More

    ಸುಶಾಂತ್​ ಸಾವಿಗೆ ಕರಣ್​, ಆಲಿಯಾ ದೂಷಿಸುವುದು ಮೂರ್ಖತನ

    ಸುಶಾಂತ್​ ಸಿಂಗ್​ ಸಾವು ಬಾಲಿವುಡ್​ನಲ್ಲಿ ಹುಟ್ಟುಹಾಕಿರುವ ಚರ್ಚೆ ಅಷ್ಟಿಷ್ಟಲ್ಲ. ಅದರಲ್ಲೂ ಸ್ವಜನಪಕ್ಷಪಾತದ ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಅದರಲ್ಲೂ ಕರಣ್​ ಜೋಹಾರ್​ ತರಹದವರು, ತಮಗೆ ಇಷ್ಟವಾದವರನ್ನು ಮೇಲಕ್ಕೆತ್ತಲು ಹಲವರನ್ನು ತುಳಿದರು, ಹಾಗೆ ತುಳಿತಕ್ಕೊಳಗಾದವರಲ್ಲಿ ಸುಶಾಂತ್​ ಸಿಂಗ್​ ಸಹ ಒಬ್ಬರು ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಕನಸುಗಳನ್ನು ಸಾಯಲು ಬಿಡಬಾರದು; ಸುಶಾಂತ್​ ಸಾವಿನ ಬಗ್ಗೆ ಪ್ರಕಾಶ್​ ರಾಜ್​ ಮಾತು

    ಬರೀ ಕರಣ್​ ಅಷ್ಟೇ ಅಲ್ಲ, ಟಿವಿ ಕಾರ್ಯಕ್ರಮವೊಂದರಲ್ಲಿ ಸುಶಾಂತ್​ ಸಿಂಗ್​ ಅಂದರೆ, ಯಾರೋ ಗೊತ್ತೇ ಇಲ್ಲ ಎಂದು ಆಲಿಯಾ ಭಟ್​ ಹೇಳಿಕೆಯೂ ಸಾಕಷ್ಟು ಟ್ರೋಲ್​ಗಳಾಗುತ್ತಿದೆ. ಅಷ್ಟೇ ಅಲ್ಲ, ಸುಶಾಂತ್​ ಅವರ ಸಾವಿಗೆ ಕರಣ್​, ಆಲಿಯಾ ಮುಂತಾದವರೇ ಕಾರಣ ಎಂದು ಅವರಿಬ್ಬರ ಮೇಲೆ ಜವಾಬ್ದಾರಿ ಹೊರೆಸುವ ಪ್ರಯತ್ನಗಳೂ ಆಗುತ್ತಿವೆ. ಆದರೆ, ಇದು ಮೂರ್ಖತನ ಎಂದು ನಟಿ ಸ್ವರಾ ಭಾಸ್ಕರ್​ ಹೇಳಿದ್ದಾರೆ.

    ಸೋಷಿಯಲ್​ ಮೀಡಿಯಾದಲ್ಲಿ ಸುಶಾಂತ್​ ಅವರ ಸಾವಿಗೆ ಕರಣ್​ ಮತ್ತು ಆಲಿಯಾ ಅವರನ್ನು ದೂರುತ್ತಿರುವುದನ್ನು ನೋಡಿ ಆಶ್ಚರ್ಯವಾಗುತ್ತಿರುವುದಷ್ಟೇ ಅಲ್ಲ, ಮೂರ್ಖತನ ಎಂದನಿಸುತ್ತಿದೆ. ಪ್ರಮುಖವಾಗಿ ಈ ಪ್ರಕರಣದಲ್ಲಿ ಸುಶಾಂತ್​, ಯಾವುದೇ ಸೂಸೈಡ್​ ನೋಟ್​ ಬರೆದಿಟ್ಟಿಲ್ಲ. ತನಗೇನಾಗುತ್ತಿದೆ, ಏನಾಗಿದೆ ಎಂದು ಸಹ ಹೇಳಿಕೊಂಡಿಲ್ಲ. ಹಾಗಾಗಿ ಸುಶಾಂತ್​ ಸಾವಿಗೆ ಕಾರಣ ಏನು ಎನ್ನುವುದು ನಮಗ್ಯಾರಿಗೂ ಗೊತ್ತಿಲ್ಲ. ಸುಶಾಂತ್​ಗೆ ತಮಗೇನು ಸಮಸ್ಯೆ ಇತ್ತು ಎಂದು ಹೇಳುವುದಕ್ಕೆ ಇಷ್ಟ ಇರಲಿಲ್ಲ ಎಂದನಿಸುತ್ತದೆ. ಹಾಗಾಗಿ ಅವರೇನೂ ಬರೆದಿಟ್ಟಿಲ್ಲ. ಹೀಗಿರುವಾಗ ಅವರ ಸಾವಿಗೆ ಇನ್ಯಾರನ್ನೋ ದೂಷಿಸುವುದು ಎಷ್ಟು ಸರಿ ಎಂದು ಸ್ವರ ಪ್ರಶ್ನೆ ಹಾಕಿದ್ದಾರೆ.

    ಇದನ್ನೂ ಓದಿ: ಆ ಆರು ಕಂಪನಿಗಳ ಮುಷ್ಠಿಯಲ್ಲಿದೆ ಬಾಲಿವುಡ್​ …

    ಅಷ್ಟೇ ಅಲ್ಲ, ಎಲ್ಲರೂ ತಮ್ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿದ್ದು, ಇದೊಂದು ರೀತಿಯ ಗಾಸಿಪಿಂಗ್​ನಂತಾಗಿದೆ. ಇದು ಸರಿಯಲ್ಲ ಎಂಬ ಅಭಿಪ್ರಾಯ ಅವರದ್ದು. ಸ್ವರಾ ಅವರ ಈ ಹೇಳಿಕೆಗೆ, ನೆಟ್ಟಿಗರು ಇನ್ನಷ್ಟು ಟೀಕಾ ಪ್ರಹಾರ ಮಾಡುತ್ತಿದ್ದಾರೆ.

    ಸಲ್ಮಾನ್​ ಖಾನ್ ಕುಟುಂಬ ನನ್ನ ಹಾಳು ಮಾಡಿಬಿಟ್ಟಿತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts