More

    ಲಸಿಕೀಕರಣದಲ್ಲಿ ಕರ್ನಾಟಕ ಮಾತ್ರವಲ್ಲ, ಭಾರತದ್ದೂ ದಾಖಲೆ; ಲಸಿಕಾ ಅಭಿಯಾನದ 228ನೇ ದಿನ ಇದುವರೆಗಿನ ಗರಿಷ್ಠ ಡೋಸ್​

    ನವದೆಹಲಿ: ಕೋವಿಡ್​-19 ತಡೆಗಟ್ಟುವ ಹಾಗೂ ಕರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಬೃಹತ್ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ಮಾತ್ರವಲ್ಲದೆ ಭಾರತವೂ ದಾಖಲೆ ಮಾಡಿದೆ. ಕರೊನಾ ವ್ಯಾಕ್ಸಿನೇಷನ್​ನಲ್ಲಿ ಕರ್ನಾಟಕ ಹಾಗೂ ಭಾರತ ಎರಡೂ ಇದುವರೆಗಿನಕ್ಕಿಂತ ಇಂದು ಗರಿಷ್ಠ ಪ್ರಮಾಣ ತಲುಪಿವೆ.

    ಕರೊನಾ ಲಸಿಕೀಕರಣದಲ್ಲಿ ಕರ್ನಾಟಕದಲ್ಲಿ ಮಾಸಿಕ ಗರಿಷ್ಠ ದಾಖಲೆ ಆಗಿದ್ದರೆ, ದೇಶದಲ್ಲಿ ದೈನಂದಿನ ಗರಿಷ್ಠ ದಾಖಲೆ ಆಗಿದೆ. ಆಗಸ್ಟ್​ನಲ್ಲಿ ಕರ್ನಾಟಕದಲ್ಲಿ 1.17 ಕೋಟಿ ಡೋಸ್​ ಲಸಿಕೆ ನೀಡಲಾಗಿದ್ದು, ಇದು ಲಸಿಕೆ ಅಭಿಯಾನ ಆರಂಭವಾದ ಬಳಿಕ ಒಂದು ತಿಂಗಳಿನಲ್ಲಿ ನಡೆದ ಅತ್ಯಧಿಕ ಲಸಿಕೆ ನೀಡಿಕೆ ಆಗಿದೆ.

    ಇದನ್ನೂ ಓದಿ: ಶೇ.100 ಲಸಿಕೀಕರಣದತ್ತ ಕರ್ನಾಟಕ; ಆಗಸ್ಟ್‌ನಲ್ಲಿ ದಾಖಲೆ ಪ್ರಮಾಣದ ವ್ಯಾಕ್ಸಿನ್ ನೀಡಿಕೆ!

    ಇನ್ನು ಬೃಹತ್ ಲಸಿಕಾ ಅಭಿಯಾನ ಆರಂಭವಾಗಿ 227 ದಿನಗಳು ಉರುಳಿದ್ದ, 228ನೇ ದಿನವಾದ ಇಂದು ಭಾರತದಲ್ಲಿ ಇದುವರೆಗಿನಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಇಂದು ರಾತ್ರಿ 7ರ ವರೆಗೆ ಒಟ್ಟು 1.04 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಇದು ಈ ವರೆಗಿನ ದೈನಂದಿನ ದಾಖಲೆ ಆಗಿದೆ. ಇದುವರೆಗೆ ದೇಶದಲ್ಲಿ ಒಟ್ಟು 65,12,14,767 ಡೋಸ್ ಲಸಿಕೆ ನೀಡಲಾಗಿದ್ದು, ದೇಶದಲ್ಲಿ 50 ಕೋಟಿಗೂ ಅಧಿಕ ಮಂದಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿದಂತಾಗಿದೆ.

    ಎರಡನೇ ಮದ್ವೆಯಾಗಿ ಹೊಸ ಜೀವನದ ಕನಸು ಕಂಡಿದ್ದವಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ಯಾಗ್ ಕದ್ದು ಜೈಲುಪಾಲಾದ್ಲು…

    ಕಾರಿನಲ್ಲಿದ್ದ ದೇವರ ಸ್ಟಿಕ್ಕರ್ ತೆಗೆಯುವಂತೆ ಸೂಚಿಸಿದ ಪೊಲೀಸರು; ಪೊಲೀಸರ ವಿರುದ್ಧ ಹಿಂದು ಸಂಘಟನೆ ಕಾರ್ಯಕರ್ತರ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts