More

    ಕಸ್ಟಮರ್ ಅಲ್ಲ ನಷ್ಟಮರ್ ಕೇರ್: ಗೂಗಲ್ ಸರ್ಚ್​ನಲ್ಲಿನ ನಂಬರ್ ನಂಬದಿರಿ

    | ಮಂಜುನಾಥ ಕೆ. ಬೆಂಗಳೂರು

    ಗೂಗಲ್​ನಲ್ಲಿ ಸಿಗುವ ಕಸ್ಟಮರ್​ ಕೇರ್​ಗಳ ನಂಬರ್​ಗಳಿಗೆ ಕರೆ ಮಾಡಿ ಸಲಹೆ ಕೇಳುವ ಮುನ್ನ ನೂರು ಬಾರಿ ಯೋಚಿಸಿ. ಏಕೆಂದರೆ ಸೈಬರ್ ಖದೀಮರು ನಿಮಗೆ ಸಹಾಯ ಮಾಡುವ ನೆಪದಲ್ಲಿ ನಿಮ್ಮ ಖಾತೆಗೆ ಕನ್ನ ಹಾಕಿ ಅದರಲ್ಲಿರುವ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸುತ್ತಾರೆ.

    ಕಸ್ಟಮರ್ ಕೇರ್ ನಂಬರ್ ತಿಳಿದುಕೊಳ್ಳಲು ಗೂಗಲ್​ನಲ್ಲಿ ಸರ್ಚ್ ಮಾಡಿದಾಗ ಕೆಲವೊಂದು ನಂಬರ್​ಗಳು ಸಿಗುತ್ತವೆ. ಆ ನಂಬರ್​ಗಳು ಸೈಬರ್ ಖದೀಮರದ್ದಾಗಿರುತ್ತದೆ. ಅವರು ನಿಮಗೆ ಸಹಾಯ ಮಾಡುವ ನೆಪದಲ್ಲಿ ಎನಿ ಡೆಸ್ಕ್, ಟೀಮ್ ವೀವರ್ ಕ್ವಿಕ್ ಸಪೋರ್ಟ್ ಎಂಬ ಆಪ್ ಅನ್ನು ಡೌನ್​ಲೋಡ್ ಮಾಡಿಕೊಳ್ಳಲು ಹೇಳುತ್ತಾರೆ. ಆ ಆಪ್​ಗಳನ್ನು ಇನ್​ಸ್ಟಾಲ್ ಮಾಡಿ, ಅದರಲ್ಲಿ ನಿಮ್ಮ ಖಾತೆಯ ವಿವರ ಮತ್ತು ಪಾಸ್​ವರ್ಡ್ ಹಾಕಿದ ತಕ್ಷಣ ಆ ವಿವರಗಳು ಸೈಬರ್ ಕಳ್ಳರ ಕೈಸೇರಿ, ಅವರು ನಿಮ್ಮ ಖಾತೆಗಳಿಗೆ ಕನ್ನ ಹಾಕುತ್ತಾರೆ.

    ಇದನ್ನೂ ಓದಿ: ಹೈರಾಣಾಗಿಸುವ ನೆಗೆಟಿವ್ ಬಾಡಿ ಇಮೇಜ್: ಆಕಾರ-ವಿಕಾರಗಳಿಗೆ ಅಂಟಿಕೊಳ್ಳದೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋಣ

    ದೊಡ್ಡಮ್ಮನಿಗೆ 48 ಸಾವಿರಕ್ಕೆ ನಾಮ: ಕೊಡಿಗೇಹಳ್ಳಿಯ ಸಂಜೀವಿನಗರದ ನಿವಾಸಿ ದೊಡ್ಡಮ್ಮ ಎಂಬುವರು ಫೆ.23ರಂದು ತಮ್ಮ ಕಾರು ಲೋನ್ ಬಗ್ಗೆ ಮಾಹಿತಿ ಪಡೆಯಲು ಎಚ್​ಡಿಎಫ್​ಸಿ ಬ್ಯಾಂಕ್​ನ ಕಸ್ಟಮರ್ ಕೇರ್ ನಂಬರ್ ತಿಳಿದುಕೊಳ್ಳಲು ಗೂಗಲ್​ನಲ್ಲಿ ಸರ್ಚ್ ಮಾಡಿದ್ದರು. ಆಗ 02268461208 ನಂಬರ್ ಸಿಕ್ಕಿದೆ.ಅದಕ್ಕೆ ಕರೆ ಮಾಡಿದಾಗ, ‘ನಮ್ಮ ಏಜೆಂಟ್ ನಿಮಗೆ ವಾಪಸ್ ಕಾಲ್ ಮಾಡುತ್ತಾರೆ’ ಎಂದು ಹೇಳಿ ಕರೆ ಕಡಿತಗೊಳಿಸಿದ್ದರು. ಇದಾದ ನಂತರ ಅಪರಿಚಿತ ವ್ಯಕ್ತಿ 7377176235

    ನಂಬರ್​ನಿಂದ ಕರೆ ಮಾಡಿ ಎನಿಡೆಸ್ಕ್ ಎಂಬ ಆಪ್ ಡೌನ್​ಲೋಡ್ ಮಾಡಿಕೊಂಡು ನೆಟ್ ಬ್ಯಾಕಿಂಗ್ ಓಪನ್ ಮಾಡಲು ಹೇಳಿ ಡೆಬಿಟ್ ಕಾರ್ಡ್ ನಂಬರ್ ಎಂಟರ್ ಮಾಡಲು ಹೇಳಿದ್ದ. ಆಗ ದೊಡ್ಡಮ್ಮ ಡೆಬಿಟ್ ಕಾರ್ಡ್ ನಂಬರ್ ನಮೂದಿಸಿದ್ದರು. ಇದಾದ ನಂತರ ಅವರ ಖಾತೆಯಿಂದ ಹಂತ ಹಂತವಾಗಿ 48 ಸಾವಿರ ರೂ. ಕಡಿತವಾಗಿದೆ. ಬಳಿಕ ತಾನು ವಂಚನೆಗೆ ಒಳಗಾಗಿರುವುದಾಗಿ ಅರಿತ ಅವರು ಈ ಸಂಬಂಧ ಮೋಸ ಮಾಡಿರುವ ಅಪರಿಚಿತ ವ್ಯಕ್ತಿಯ ವಿರುದ್ಧ ಈಶಾನ್ಯ ವಿಭಾಗದ ಸೈಬರ್ ಕ್ರೈಂ (ಸಿಇಎನ್) ಠಾಣೆಗೆ ದೂರು ನೀಡಿದ್ದಾರೆ.

    ಸಲಹೆ ಕೇಳಲು ಹೋಗಿ 1.63 ಲಕ್ಷ ರೂ. ಹೋಯ್ತು: ಯಲಹಂಕ ಉಪನಗರ ನಿವಾಸಿ ಎನ್. ಶಂಕರ್, ಕೆನರಾ ಬ್ಯಾಂಕ್​ನಲ್ಲಿ ಖಾತೆಯನ್ನು ಹೊಂದಿದ್ದು, ಫೆ.21ರಂದು ತಮ್ಮ ಮೊಬೈಲ್​ನಲ್ಲಿ ಕೆನರಾ ಬ್ಯಾಂಕ್ ಒಪಿಪಿ- ಕೆನರಾ ಎಐ/ ಎಂಬ ಆಪ್ ಡೌನ್​ಲೋಡ್ ಮಾಡಿಕೊಳ್ಳಲು ಯತ್ನಿಸಿದ್ದರು. ಆ ಆಪ್ ಡೌನ್​ಲೋಡ್

    ಆಗದಿದ್ದಾಗ ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ 919263302500ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿಯು, ಎನಿಡೆಸ್ಕ್ ಆಪ್ ಅನ್ನು ಡೌನ್​ಲೋಡ್ ಮಾಡಿಕೊಂಡು ಅಕೌಂಟ್ ಡಿಟೇಲ್ಸ್ ಹಾಕಿ ಅಪ್​ಡೇಟ್ ಮಾಡಿ ಎಂದಿದ್ದರು. ಶಂಕರ್ ಆ ಸೂಚನೆ ಪಾಲಿಸಿದ್ದರು. ನಂತರ ಅವರ ಖಾತೆಯಿಂದ ಹಂತಹಂತವಾಗಿ 1 ಲಕ್ಷ 63 ಸಾವಿರ ರೂ. ಕಡಿತವಾಗಿದೆ. ಈ ಸಂಬಂಧ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

    ಇದನ್ನೂ ಓದಿ: ಮುಳ್ಳುಹಂದಿಯ ಆಸೆಗೆ ಪ್ರಾಣವನ್ನೇ ಕಳೆದುಕೊಂಡ್ರು; ಗುಹೆಯೊಳಗೆ ಉಸಿರುಗಟ್ಟಿ ಇಬ್ಬರ ಸಾವು

    ಕ್ರೆಡಿಟ್ ಕಾರ್ಡ್ ಕ್ಯಾನ್ಸಲ್​ಗೆ 93 ಸಾವಿರ ರೂ. ಲಾಸ್
    ಕೊಡಿಗೇಹಳ್ಳಿ ನಿವಾಸಿ ಉಷಾ ಶ್ರೀನಿವಾಸನ್, ಯೆಸ್ ಬ್ಯಾಂಕ್​ನ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಆ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡುವ ಸಲುವಾಗಿ ಗೂಗಲ್​ನಲ್ಲಿ ಕಸ್ಟಮರ್ ಕೇರ್ ಸರ್ಚ್ ಮಾಡಿ ಅದರಲ್ಲಿರುವ ನಂಬರ್​ಗೆ ಕರೆ ಮಾಡಿದ್ದರು. ಅಪರಿಚಿತ ವ್ಯಕ್ತಿ ಎನಿ ಡೆಸ್ಕ್ ಆಪ್ ಡೌನ್​ಲೋಡ್ ಮಾಡಿ ಅಪ್ಡೇಟ್ ಮಾಡಲು ಹೇಳಿದ್ದಾರೆ. ಬಳಿಕ ಆ ಆಪ್ ಡೋನ್​ಲೋಡ್ ಮಾಡಿ ಖಾತೆಯ ವಿವರವನ್ನು ಅಪ್​ಡೇಟ್ ಮಾಡಿದಾಗ ಖಾತೆಯಿಂದ ಹಂತ ಹಂತವಾಗಿ 93,548 ರೂ. ಕಡಿತವಾಗಿದೆ. ಈ ಸಂಬಂಧ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

    ವಿದ್ಯುತ್ ಬಿಲ್ ಹೆಸರಲ್ಲಿ ಕನ್ನ
    ಖಾಸಗಿ ಕಂಪನಿ ಉದ್ಯೋಗಿ, ಯಲಹಂಕ ಉಪನಗರ ನಿವಾಸಿ ಪದ್ಮನಾಭನ್​ಗೆ ಫೆ. 23ರಂದು ಅಪರಿಚಿತ +918580141780 ನಂಬರ್​ನಿಂದ ಮೆಸೇಜ್ ಬಂದಿತ್ತು. ಅದರಲ್ಲಿ ವಿದ್ಯುತ್ ಬಿಲ್ ಕಟ್ಟದ ಕಾರಣ ಈ ದಿನ ವಿದ್ಯುತ್ ಕಡಿತಗೊಳಿಸ ಲಾಗುವುದು. ಕೂಡಲೇ 9381709739 ಸಂಖ್ಯೆ ಸಂರ್ಪಸಿ ಎಂದು ಅದರಲ್ಲಿ ನಮೂದಿಸಲಾಗಿತ್ತು. ಆ ನಂಬರಿಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ ಹಿಂದಿಯಲ್ಲಿ ನೀವು ಬಿಲ್ ಪಾವತಿ ಮಾಡಿದ್ದು ಸಿಸ್ಟಂನಲ್ಲಿ ಅಪ್​ಡೇಟ್ ಅಗಿಲ್ಲ. ಕಾರಣ ಟೀಮ್ ವೀವರ್ ಕ್ವಿಕ್ ಸಪೋರ್ಟ್ ಎಂಬ ಆಪ್ ಡೌನ್​ಲೋಡ್ ಮಾಡಲು, ತಿಳಿಸಿದ್ದರು. ಬಳಿಕ ಹಂತ ಹಂತವಾಗಿ 4,98,855 ರೂ. ಎಗರಿಸಿದ್ದಾರೆ.

    ಹೆತ್ತ ತಾಯಿಯಂತೆ ಎದೆ ಹಾಲುಣಿಸಿ ಮಗು ಆರೈಕೆ: ಬಾಣಂತಿಗೆ ಪರೀಕ್ಷೆ ಬರೆಯಲು ನೆರವಾದ ಲೇಡಿ ಕಾನ್ಸ್​ಟೇಬಲ್

    ತನ್ನ ಮದ್ವೆಯಲ್ಲಿ ಭಾರತೀಯ ಉಡುಗೆ ತೊಟ್ಟ ಪಾಕ್​ ನಟಿ ವಿರುದ್ಧ ಕಿಡಿ: ನೆಟ್ಟಿಗರ ವಾದ ಹೀಗಿದೆ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts