More

    ಕರೊನಾ ನಡುವೆ ಕೆಲಸ ಮಾಡಿದ ಬಿಎಂಟಿಸಿ ನೌಕರರಿಗೆ ಪ್ರೋತ್ಸಾಹ ಧನ, ಹೆಚ್ಚಿನ ರಜೆ ಮತ್ತಿತರ ಸವಲತ್ತು

    ಬೆಂಗಳೂರು: ಕರೊನಾ ಭೀತಿ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿ ಕಾರ್ಯನಿರ್ವಹಿಸಿದ ಬಿಎಂಟಿಸಿ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ.

    ತುರ್ತು ಮತ್ತು ಅಗತ್ಯ ಕಾರಣಗಳಿಗೆ ಓಡಾಡುವವರಿಗಾಗಿ ಬಿಎಂಟಿಸಿಯ 150 ಬಸ್‌ಗಳು ಸಂಚರಿಸುತ್ತಿದ್ದು, ಅದರಲ್ಲಿನ ಚಾಲಕ, ನಿರ್ವಾಹಕರು ಮತ್ತು ಕಚೇರಿಯಲ್ಲೂ ಕೆಲ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಂಥವರ ಕೆಲಸ ಗುರುತಿಸಿ ಅಭಿನಂದಿಸುವ ಸಲುವಾಗಿ ಮಾ. 20ರಿಂದ ಏ. 20ರವರೆಗೆ ಕೆಲಸ ಮಾಡಿದ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಸುತ್ತೋಲೆ ಹೊರಡಿಸಿದ್ದಾರೆ.
    ಜತೆಗೆ ಮುಂದಿನ ವರ್ಷದಲ್ಲಿ ಆ ಸಿಬ್ಬಂದಿಗೆ ಹೆಚ್ಚಿನ ರಜೆ ಹಾಗೂ ಇತರೆ ಸವಲತ್ತುಗಳನ್ನು ನೀಡುವುದಾಗಿಯೂ ಭರವಸೆ ನೀಡಿದ್ದಾರೆ.

    ಆರ್ಥಿಕ ನೆರವಿಗೆ ಸಾರಿಗೆ ನಿಗಮಗಳ ಮನವಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಆರ್ಥಿಕ ಪರಿಸ್ಥಿತಿಗೆ ಭಾರಿ ಹೊಡೆತ ಬಿದ್ದಿದ್ದು, ನೌಕರರಿಗೆೆ ಏಪ್ರಿಲ್ ವೇತನ ನೀಡಲು ಹಣಕಾಸು ನೆರವು ಕೋರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ. ಲಾಕ್‌ಡೌನ್‌ನಿಂದ ಬಸ್‌ಗಳು ಸಂಚರಿಸುತ್ತಿಲ್ಲ.

    ಇದರಿಂದ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, 1.27 ಲಕ್ಷ ನೌಕರರಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ನೌಕರರ ವೇತನಕ್ಕಾಗಿ 364 ಕೋಟಿ ರೂ. ಅಗತ್ಯವಿದ್ದು, ಸರ್ಕಾರದಿಂದ ಕೊಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ. ಬಸ್‌ಗಳ ಸಂಚಾರವಿಲ್ಲದ ಕಾರಣ ನಾಲ್ಕೂ ನಿಗಮಗಳಿಗೆ 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆದಾಯ ನಷ್ಟವಾಗಿದೆ. ಸ್ವಾಯತ್ತ ಸ್ಥಾನಮಾನ ಹೊಂದಿರುವ ನಿಗಮಗಳು ತಮ್ಮ ವ್ಯಾಪ್ತಿಯಲ್ಲಿರುವ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಿಸಿ ಕಾರ್ಯನಿರ್ವಹಿಸುತ್ತಿವೆ.

    ಮುಂಬೈನ ಧಾರಾವಿಯಲ್ಲಿದೆಯೇ ಭಾರತದ ಕರೊನಾ ಬಾಂಬ್? 15 ಲಕ್ಷ ಜನರಿರುವ ಕೊಳೆಗೇರಿಯಲ್ಲಿ ಏರುತ್ತಲೇ ಇದೆ ಸೋಂಕಿತರ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts