More

    ರಾಜಸ್ಥಾನ ರಾಜಕೀಯದಲ್ಲಿ ರೋಚಕ ಟ್ವಿಸ್ಟ್​!: ಅವಿಶ್ವಾಸ ಗೊತ್ತುವಳಿಗೆ ಬಿಜೆಪಿ ಸಿದ್ಧತೆ

    ಜೈಪುರ: ರಾಜಸ್ಥಾನ ರಾಜಕೀಯ ದಿನೇದಿನೆ ರೋಚಕ ತಿರುವುಗಳನ್ನು ಪಡೆಯುತ್ತಿದ್ದು, ಬಂಡಾಯ ಎದ್ದ ಸಚಿನ್ ಪೈಲಟ್​ ತಣ್ಣಗಾಗಿ ತಾತ್ತ್ವಿಕ ವಿರೋಧ ವ್ಯಕ್ತಪಡಿಸಿದ್ದಾಗಿ ಹೇಳಿದ್ದರ ಬೆನ್ನಿಗೇ ಈಗ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸುವುದಕ್ಕೆ ಸಿದ್ಧತೆ ನಡೆಸಿದೆ. ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದು, ಗೆಹ್ಲೋಟ್ ಸರ್ಕಾರ ದೀರ್ಘಾವಧಿ ಬಾಳಲ್ಲ ಎಂದು ಹೇಳಿದ್ದಾರೆ.

    ರಾಜಸ್ಥಾನ ವಿಧಾನಸಭೆಯ ವಿಶೇಷ ಅಧಿವೇಶನ ನಾಳೆ ನಡೆಯಲಿದ್ದು, ಸದನದಲ್ಲಿ ಎಲ್ಲವೂ ತೀರ್ಮಾನವಾಗಲಿದೆ. ಕಾಂಗ್ರೆಸ್ ಒಳ ಜಗಳ ತೀವ್ರಗೊಂಡಿದ್ದು, ಸರ್ಕಾರದ ಪತನ ಶೀಘ್ರವೇ ಆಗಲಿದೆ ಎಂದು ವಿಶ್ವಾಸದೊಂದಿಗೆ ಹೇಳಿದ್ದಾರೆ. ಇದೇ ರೀತಿ ವಿಧಾನಸಭೆಯ ವಿಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ ಕೂಡ ಹೇಳಿಕೆ ನೀಡಿದ್ದು, ಕಾಂಗ್ರೆಸ್ಸಿನ ಆಂತರಿಕ ಭಿನ್ನಮತ ನಾಳೆ ತಾತ್ತ್ವಿಕ ಅಂತ್ಯ ಕಾಣಲಿದೆ. ಪಕ್ಷ ನಾಳೆ ಸದನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲಿದೆ ಎಂದು ಹೇಳಿದ್ದಾರೆ. ನಾಳೆ ಬೆಳಗ್ಗೆ 9.30ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಏನೊಂದು ಸರಿಯಿಲ್ಲ; ಯಾವುದೇ ಕ್ಷಣದಲ್ಲಿ ಪ್ರಕ್ಷುಬ್ಧಗೊಳ್ಳಬಹುದು ಪ್ರಶಾಂತ ಸಾಗರ

    ಇದೇ ವೇಳೆ, ಸಿಎಂ ಅಶೋಕ್ ಗೆಹ್ಲೋಟ್​ ಸರ್ಕಾರ ವಿಶ್ವಾಸಮತ ಗೆಲ್ಲುವ ಭರವಸೆಯೊಂದಿಗೆ ಇದ್ದು, ಇದುವರೆಗೆ ಏನು ತಪ್ಪು ತಿಳಿವಳಿಕೆ ಉಂಟಾಗಿತ್ತೋ ಅದೆಲ್ಲವೂ ಈಗ ಸರಿ ಹೋಗಿದೆ. ನಾವು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಬಹಳ ಶ್ರಮಪಟ್ಟೆವು. ಪಕ್ಷವೂ ಎಲ್ಲರನ್ನೂ, ಎಲ್ಲವನೂ ಕ್ಷಮಿಸಿದೆ ಮತ್ತು ಮರೆತು ಮುಂದಕ್ಕೆ ಹೆಜ್ಜೆ ಇಡಲು ಮುಂದಾಗಿದೆ ಎಂದು ಟ್ವೀಟ್​ನಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:  ವಿಶ್ವಾಸ ಮತ ಯಾಚಿಸಲು ರಾಜಸ್ಥಾನ ಸಿಎಂ ಚಿಂತನೆ; ಆರು ತಿಂಗಳ ನೆಮ್ಮದಿಯೇ ಕಾರಣ…!

    ಈ ನಡುವೆ, ಸಚಿನ್ ಪೈಲಟ್ ಬಣದ ಇಬ್ಬರು ಶಾಸಕರ ಅಮಾನತನ್ನು ಕಾಂಗ್ರೆಸ್​ ಪಕ್ಷ ಹಿಂಪಡೆದುಕೊಂಡಿದೆ. ಉಳಿದವರ ಅಮಾನತು ಹಾಗೆಯೇ ಮುಂದುವರಿದೆ. ಈ ಬೆಳವಣಿಗೆ ನಾಳೆಯ ಅವಿಶ್ವಾಸಗೊತ್ತುವಳಿಯ ಕೌತುಕವನ್ನು ಇನ್ನಷ್ಟು ಹೆಚ್ಚಿಸಿದೆ. (ಏಜೆನ್ಸೀಸ್)

    ರಾಜಸ್ಥಾನದಲ್ಲಿ ತೇಪೆ ಹಚ್ಚಿದ್ರು, ಮಣಿಪುರದಲ್ಲಿ ಹೋಳಾಯ್ತು; 6 ಕಾಂಗ್ರೆಸ್​ ಶಾಸಕರ ರಾಜೀನಾಮೆ, ಪಕ್ಷಕ್ಕೂ ಗುಡ್​ಬೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts