More

    ರೋಗಿಗಳ ಸಂಬಂಧಿಕರಂತೆ ಸೋಗು ಹಾಕಿ ರೆಮ್​ಡೆಸಿವಿರ್ ಸಂಗ್ರಹಿಸಿದ ಕಾಳಸಂತೆಕೋರರು !

    ನವದೆಹಲಿ : ಕರೊನಾ ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಪ್ರಮುಖ ಔಷಧಿಯಾದ ರೆಮ್​ಡೆಸಿವಿರ್ ಇಂಜೆಕ್ಷನ್​ಗಳು ಭಾರೀ ಬೇಡಿಕೆಯಲ್ಲಿರುವ ಕಾರಣ, ಕಾಳಸಂತೆಕೋರರಿಗೆ ಹಬ್ಬವಾಗಿಬಿಟ್ಟಿದೆ. ಈ ಅಗತ್ಯ ಔಷಧಿಯನ್ನು ಸಂಗ್ರಹಿಸಿಟ್ಟುಕೊಂಡು ನಂತರ ಹೆಚ್ಚಿನ ಬೆಲೆಯಲ್ಲಿ ಕಳ್ಳಮಾರುಕಟ್ಟೆಯಲ್ಲಿ ಮಾರುತ್ತಾ ಜನರ ಪ್ರಾಣದೊಡನೆ ಚೆಲ್ಲಾಟವಾಡುತ್ತಿದ್ದಾರೆ.

    ಇದೇ ರೀತಿಯ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ಕು ಜನರವನ್ನು ಇತ್ತೀಚೆಗೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸರ್ಜಿಕಲ್ ಉಪಕರಣಗಳ ಏಜೆಂಟರುಗಳಾದ ತಲ್ವಿಂದರ್ ಸಿಂಗ್, ಮೊಹಮ್ಮದ್ ಶೋಯೆಬ್, ಮೋಹನ್ ಝಾ ಮತ್ತು ಕೊರಿಯರ್ ಕಂಪೆನಿ ನಡೆಸುವ ಜಿತೇಂದರ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಡಿಸಿಪಿ ಮೋನಿಕಾ ಭರದ್ವಾಜ್ ತಿಳಿಸಿದ್ದಾರೆ. ಅವರ ಬಳಿಯಿಂದ 81 ರೆಮ್​ಡೆಸಿವಿರ್ ಚುಚ್ಚುಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಔಷಧಿಗಳನ್ನು ಅಕ್ರಮ ಸಂಗ್ರಹಣೆ ಮತ್ತು ಪೂರೈಕೆ ಮಾಡುವ ಈ ಸಿಂಡಿಕೇಟ್‌ನಲ್ಲಿ ಹಲವು ವ್ಯಕ್ತಿಗಳನ್ನೊಳಗೊಂಡ ಸರಪಳಿ ಇದೆ ಎಂದು ತಿಳಿದುಬಂದಿದೆ. ಈ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಅವರ ಕಾರ್ಯವಿಧಾನಗಳು ಬೆಳಕಿಗೆ ಬಂದಿವೆ ಎಂದಿದ್ದಾರೆ.

    ಇದನ್ನೂ ಓದಿ: ಭಾವ ಸತ್ತ ದಿನವೂ ಕರ್ತವ್ಯಕ್ಕೆ ಹಾಜರಾದ ಕರೊನಾ ವಾರಿಯರ್ !

    ತಲ್ವಿಂದರ್ ಮತ್ತು ಜಿತೆಂದರ್, ಔಷಧಿ ವಿತರಕರಂತೆ ಸೋಗು ಹಾಕಿ ಸ್ಥಳೀಯ ಕೆಮಿಸ್ಟ್​​ಗಳ ಒಂದು ವಾಟ್ಸಾಪ್​ ಗುಂಪು ಮಾಡಿದ್ದರು. ಅವರಿಂದ ಔಷಧಿಗಳನ್ನು ಪಡೆದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋನ್ ನಂಬರ್ ನೀಡಿ, ಒಂದು ವಯಲ್​​ಗೆ 25,000 ರೂ.ನಿಂದ 40,000 ರೂ.ಗಳಂತೆ ಮಾರಾಟ ಮಾಡಲು ಆರಂಭಿಸಿದರು ಎನ್ನಲಾಗಿದೆ. ಶೋಯಬ್ ಮತ್ತು ಮೋಹನ್, ಸಾಮಾಜಿಕ ಜಾಲತಾಣಗಳಲ್ಲಿ ಕರೊನಾ ರೋಗಿಗಳ ಸಂಬಂಧಿಕರಂತೆ ಸೋಗು ಹಾಕಿ ಎಮರ್ಜೆನ್ಸಿ ಸಂದೇಶಗಳನ್ನು ಕಳುಹಿಸಿದ್ದರು. ಜನರನ್ನು ರೆಮ್​ಡೆಸಿವಿರ್ ಇಂಜೆಕ್ಷನ್​ಗಳನ್ನು ಒದಗಿಸುವಂತೆ ಹೇಳಿ ಹೆಚ್ಚಿನ ಹಣವನ್ನೂ ನೀಡಿ ಖರೀದಿಸಿದ್ದರು. ಮತ್ತೆ ಅದನ್ನೇ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

    ಈ ರೀತಿ ಅಂತರರಾಜ್ಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಕಾಳಸಂತೆಕೋರರನ್ನು ಪತ್ತೆ ಹಚ್ಚಲು ದೆಹಲಿ ಅಪರಾಧ ವಿಭಾಗವು ವಿಶೇಷ ತಂಡಗಳನ್ನು ರಚಿಸಿದೆ. ಈ ಅಪರಾಧದಲ್ಲಿ ಶಾಮೀಲಾಗಿರುವವರನ್ನು ಬಂಧಿಸಲು ಪಂಜಾಬ್​ನಲ್ಲಿ ರೇಡ್ ಮಾಡಿ ಹೆಚ್ಚಿನ ಔಷಧಿಗಳನ್ನು ಜಪ್ತಿ ಮಾಡಲಾಗುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಪ್ರಾಣವಾಯು ನೀಡಿದ ಸೌದಿ ಅರೇಬಿಯಾ !

    ಕರೊನಾದಿಂದ ಬೇಗ ಗುಣಮುಖವಾಗಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts