More

    ರಾಜಕೀಯವಾಗಿ ಬಳಸಿಕೊಳ್ಳುತ್ತಿಲ್ಲ; ಸಚಿವ ಕೆ.ಎಚ್‌.ಮುನಿಯಪ್ಪ ಸ್ಪಷ್ಟೋಕ್ತಿ

    ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ)ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ರೇವಣ್ಣರನ್ನ ಬಂಧಿಸಿದ್ದಾರೆ. ಆದರೆ ಅನಗತ್ಯವಾಗಿ ರಾಜಕೀಯ ಲೇಪ ಹಚ್ಚುವುದು ಬೇಡ, ನಾವು ಇದನ್ನ ರಾಜಕೀಯವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಕುರಿತು ಬಿಜೆಪಿ ನಾಯಕರು ಕೇಂದ್ರ ಗೃಹ ಸಚಿವರಿಗೆ ಪ್ರಜ್ವಲ್ ವಿಚಾರವಾಗಿ ಪತ್ರ ಬರೆದಿದ್ದಾರೆ. ಚುನಾವಣೆಗೂ ಮೊದಲೇ ಪತ್ರ ಬರೆದಿದ್ದಾರೆ
    ಹಾಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಎಲ್ಲಾ ವಿಚಾರವೂ ಗೊತ್ತಿತ್ತು. ನಿಮ್ಮ ರಾಜ್ಯದಲ್ಲಿ ಹೀಗೆ ಆಗುತ್ತಿದೆ ಎಂದು ರಾಜ್ಯ ಸರ್ಕಾರದ ಗಮನಕ್ಕೆ ತರಬಹುದಾಗಿತ್ತು. ಇಲ್ಲವೇ ಕೇಂದ್ರವೇ ಕ್ರಮತೆಗೆದುಕೊಳ್ಳಬಹುದಾಗಿತ್ತು, ಆದರೆ ಅದ್ಯಾವುದನ್ನೂ ಮಾಡಲಿಲ್ಲ ಎಂದು ಕುಟುಕಿದರು.
    ಲೋಕಸಭೆ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ, ಕರ್ನಾಟಕದಲ್ಲಿ ಕಾಂಗ್ರೆಸ್ 28ಕ್ಕೆ 28 ಸ್ಥಾನಗಳೂ ಬರಲಿದೆ. ಯಾವ ರಾಜ್ಯದಲ್ಲೂ ಮಾಡದ ಕೆಲಸವನ್ನ ಕಾಂಗ್ರೆಸ್ ಸರ್ಕಾರ ಮಾಡಿದೆ
    ಸಿಎಂ ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬಡವರಿಗೆ ತುಂಬಾ ಸಹಾಯ ಮಾಡಿದ್ದೇವೆ ಎಂದ ಅವರು ಬಿಜೆಪಿಯವರು ಬಡವರಿಗೆ ಒಂದಾದರೂ ಕಾರ್ಯಕ್ರಮ ನೀಡಿದ್ದಾರಾ?
    ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಒಂದೂ ಕಾರ್ಯಕ್ರಮ ನೀಡಿಲ್ಲ. ನಮ್ಮ ಸರ್ಕಾರ ಬಡವರ ಪರವಾಗಿ ಗ್ಯಾರಂಟಿ ಯೋಜನೆಗಳನ್ನ ನೀಡಿದ್ದೇವೆ. ಎನ್‌ಡಿಎಗಿಂತಲೂ ಇಂಡಿಯಾಗೆ ಹೆಚ್ಚು ಸ್ಥಾನಗಳು ಬರಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts