ಹೆತ್ತ ತಾಯಿಯಂತೆ ಎದೆ ಹಾಲುಣಿಸಿ ಮಗು ಆರೈಕೆ: ಬಾಣಂತಿಗೆ ಪರೀಕ್ಷೆ ಬರೆಯಲು ನೆರವಾದ ಲೇಡಿ ಕಾನ್ಸ್​ಟೇಬಲ್

ಭುವನೇಶ್ವರ್​: ಪೊಲೀಸ್ ನೇಮಕಾತಿ​ ಪರೀಕ್ಷೆ ಬರೆಯಲು ಬಂದಿದ್ದ ಬಾಣಂತಿಯೊಬ್ಬಳು ತನ್ನ ನಾಲ್ಕ ತಿಂಗಳ ಮಗುವನ್ನು ಯಾರ ಹತ್ತಿರ ಬಿಡುವುದು ಎಂದು ಯೋಚಿಸುತ್ತಿರುವಾಗ ಅಲ್ಲಿಯೇ ಕೆಲಸಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಒಬ್ಬರು ಪರೀಕ್ಷೆ ಮುಗಿಯುವವರೆಗೂ ಹೆತ್ತ ತಾಯಿಯಂತೆ ಎದೆಹಾಲು ಉಣಿಸಿ ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಹಿಳಾ ಪೇದೆಯ ಒಳ್ಳೆಯ ಮನಸ್ಸಿಗೆ ಜನರು ಬಹುಪರಾಕ್​​ ಹಾಕಿದ್ದಾರೆ. ಮನಕಲಕುವ ಈ ವಿಶೇಷ ಕ್ಷಣಕ್ಕೆ ಒಡಿಶಾದ ಮಲ್ಕಂ​ಗಿರಿ ಜಿಲ್ಲೆ ಸಾಕ್ಷಿಯಾಗಿದೆ. ಉದಾರತೆಯನ್ನು ತೋರಿದ ಮಹಿಳಾ ಪೊಲೀಸ್​ ಬಸಂತಿ ಚೌಧರಿ … Continue reading ಹೆತ್ತ ತಾಯಿಯಂತೆ ಎದೆ ಹಾಲುಣಿಸಿ ಮಗು ಆರೈಕೆ: ಬಾಣಂತಿಗೆ ಪರೀಕ್ಷೆ ಬರೆಯಲು ನೆರವಾದ ಲೇಡಿ ಕಾನ್ಸ್​ಟೇಬಲ್