More

    ಸಾರಾ ಅಬೂಬಕ್ಕರ್ ಸಾಹಿತ್ಯ ಕುರಿತು ಬೆಂಗಳೂರಿನಲ್ಲಿ ಸಂವಾದ

    ಬೆಂಗಳೂರು: ಇತ್ತೀಚೆಗೆ ನಮ್ಮನ್ನಗಲಿದ ನಾಡೋಜ ಸಾರಾ ಅಬೂಬಕ್ಕರ್ ಅವರ ಸಾಹಿತ್ಯ ಕುರಿತ ಸಂವಾದ ಇದೇ ಭಾನುವಾರ ಏಪ್ರಿಲ್ 30ರಂದು ನಡೆಯಲಿದೆ. ಜೆಪಿ ನಗರ ಒಂದನೇ ಹಂತದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಇದನ್ನು ‘ಈ ಹೊತ್ತಿಗೆ’ ಸಂಸ್ಥೆಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಆಯೋಜಿಸಿದೆ.

    ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ

    ವಿಮರ್ಶಕರಾದ ಡಾ. ಎಚ್.ಎಸ್. ಸತ್ಯನಾರಾಯಣ ಮತ್ತು ಸಾಹಿತಿ ಇಂದಿರಾ ಶರಣ್ ಅವರು ಸಾರಾ ಅಬೂಬಕ್ಕರ್ ಅವರ ಕಾದಂಬರಿಗಳ ಕುರಿತು ಹಾಗೂ ಕಾದಂಬರಿಗಾರ್ತಿ ಸಂಧ್ಯಾರಾಣಿ ಮತ್ತು ಕವಿ ಕತೆಗಾರ ಆನಂದ್ ಕುಂಚನೂರ್ ಅವರು ಕಥೆಗಳು ಮತ್ತು ಅನುವಾದಗಳ ಕುರಿತು ಮಾತನಾಡಲಿದ್ದಾರೆ. ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

    ಇದನ್ನೂ ಓದಿ: ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ… ನಾಟಕ ಮಾಡಬೇಕಾದ ಅವಶ್ಯಕತೆ ನನಗಿಲ್ಲ: ಜಿ.ಪರಮೇಶ್ವರ್

    ‘ಅವಳ ಕಾಗದ’ ನಾಟಕ ಪ್ರದರ್ಶನ

    ಮಾರನೇ ದಿನ ಮೇ 1ರಂದು ರವೀಂದ್ರನಾಥ್ ಟ್ಯಾಗೋರ್ ಅವರ ಕಥೆಗಳಾಧಾರಿತ ಏಕವ್ಯಕ್ತಿ ರಂಗ ಪ್ರಯೋಗ, ‘ಅವಳ ಕಾಗದ’ ಎರಡು ಪ್ರದರ್ಶನಗಳನ್ನು ಕಪ್ಪಣ್ಣ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜೆ 4 ಮತ್ತು 6.30ಕ್ಕೆ ಈ ಪ್ರಯೋಗಗಳು ನಡೆಯಲಿವೆ. ಈ ಹೊತ್ತಿಗೆ ಸಂಸ್ಥೆ ತನ್ನ ದಶಮಾನೋತ್ಸವದ ಅಂಗವಾಗಿ ಕಪ್ಪಣ್ಣ ಅಂಗಳದ ಸಹಯೋಗದೊಂದಿಗೆ ಇದನ್ನು ಪ್ರಸ್ತುತಪಡಿಸುತ್ತಿದೆ.

    ಮುಂಬಯಿ ಕನ್ನಡ ರಂಗಭೂಮಿಯ ಖ್ಯಾತ ಅಭಿನೇತ್ರಿ ಅಹಲ್ಯಾ ಬಲ್ಲಾಳ್ ಅಭಿನಯಿಸುತ್ತಿರುವ ಈ ಏಕವ್ಯಕ್ತಿ ರಂಗ ಪ್ರಯೋಗಕ್ಕೆ ಬೆಳಕು- ಶ್ರೀನಿವಾಸ್ ಜಿ. ಕಪ್ಪಣ್ಣ, ರಂಗರೂಪ- ಸುಧಾ ಆಡುಕಳ, ವಿನ್ಯಾಸ- ಶ್ವೇತ ಹಾಸನ. ಪರಿಕಲ್ಪನೆ ಮತ್ತು ನಿರ್ದೇಶನ ಡಾ. ಶ್ರೀಪಾದ ಭಟ್ ಅವರದು ಎಂದು ಈ ಹೊತ್ತಿಗೆ ಸಂಸ್ಥೆಯ ಸಂಚಾಲಕಿ ಜಯಲಕ್ಷ್ಮೀ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ರಾಹುಲ್ ಗಾಂಧಿಗೆ ಬುದ್ದಿ ಭ್ರಮಣೆಯಾಗಿದ್ದು ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಲಿ: ಬಿಎಸ್​ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts