More

    ದೇಶದ ಮೊದಲ ಶಿಕ್ಷಣ ಸಚಿವರಿಗೆ ಭಾರತ, ಭಾರತೀಯತೆ ಕಲ್ಪನೆಯೇ ಇರಲಿಲ್ಲ! : ಉ.ಪ್ರದೇಶ ಶಿಕ್ಷಣ ಸಚಿವರ ಹೇಳಿಕೆ

    ಲಖನೌ: ಬದಲಾಗುತ್ತಿರುವ ಶಿಕ್ಷಣ ನೀತಿ, ಇತಿಹಾಸ ನಿರೂಪಣೆಯ ಕ್ರಮದ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವಾಗಲೇ, ಉತ್ತರ ಪ್ರದೇಶದ ಶಿಕ್ಷಣ ಸಚಿವ ಆನಂದ ಸ್ವರೂಪ್ ಶುಕ್ಲಾ ಅವರು ದೇಶದ ಮೊದಲ ಶಿಕ್ಷಣ ಸಚಿವರ ಚಿಂತನಾ ಕ್ರಮವನ್ನೇ ಟೀಕಿಸಿ ಹೇಳಿಕೆ ನೀಡಿ ಗಮನಸೆಳೆದಿದ್ದಾರೆ.

    ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರಿಗೆ ಭಾರತ ಅಥವಾ ಭಾರತೀಯತೆಯ ಪರಿಕಲ್ಪನೆಯೇ ಇರಲಿಲ್ಲ. ಇದನ್ನು ಹೇಳುವುದಕ್ಕೆ ನನಗೇನೂ ಹಿಂಜರಿಕೆ ಇಲ್ಲ ಮತ್ತು ಅದನ್ನು ಸ್ಪಷ್ಟಪಡಿಸುತ್ತೇನೆ ಕೂಡ.  ಯಾವಾಗ ಕಾಶ್ಮೀರಿ ಪಂಡಿತರು ಔರಂಗಜೇಬನ ಕಾಲದಲ್ಲಿ ಹಿಂಸೆಗೊಳಗಾಗಿದ್ದರೋ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಎದುರಿಸುತ್ತಿದ್ದರೋ ಆಗ ಅವರೆಲ್ಲ ಸಿಖ್​ ಗುರು ತೇಗ್ ಬಹಾದುರ್ ಅವರ ಮೊರೆ ಹೋಗಿದ್ದರು. ಗುರು ತೇಗ್ ಬಹಾದುರ್ ಅವರು ನೇರವಾಗಿ ಔರಂಗಜೇಬನ ಬಳಿ ಹೋದರು. ಕಾಶ್ಮೀರಿ ಪಂಡಿತರ ನೆರವಿಗಾಗಿ ವಿಷಯ ಪ್ರಸ್ತಾಪಿಸಿದರು. ಔರಂಗಜೇಬ ಮಾಡಿದ್ದೇನು – ಗುರು ತೇಗ್​ ಬಹಾದುರ್ ಅವರನ್ನೇ ಬಂಧಿಸಿ ತಲೆ ಕತ್ತರಿಸಿದ.

    ಇದನ್ನೂ ಓದಿ: ಗಣಿನಾಡಿನ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ: ಹೊಸ ಭರವಸೆ, ಬೆಳಕು ತರಲಿ ಎಂದು ಪ್ರಾರ್ಥಿಸಿದ ಫಾದರ್ಸ್‌

    ಇಂತಹ ವಾಸ್ತವಾಂಶಗಳನ್ನೇ ಇತಿಹಾಸದಿಂದ ತೆಗೆದುಹಾಕಲಾಗಿದೆ. ಇದು ಮೊದಲ ಶಿಕ್ಷಣ ಸಚಿವರ ಪರಿಕಲ್ಪನೆಯೇ ಆಗಿತ್ತು. ಅಕ್ಬರ್ ದ ಗ್ರೇಟ್ ಎಂಬುದನ್ನು ಬಿಂಬಿಸುವ ಸಲುವಾಗಿ ಅವರು ಇದನ್ನೆಲ್ಲ ಮಾಡಿದರು. ಅಕ್ಬರ್ ಆಳ್ವಿಕೆಯ ಕಾಲದಲ್ಲಿ ಇತಿಹಾಸ ಪರಿಣತರಿಗೆ ಅಕ್ಬರ್ ಗ್ರೇಟ್ ಆಗಿರಲಿಲ್ಲ ಎಂದು ಶುಕ್ಲಾ ವಿವರಿಸಿದ್ದರು. ಅವರ ಈ ವಿವರಣಾತ್ಮಕ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದ್ದು, ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಬಿಜೆಪಿ-ಜೆಡಿಎಸ್ ವಿಲೀನ ಚರ್ಚೆ ಹುಟ್ಟುಹಾಕಿದ್ದೇ ಕಾಂಗ್ರೆಸ್ಸಿಗರು: ಜೆಡಿಎಸ್ ಶಾಸಕ ಸುರೇಶ್ ಗೌಡ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts