ನವದೆಹಲಿ: ಚುನಾವಣೆ ಎದುರಿಸಿದ ಈಶಾನ್ಯದ ಮೂರು ರಾಜ್ಯಗಳ ಪೈಕಿ ತ್ರಿಪುರಾ ಮತ್ತು ನಾಗಾಲ್ಯಾಂಡ್ನಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ಅವರ ಎನ್ಪಿಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಸಾಧ್ಯತೆ ಇದೆ ಕೆಲ ಸಮೀಕ್ಷೆಗಳು ಹೇಳಿವೆ.
ಇದನ್ನೂ ಓದಿ: ಬೇಸಿಗೆಗೆ ಬೆಸ್ಟ್ ಫೇಸ್ ಮಿಸ್ಟ್: ತ್ವಚೆಗೆ ಏನೆಲ್ಲ ಲಾಭಗಳಿವೆ? ಯಾವ ಸಮಯದಲ್ಲಿ ಬಳಸಬೇಕು?
ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆಯ ಮತದಾನವು ಸೋಮವಾರ ಶಾಂತಿಯುತವಾಗಿ ನಡೆದಿದ್ದು, ಪ್ರಾಥಮಿಕ ವರದಿಗಳ ಪ್ರಕಾರ, ನಾಗಾಲ್ಯಾಂಡ್ನಲ್ಲಿ ಶೇ.84 ಮತ್ತು ಮೇಘಾಲಯದಲ್ಲಿ ಶೇ. 77 ಮತದಾನ ಆಗಿದೆ.
ತ್ರಿಪುರಾ ವಿಧಾನಸಭೆ ಚುನಾವಣೆಗೆ ಫೆ.16ರಂದು ಮತದಾನ ನಡೆದಿತ್ತು. ಮೂರೂ ರಾಜ್ಯಗಳ ಫಲಿತಾಂಶ ಮಾ.2ಕ್ಕೆ ಹೊರಬೀಳಲಿದೆ. ಈ ರಾಜ್ಯಗಳ ವಿಧಾನಸಭೆಯ ಬಲ ತಲಾ 60 ಇದೆ.
ಭಾರತೀಯರ ಈ ಒಂದು ಸಹಾಯವನ್ನು ಎಂದಿಗೂ ಮರೆಯಲ್ಲ: ಪತ್ನಿ ನೆನೆದು ಹಳೇ ಘಟನೆ ಬಿಚ್ಚಿಟ್ಟ ವಾಸಿಂ ಅಕ್ರಂ
ಹೆತ್ತ ತಾಯಿಯಂತೆ ಎದೆ ಹಾಲುಣಿಸಿ ಮಗು ಆರೈಕೆ: ಬಾಣಂತಿಗೆ ಪರೀಕ್ಷೆ ಬರೆಯಲು ನೆರವಾದ ಲೇಡಿ ಕಾನ್ಸ್ಟೇಬಲ್