More

    ಕಾಂಗ್ರೆಸ್ ನಾಯಕತ್ವ ಎಡಪಂಥೀಯರ ಕೈ ಸೇರಿದೆ – ಪ್ರಿಯಾಂಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಕಾಂಗ್ರೆಸ್ಸಿಗ ಮಾಡಿದ್ದೇನು?

    ಲಖನೌ: ಉತ್ತರ ಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ, ಹಿರಿಯ ಕಾಂಗ್ರೆಸ್ಸಿಗ ಪಂಡಿತ್ ವಿನೋದ್ ಮಿಶ್ರಾ ಶುಕ್ರವಾರ ಪಕ್ಷ ತ್ಯಜಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿರುದ್ಧ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿರುವ ಅವರು, ನೆಹರು-ಗಾಂಧಿ ಕುಟುಂಬ ಪಕ್ಷವನ್ನು ಸ್ವಾರ್ಥಕ್ಕೆ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

    ಪಂಡಿತ್ ವಿನೋದ್ ಮಿಶ್ರಾ ಅವರು ಉತ್ತರ ಪ್ರದೇಶದ ಬ್ರಾಹ್ಮಿನ್ ಮಹಾಸಭಾದ ಸಂಚಾಲಕರಾಗಿದ್ದು, ರಾಜ್ ಬಬ್ಬರ್ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದಾಗ ಲಖನೌ ಜಿಲ್ಲೆಯ ಅಧ್ಯಕ್ಷರಾಗಿದ್ದರು. ಪಕ್ಷ ತ್ಯಜಿಸಿದ ಬಗ್ಗೆ ಹೇಳಿಕೆ ನೀಡಿರುವ ಅವರು, ಸೋನಿಯಾ ಗಾಂಧಿ ಕುಟುಂಬ ತಮ್ಮನ್ನು ಸಿಬಿಐ ಮತ್ತು ಇಡಿಯಿಂದ ಬಚಾವ್ ಆಗೋದಕ್ಕೆ ಪಕ್ಷವನ್ನು ಬಳಸಿಕೊಳ್ಳುತ್ತಿದೆ. ಪಕ್ಷದ ಹಿರಿಯ ನಾಯಕರನ್ನು ಅವಮಾನಿಸುತ್ತಿದೆ. ಹೀಗಾಗಿ ಪಕ್ಷ ತ್ಯಜಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

    ಇದನ್ನೂ ಓದಿ: ಮಕರ ಸಂಕ್ರಮಣದಲ್ಲಿ ಐತಿಹಾಸಿಕ ಬದಲಾವಣೆಗಳಾಗಲಿವೆ ನಿರೀಕ್ಷಿಸಿ! : ಕುತೂಹಲ ಕೆರಳಿಸಿದೆ ಯತ್ನಾಳರ ಮಾತು

    ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ಎಡಪಂಥೀಯರ ಕೈ ಸೇರಿದೆ. ಶತಮಾನ ಹಳೆಯ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಪಕ್ಷವನ್ನು ನಿರ್ವಹಿಸುವ ಕೆಲಸವನ್ನೂ ಎಡಪಂಥೀಯರೇ ಮಾಡುತ್ತಿರುವುದು ದುರದೃಷ್ಟಕರ ಎಂದು ಖೇದ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ದೇಶದ ಮೊದಲ ಶಿಕ್ಷಣ ಸಚಿವರಿಗೆ ಭಾರತ, ಭಾರತೀಯತೆ ಕಲ್ಪನೆಯೇ ಇರಲಿಲ್ಲ! : ಉ.ಪ್ರದೇಶ ಶಿಕ್ಷಣ ಸಚಿವರ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts