More

    ಐಸ್​ ಕ್ರೀಮ್​ನಲ್ಲಿ ಮಹಾಮಾರಿ ಕರೊನಾ ವೈರಸ್​ ಪತ್ತೆ: ತಿಂದವರ ಹಿಂದೆ ಬಿದ್ದ ಚೀನಾ!

    ಬೀಜಿಂಗ್​: ಚೀನಾದ ಐಸ್​ ಕ್ರೀಮ್​ಗಳಲ್ಲಿ ಕರೊನಾ ಪಾಸಿಟಿವ್​ ವರದಿಯಾಗಿರುವುದು ಅಲ್ಲಿನ ಆರೋಗ್ಯ ಅಧಿಕಾರಿಗಳ ನಿದ್ದೆಗೆಸಿದ್ದು, ಸೋಂಕಿನ ಅಪಾಯದಲ್ಲಿರುವ ಜನರನ್ನು ಪತ್ತೆಹಚ್ಚಲು ತಿಳಿಯದಂತಾಗದೆ ಕಂಗಾಲಾಗಿದ್ದಾರೆ.

    ಚೀನಾದ ಈಶಾನ್ಯ ಭಾಗದ ತೈಂಜಿನ್​ ಮುನ್ಸಿಪಾಲಿಟಿಯಲ್ಲಿ ಸ್ಥಳೀಯವಾಗಿ ತಯಾರು ಮಾಡುವ ಐಸ್​ಕ್ರೀಮ್​ನ ಮೂರು ಸ್ಯಾಂಪಲ್​ಗಳಲ್ಲಿ ಮಹಾಮಾರಿ ಕರೊನಾ ಪತ್ತೆಯಾಗಿದೆ. ಸುಮಾರು 4,836 ಬಾಕ್ಸ್​ ಅನ್ನು ಕಲುಷಿತ ಎಂದು ತೈಂಜಿನ್​ ದಾಕಿಯೋದಾವೋ ಫುಡ್​ ಕಂಪನಿ ಗುರುತಿಸಿದ್ದು, ಸದ್ಯ 2,089 ಬಾಕ್ಸ್​ಗಳನ್ನು ದಾಸ್ತನುವಿನಲ್ಲಿ ಸೀಲ್​ ಮಾಡಲಾಗಿದೆ.

    ಇದನ್ನೂ ಓದಿರಿ: ಪತಿ ಕಾಲ್​ಬಾಯ್ ರಹಸ್ಯ, ಲ್ಯಾಪ್​ಟಾಪ್​ನಲ್ಲಿ ಬಯಲು; ಪರಸ್ತ್ರೀಯರಿಗೆ ನೂರಾರು ಬೆತ್ತಲೆ ಫೋಟೋ ರವಾನೆ!

    ಉಳಿದ 1,812 ಬಾಕ್ಸ್​ಗಳು ಈಗಾಗಲೇ ಇತರೆ ಪ್ರಾಂತ್ಯಗಳಿಗೆ ತಲುಪಿದ್ದು, ಸುಮಾರು 935 ಸ್ಥಳೀಯ ಮಾರುಕಟ್ಟೆಗಳಿಗೆ ಪ್ರವೇಶ ನೀಡಿವೆ. ಆದರೆ, 65 ಬಾಕ್ಸ್​ ಮಾತ್ರ ಮಾರಾಟವಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಸುಮಾರು 1,662 ಕಂಪನಿ ಉದ್ಯೋಗಿಗಳನ್ನು ಸ್ವಯಂ ಪ್ರತ್ಯೇಕವಾಗಿರಲು ಮತ್ತು ಪರೀಕ್ಷೆಗೆ ಒಳಗಾಗಲು ನಿನ್ನೆಯಷ್ಟೇ ಸೂಚಿಸಲಾಗಿದೆ. ಯೂನಿವರ್ಸಿಟಿ ಆಫ್​ ಲೀಡ್ಸ್​ ಮೂಲದ ವೈರಾಲಜಿಸ್ಟ್​ ಡಾ. ಸ್ಟೆಫನ್​ ಗ್ರಿಫ್ಫಿನ್​ ಮಾತನಾಡಿ, ಐಸ್ ಕ್ರೀಂನ ಪಾಸಿಟಿವ್​ ಪರೀಕ್ಷೆಯು ಮಾನವ ಸಂಪರ್ಕದಿಂದ ಹುಟ್ಟಿಕೊಂಡಿದೆ. ಐಸ್​ ಕ್ರೀಮ್​ ಉತ್ಪಾದನಾ ಘಟಕಗಳಲ್ಲಿನ ಸಮಸ್ಯೆಯ ಪರಿಣಾಮವಾಗಿದೆ ಮತ್ತು ಕಾರ್ಖಾನೆಯಲ್ಲಿನ ನೈರ್ಮಲ್ಯದ ಫಲಿತಾಂಶವಾಗಿದೆ ಎಂದು ಎಚ್ಚರಿಸಿದ್ದಾರೆ.

    ಐಸ್​ಕ್ರಿಮ್​ಗಳನ್ನು ಕೊಬ್ಬಿನಿಂದ ತಯಾರಿಸಿ ಶೀತ ತಾಪಮಾನ ಸಂಗ್ರಹಿಸಿ ಇಡುವುದುರಿಂದ ವೈರಸ್​ ಸುಲಭವಾಗಿ ಬದುಕುಳಿಯುತ್ತದೆ. ನಾವು ತಿನ್ನುವ ಪ್ರತಿ ಐಸ್​ ಕ್ರೀಮ್ ತುಣುಕು ಇದ್ದಕ್ಕಿದ್ದಂತೆ ಕರೊನಾ ವೈರಸ್​ನಿಂದ ಕಲುಷಿತವಾಗಲಿದೆ ಎಂದು ನಾವು ಭಯಪಡುವ ಅಗತ್ಯವಿಲ್ಲ ಎಂತಲೂ ಗ್ರಿಫ್ಫಿನ್​ ಧೈರ್ಯ ತುಂಬಿದ್ದಾರೆ.

    ಇದನ್ನೂ ಓದಿರಿ: ವೈರಲ್​ ಆಗಿರೋ ಯುವತಿಯ ಫೋಟೋ ಬಗೆಗಿನ ಸಂದೇಶವನ್ನು ನಂಬಬೇಡಿ: ಇಲ್ಲಿದೆ ನೋಡಿ ಸತ್ಯಾಂಶ!

    ಇನ್ನು ಚೀನಾದಲ್ಲಿ ಎರಡನೇ ಕರೊನಾ ವೈರಸ್​ ಅಲೆಯ ಭೀತಿ ಹೆಚ್ಚಾಗಿದ್ದು, ಹೈಅಲರ್ಟ್​ ಘೋಷಿಸಲಾಗಿದೆ. ರೋಗಿಗಳನ್ನು ನಿಭಾಯಿಸಲು ಕ್ವಾರಂಟೈನ್​ ಕೇಂದ್ರಗಳನ್ನು ಹೊಸದಾಗಿ ನಿರ್ಮಿಸಲು ಚೀನಾ ಸರ್ಕಾರ ಮುಂದಾಗಿದೆ. (ಏಜೆನ್ಸೀಸ್​)

    11 ಯುವತಿಯರನ್ನು ಮದ್ವೆಯಾಗಿ ವಂಚಿಸಿದ 23ರ ಯುವಕ: ಈತನ ಕಾಮಪುರಾಣ ಕೇಳಿ ಬೆಚ್ಚಿದ ಪೊಲೀಸರು!

    ಈರುಳ್ಳಿ ಉಪ್ಪಿನಕಾಯಿ ಹೇಗೆ ಮಾಡೋದು ಗೊತ್ತಾ? ಸಲ್ಮಾನ್​ ಖಾನ್​ ಇಲ್ಲಿ ತೋರಿಸಿಕೊಟ್ಟಿದ್ದಾರೆ ನೋಡಿ…

    ಜಗತ್ತಿನ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts