More

  ಇದು ವಿಶ್ವದ ಹಾಟೆಸ್ಟ್​ ಐಸ್​ ಕ್ರೀಮ್​! ಈ ಒಂದು ಷರತ್ತಿಗೆ ಸಹಿ ಹಾಕಿದ್ರೆ ಮಾತ್ರ ಇದನ್ನು ತಿನ್ನಬಹುದು

  ನವದೆಹಲಿ: ಐಸ್​ ಕ್ರೀಮ್​​ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರಿಗೂ ಐಸ್​ಕ್ರೀಮ್​ ರುಚಿಯಂದರೆ ಬಲು ಇಷ್ಟ. ಮಕ್ಕಳಿಗಂತೂ ಪಂಚ ಪ್ರಾಣ ಎಂದರೆ ತಪ್ಪಾಗಲಾರದು. ಐಸ್​ಕ್ರೀಮ್​ ಪ್ರಮುಖ ಅಂಶವೆಂದರೆ ಸಿಹಿ ಮತ್ತು ಅದರ ಕೂಲ್​ನೆಸ್​. ಆದರೆ, ಮಸಾಲೆಯುಕ್ತ ಐಸ್ ಕ್ರೀಮ್ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಕೇಳಿಲ್ಲ ಎಂದಾದರೆ, ನಾವು ಹೇಳುತ್ತೇವೆ ಕೇಳಿ. ಇದರ ಹೆಸರು “ರೆಸ್ಪಿರೊ ಡೆಲ್ ಡಯಾವೊಲೊ” ಅಥವಾ “ಡೆವಿಲ್ಸ್ ಬ್ರೀತ್”.

  ಡೆವಿಲ್ಸ್ ಬ್ರೀತ್ ಐಸ್ ಕ್ರೀಮ್ ಅನ್ನು ವಿಶ್ವದ ಅತ್ಯಂತ ಖಾರವಾದ ಮೆಣಸಿನಕಾಯಿಗಳಲ್ಲಿ ಒಂದಾದ ಕೆರೊಲಿನಾ ರೀಪರ್ ಬಳಸಿ ತಯಾರಿಸಲಾಗುತ್ತದೆ. ಈ ಐಸ್ ಕ್ರೀಮ್​ ತಯಾರಕರು ಯಾರೆಂದರೆ, ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿರುವ ಆಲ್ಡ್‌ವಿಚ್ ಕೆಫೆ ಮತ್ತು ಐಸ್ ಕ್ರೀಮ್ ಪಾರ್ಲರ್.

  ಈ ಐಸ್ ಕ್ರೀಮ್​ನಲ್ಲಿರುವ ವಿಪರೀತ ಮಸಾಲೆ ಕಾರಣದಿಂದಾಗಿ ಇದನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಐಸ್ ಕ್ರೀಮ್ ತಿಂದ ನಂತರ ಏನಾದರೂ ಸಂಭವಿಸಿದರೆ ಅದಕ್ಕೆ ತಿಂದವರೇ ಜವಬ್ದಾರರು ಹೊರತು, ಕಂಪನಿಯಲ್ಲ. ಹೀಗಂತ ಐಸ್​ ಕ್ರೀಮ್​ ತಿನ್ನುವ ಮೊದಲೇ ಪತ್ರವೊಂದರ ಮೇಲೆ ಹೇಳಿಕೆ ಬರೆದು ಅದಕ್ಕೆ ಸಹಿ ಹಾಕಬೇಕು.

  ಇನ್ನು ರೆಸ್ಪಿರೊ ಡೆಲ್ ಡಯಾವೊಲೊ ಐಸ್ ಕ್ರೀಮ್​ನ ಪಾಕವಿಧಾನವೇ ತುಂಬಾ ರಹಸ್ಯವಾಗಿದೆ. 2018ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಈ ಐಸ್ ಕ್ರೀಮ್ ಸ್ಕೂಪ್ ಬೆಲೆ 235 ರೂ.ವರೆಗೆ ಇದೆ. ಐಸ್ ಕ್ರೀಮ್​ ಅನ್ನು ಪ್ರಯತ್ನಿಸಿದ ಕೆಲವರು ಮಸಾಲೆಯುಕ್ತ ಆಹಾರಗಳ ಅಭ್ಯಾಸ ಇಲ್ಲದವರು ಈ ಐಸ್ ಕ್ರೀಮ್​ ಬಳಿ ಹೋಗದಿರುವುದೇ ಉತ್ತಮ ಎಂದು ಹೇಳುತ್ತಾರೆ.

  ಇನ್ನು ಈ ಐಸ್ ಕ್ರೀಂ ತಿಂದ ಕೆಲವರು ಮೂರ್ಛೆ ಹೋಗಿ ಭಯಭೀತರಾಗಿದ್ದರು ಎನ್ನಲಾಗಿದೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ಐಸ್ ಕ್ರೀಮ್ ಎಂದು ಬಣ್ಣಿಸಲಾಗಿದೆ. (ಏಜೆನ್ಸೀಸ್​)

  ನಾವಂತೂ ಹಣ ಹಾಕಲ್ಲ! ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದ್ರಷ್ಟೇ ಹಣ ಅಂದ್ರು ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು

  ಹಳ್ಳಿ ಮೇಷ್ಟ್ರು ಚಿತ್ರದ ಬಾಲ ಕಲಾವಿದ ಇಂದು ಲಕ್ಷ್ಮೀ ನಿವಾಸ ಧಾರಾವಾಹಿ ನಟ! ಸಿಲ್ಕ್ ಸ್ಮಿತಾ ಜತೆ ನಟಿಸಿದ್ದ ಈತ ಈಗ ಹೇಗಿದ್ದಾರೆ ನೋಡಿ…  

  See also  ನಿಮಗಾದ ನೋವಿಗೆ ಕ್ಷಮೆಯಾಚಿಸುತ್ತೇನೆ: ಯುವ ಪತ್ನಿ ಶ್ರೀದೇವಿ ಭೈರಪ್ಪ ಭಾವುಕ, ಏನಾಯ್ತು ಡಿವೋರ್ಸ್​ ಕೇಸ್​?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts