More

    ಪ್ರಸಿದ್ಧ ಸಾಹಿತಿಗಳ ನಾಲ್ಕು ಪುಸ್ತಕ ಲೋಕಾರ್ಪಣೆ

    ಬೆಂಗಳೂರು: ‘ಅಂಕಿತ ಪುಸ್ತಕ ಪ್ರಕಾಶನ’ ಹಾಗೂ ‘ಬುಕ್ ಬ್ರಹ್ಮ’ ಸಹಯೋಗದಲ್ಲಿ ನಾಳೆ(ಏ.30) ಬೆಳಗ್ಗೆ 10.30ಕ್ಕೆ ಬಸವನಗುಡಿಯ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್​ನ ‘ವಾಡಿಯಾ ಸಂಭಾಗಣ’ದಲ್ಲಿ ನಾಲ್ಕು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

    ಇದನ್ನೂ ಓದಿ: ಪ್ರಧಾನಿ ರೋಡ್ ಶೋ; ಭದ್ರತೆಯ ಕಾರಣಕ್ಕೆ ವಧುವನ್ನು ತಡೆದ ಪೊಲೀಸರು | ಮೋದಿಯಂತೆ ವೇಷ ತೊಟ್ಟ ಬಾಲಕ

    ಖ್ಯಾತ ಬರಹಗಾರರಾದ ಶ್ರೀಧರ ಬಳಗಾರ ಅವರ ‘ವಿಸರ್ಗ’ ಕಾದಂಬರಿ ಹಾಗೂ ‘ಮಾಲತಿ ಮಾತಾಡಿದಳು’ ಕಥಾ ಸಂಕಲನ, ಚಿಂತಾಮಣಿ ಕೊಡ್ಲೆಕೆರೆ ಅವರ ಕಥಾ ಸಂಕಲನ ‘ಭರತದ ಮಧ್ಯಾಹ್ನ’, ಎ.ಎನ್.ನಾಗರಾಜ್ ಅವರ ಬರೆದಿರುವ ಅನುಭವ ಕಥನ ‘ಆನಂದದ ಹುಡುಕಾಟದಲ್ಲಿ’ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.

    ಖ್ಯಾತ ಲೇಖನ, ಪತ್ರಕರ್ತ ಜೋಗಿ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪ್ರಸಿದ್ಧ ಸಾಹಿತಿ, ಪತ್ರಕರ್ತ ಎನ್.ಎಸ್ ಶ್ರೀಧರಮೂರ್ತಿ ಹಾಗೂ ಖ್ಯಾತ ಲೇಖನ ಎಚ್.ಎಸ್.ಸತ್ಯನಾರಾಯಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

    ಇದನ್ನೂ ಓದಿ: ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ… ನಾಟಕ ಮಾಡಬೇಕಾದ ಅವಶ್ಯಕತೆ ನನಗಿಲ್ಲ: ಜಿ.ಪರಮೇಶ್ವರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts