More

    ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ 15 ದಿನದಲ್ಲಿ ಎರಡನೇ ಬಾರಿ ಹಲ್ಲೆ; ಟಿಎಂಸಿ ಭಯೋತ್ಪಾದನೆ ಎಂದು ದೂರಿದ ನಾಯಕರು

    ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಕಾವು ಈಗಾಗಲೇ ಆರಂಭವಾಗಿಬಿಟ್ಟಿದೆ. ಟಿಎಂಸಿ ಮತ್ತು ಬಿಜೆಪಿ ಪಕ್ಷಗಳು ಚುನಾವಣಾ ಪ್ರಚಾರವನ್ನೂ ಆರಂಭಿಸಿವೆ. ಇನ್ನೊಂದತ್ತ ಎರಡೂ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

    ಇದನ್ನೂ ಓದಿ: ಎದುರು ನೋಡಿದರೆ ಆರ್ಕಿಟೆಕ್​ ಸಂಸ್ಥೆ, ಒಳಗಡೆ ನೋಡಿದರೆ ಪೋರ್ನ್​ ರಾಕೆಟ್​; ಬಯಲಾಯ್ತು ಸಂಸ್ಥೆಯ ನಿಜ ಬಣ್ಣ

    ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್​ ಘೋಷ್ ಅವರ ಕಾರಿನ ಮೇಲೆ ಬುಧವಾರ ದಾಳಿ ನಡೆಸಲಾಗಿದೆ. ಈ ಕುರಿತಾಗಿ ಟ್ವೀಟ್​ ಮಾಡಿರುವ ನಾಯಕ, ‘ಇಂದು ಮುರ್ಷಿಯಾಬಾದ್​ (ಮಧ್ಯಾಹ್ನ 3.45) ಮತ್ತು ಪುರಂದೋರ್​ಪುರದಲ್ಲಿ (ಸಂಜೆ 5.32) ತೃಣಮೂಲ ಕಾಂಗ್ರೆಸ್​ ಪಕ್ಷದ ಗೂಂಡಾಗಳು ನಮ್ಮ ಗಾಡಿಗೆ ಕಪ್ಪು ಧ್ವಜ ತೋರಿಸಿದರು ಮತ್ತು ಕಾರಿನ ಮೇಲೆ ಕೋಲು, ಇಟ್ಟಿಗೆಯಿಂದ ದಾಳಿ ನಡೆಸಿದರು.’ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಪಕ್ಷ ನಾಶವಾಗುತ್ತಿರುವುದರಿಂದಾಗಿ ನಿರಾಶೆಗೊಂಡಿರುವ ಅವರು ರಾಜಕೀಯ ಭಯೋತ್ಪಾದನೆ ಮೂಲಕ ಪಕ್ಷವನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

    ಇದನ್ನೂ ಓದಿ: ಮದುವೆಯಾದ ಕ್ರಷ್​​ನೊಂದಿಗೆ ಅಕ್ರಮ ಸಂಬಂಧ ಹೊಂದಲು ಒತ್ತಾಯಿಸಿದ; ಒಪ್ಪದಿದ್ದಾಗ ಆತ ಮಾಡಿದ್ದೇನು?

    ಈ ವಿಚಾರವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಕೈಲಾಶ್​ ವರ್ಗೀಯ ಅವರು ಟ್ವೀಟ್​ ಮಾಡಿದ್ದು, ಮುರ್ಷಿಯಾಬಾದ್​ನಲ್ಲಿ ತಮ್ಮ ಮೇಲೂ ದಾಳಿ ನಡೆಸಲು ಪ್ರಯತ್ನಿಸಲಾಗಿತ್ತು ಎಂದು ಹೇಳಿದ್ದಾರೆ. ಇಂದು ನಡೆದ ದಾಳಿಯಿಂದಾಗಿ ದಿಲೀಪ್​ ಘೋಷ್​ ಅವರ ಕಾರಿನ ಗಾಜು ಪುಡಿಪುಡಿಯಾಗಿದೆ. ಅವರ ಗಾಡಿಯ ಜತೆ ಪೊಲೀಸ್​ ಗಾಡಿಯೂ ಇದ್ದು, ಅದರ ಮೇಲೂ ದಾಳಿ ನಡೆಸಿದ್ದಾಗಿ ಹೇಳಲಾಗಿದೆ.

    ಈ ಹಿಂದೆ ನವೆಂಬರ್​ 12ರಂದು ದಿಲೀಪ್​ ಘೋಷ್​ ಅವರ ಕಾರಿನ ಮೇಲೆ ಮೊದಲ ಬಾರಿಗೆ ದಾಳಿ ನಡೆದಿತ್ತು. (ಏಜೆನ್ಸೀಸ್​)

    ಮಾಜಿ ಶಾಸಕನ ಪುತ್ರನಿಂದ ಗರ್ಭಿಣಿ ಪತ್ನಿಯ ಕೊಲೆ; ಅಪಘಾತವೆಂದು ನಂಬಿಸಲು ಮಾಸ್ಟರ್​ ಪ್ಲಾನ್​

    ವಿವಾಹಿತ ಮಹಿಳೆಯನ್ನು ರೇಪ್​ ಮಾಡಿ ಎರಡೆರೆಡು ಬಾರಿ ಮಾರಾಟ ಮಾಡಿದ ಪಾಪಿಗಳು; ಬಚಾವಾಗಿದ್ದೇ ಆಶ್ಚರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts