More

    ಹೆಚ್ಚುತ್ತಿರುವ ರೂಪಾಂತರಿ ಕರೊನಾ ಮಾರಿ: ಇಂಗ್ಲೆಂಡ್​ನಲ್ಲಿ ಸಂಪೂರ್ಣ ಲಾಕ್​ಡೌನ್​ ಘೋಷಣೆ..!

    ಲಂಡನ್​: ರೂಪಾಂತರಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಇಂಗ್ಲೆಂಡ್​ನಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್​ಡೌನ್ ಘೋಷಣೆ ಮಾಡಿದ್ದಾರೆ. ಸೋಂಕಿನ ಸರಪಳಿಯನ್ನು ಕಡಿತಗೊಳಿಸುವ ಉದ್ದೇಶದಿಂದ ಫೆಬ್ರವರಿ ಮಧ್ಯದವರೆಗೆ ಲಾಕ್​ಡೌನ್​ ಮುಂದುವರಿಯುವ ಸಾಧ್ಯತೆ ಇದೆ ಎಂದು ಜಾನ್ಸನ್ ಸೋಮವಾರ​ ತಿಳಿಸಿದ್ದಾರೆ.

    ಇಂಗ್ಲೆಂಡ್​ನಲ್ಲಿ ಸುಮಾರು 44 ಮಿಲಿಯನ್​ ಜನರಿದ್ದು, ಈಗಾಗಲೇ ಕಠಿಣ ನಿರ್ಬಂಧಗಳ ಅಡಿಯಲ್ಲಿ ಜೀವಿಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಬ್ರಿಟನ್​, ಕರೊನಾ ವೈರಸ್​ನ ವಿಶ್ವದ ಕೆಟ್ಟ ಮರಣ ಪ್ರಮಾಣವನ್ನು ಹೊಂದಿದೆ. ಪಾಸಿಟಿವ್​ ಪ್ರಕರಣಗಳು ತಡೆಯುವಲ್ಲಿ ವಿಫಲವಾಗಿದ್ದು, ರೂಪಾಂತರಿ ಕರೊನಾ ವೈರಸ್​ ಮೇಲೆ ಆರೋಪ ಮಾಡುವ ಕೆಲಸ ನಡೆಯುತ್ತಿದೆ ಎಂದು ಹೇಳಲಾಗಿದೆ.

    ಇದನ್ನೂ ಓದಿರಿ: ಸಂಚಾರ ಪೊಲೀಸರ ಕಿರಿಕಿರಿ: ದಂಡ ವಸೂಲಿ ಹೆಸರಲ್ಲಿ ಕಿರುಕುಳ, ಕಾನೂನು ಅರಿವಿನ ಕೊರತೆ

    ಸೋಮವಾರ ವರ್ಚುವಲ್​ ಸಭೆಯಲ್ಲಿ ಮಾತನಾಡಿದ ಜಾನ್ಸನ್​, ಕರೊನಾ ಸೋಂಕಿನಿಂದಾಗಿ ಸುಮಾರು 27,000 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಕಳೆದ ವರ್ಷ ಏಪ್ರಿಲ್​ನಲ್ಲಿ ಕಾಣಿಸಿಕೊಂಡ ಮೊದಲನೇ ಅಲೆಯಿಂದಾಗಿ ಶೇ. 40ಕ್ಕೂ ಹೆಚ್ಚು ಮಂದಿ ಅತ್ಯುಚ್ಛ್ರಾಯ ಸ್ಥಿತಿಗೆ ತಲುಪಿದ್ದಾರೆ. ಕಳೆದ ಮಂಗಳವಾರ 80,000ಕ್ಕೂ ಹೆಚ್ಚು ಮಂದಿಗೆ ಕೇವಲ 24 ಗಂಟೆಗಳಲ್ಲಿ ಪಾಸಿಟಿವ್​ ವರದಿಯಾಗಿತ್ತು ಎಂದು ಮಾಹಿತಿ ನೀಡಿದರು.

    ಈಗಾಗಲೇ ಅನೇಕ ದೇಶಗಳು ಅತಿ ಕಠಿಣವಾದ ನಿರ್ಧಾರಗಳನ್ನು ಜಾರಿ ಮಾಡಿವೆ. ರೂಪಾಂತರಿ ಕರೊನಾ ವೈರಸ್​ ಅನ್ನು ನಿಯಂತ್ರಣಕ್ಕೆ ತರಲು ಲಸಿಕೆ ಇದ್ದರೂ ನಾವು ಕೂಡ ಇಂಥದ್ದೇ ನಿರ್ಧಾರವನ್ನು ಅನುಸರಿಸಬೇಕಾಗುತ್ತದೆ ಎಂದು ಲಾಕ್​ಡೌನ್​ ಘೋಷಣೆ ಮಾಡಿದರು. ನಾಳೆಯಿಂದಲೇ ಇಂಗ್ಲೆಂಡ್ ಮತ್ತೊಮ್ಮೆ​ ಸಂಪೂರ್ಣ ಸ್ತಬ್ಧವಾಗಲಿದೆ.

    ಇದನ್ನೂ ಓದಿರಿ: ಅಮ್ಮ ಮಗಳನ್ನು ರಸ್ತೆಯಲ್ಲೇ ರೇಪ್​ ಮಾಡಿದ ಕಾಮುಕರು! ರಕ್ಷಿಸುವುದನ್ನು ಬಿಟ್ಟು ವಿಡಿಯೋ ಮಾಡಿ ಪೋಸ್ಟ್ ಮಾಡಿದ ಸ್ಥಳೀಯ!

    ಇಂಗ್ಲೆಂಡ್​ ಖಂಡಿತವಾಗಿ ರಾಷ್ಟ್ರೀಯ ಲಾಕ್​ಡೌನ್ ಮೊರೆ ಹೋಗಬೇಕಿದೆ. ಕಳೆದ ವರ್ಷ ಮಾರ್ಚ್​ನಿಂದ ಜೂನ್​ವರೆಗೆ ಯಾವ ರೀತಿ ಲಾಕ್​ಡೌನ್​ ಮಾಡಿದ್ದೆವು ಅದೇ ಕ್ರಮಗಳು ನೂತನ ಲಾಕ್​ಡೌನ್​ನಲ್ಲಿ ಮುಂದುವರಿಯಲಿದೆ. ಶಾಲೆಗಳನ್ನು ಮುಚ್ಚುವುದು, ವರ್ಕ್​ ಫ್ರಮ್​ ಹೋಮ್​ ಮುಂದುವರಿಸುವುದು, ಮನೆಯಿಂದ ಹೊರ ಬರುವುದಕ್ಕೆ ಸೀಮಿತ ಅವಧಿ ನಿಗದಿ ಮಾಡುವುದು ಸೇರಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಜಾನ್ಸನ್​ ಹೇಳಿದ್ದಾರೆ. (ಏಜೆನ್ಸೀಸ್​)

    ಮಾರಣಾಂತಿಕ ಎಬೋಲಾ ಪತ್ತೆಹಚ್ಚಿದ ವೈದ್ಯನಿಂದ ಇಡೀ ಮನುಕುಲವೇ ಬೆಚ್ಚಿಬೀಳುವಂತಹ ಎಚ್ಚರಿಕೆ!

    ಕೇರಳಕ್ಕೆ ಹಕ್ಕಿಜ್ವರ: ರಾಜ್ಯಾದ್ಯಂತ ಕಟ್ಟೆಚ್ಚರಕ್ಕೆ ಸೂಚನೆ

    ಕರೊನಾ ಎಂಬುದೇ ಸುಳ್ಳು, ವಂಚನೆ!; ಆಸ್ಪತ್ರೆ ಮುಂದೆಯೇ ಪ್ರತಿಭಟನೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts