಳೆದ ವಾರ ಆರು ವರ್ಷದ ಮಗು ಉಗ್ರರ ದಾಳಿಯ ಸಂದರ್ಭದಲ್ಲಿ ಅನಂತ್​ನಾಗ್​ನಲ್ಲಿ ಮೃತಪಟ್ಟಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಮನಕಲಕುವ ನಡೆದಿರುವುದು ಉಗ್ರರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. (ಏಜೆನ್ಸೀಸ್​)

    188 ವರ್ಷದ ‘ಅಜ್ಜ’ನ ಸ್ನಾನ ನೋಡಿ… ದಾಖಲೆ ಪುಟದಲ್ಲಿ ದೀರ್ಘಾಯಸ್ಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts