More

    ನಿಮ್ಮ ಒಗ್ಗಟ್ಟನ್ನು ವಿಶ್ವಾಸ ಮತದ ವೇಳೆ ತೋರಿಸಿ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಗೆಹ್ಲೋಟ್

    ಜೈಪುರ: ರಾಜಸ್ಥಾನ ರಾಜಕೀಯ ಅಸ್ಥಿರವಾಗಿ ಮುಂದುವರಿದಿದ್ದು, ಆಗಸ್ಟ್​ 14ರಿಂದ ವಿಧಾನಸಭೆ ಅಧಿವೇಶನ ಶುರುವಾಗಲಿದೆ. ಅಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಅವರು ವಿಶ್ವಾಸ ಮತ ಯಾಚಿಸಲು ಸಜ್ಜಾಗುತ್ತಿದ್ದಾರೆ. ಅದಕ್ಕೂ ಮುನ್ನ ಜೈಸಲ್ಮೇರ್​ನ ರೆಸಾರ್ಟ್​ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಒಗ್ಗಟ್ಟನ್ನು ವಿಶ್ವಾಸ ಮತದ ಸಂದರ್ಭದಲ್ಲಿ ಪ್ರದರ್ಶಿಸಿ ಎಂದು ಶಾಸಕರಿಗೆ ಕರೆ ನೀಡಿದ್ದಾರೆ.

    ನಾವು ಡೆಮಾಕ್ರಸಿಯ ವಾರಿಯರ್ಸ್​. ಈ ಯುದ್ಧವನ್ನು ನಾವು ಗೆಲ್ಲಲಿದ್ದೇವೆ. ಅದೇ ರೀತಿ ಇನ್ನು ಮೂರೂವರೆ ವರ್ಷ ನಂತರ ಎದುರಾಗುವ ವಿಧಾನಸಭೆ ಚುನಾವಣೆಯನ್ನೂ ಗೆಲ್ಲಲಿದ್ದೇವೆ. ಇದುವರೆಗೆ ನೀವು ತೋರಿಸಿದ ಒಗ್ಗಟ್ಟು ಏನಿದೆಯೋ ಅದನ್ನು ಸದನದಲ್ಲೂ ಪ್ರದರ್ಶಿಸಬೇಕು ಎಂದು ಗೆಹ್ಲೋಟ್ ಹೇಳಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಅಜಯ್​ ಮಾಕೆನ್​, ರಣದೀಪ್ ಸುರ್ಜೇವಾಲ, ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋತಸ್ರ ಅವರು ಹಾಜರಿದ್ದರು. ​

    ಇದನ್ನೂ ಓದಿ: ರಾಜಸ್ಥಾನ ರಾಜಕೀಯ: ಮೌನ ಮುರಿದ ರಾಹುಲ್ ಗಾಂಧಿ!

    ಉಪಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಮತ್ತು ಸಂಗಡಿಗರು ಬಂಡಾಯದ ಬಾವುಟ ಹಾರಿಸಿದ್ದರಿಂದಾಗಿ ರಾಜಸ್ಥಾನದಲ್ಲಿ ಆಡಳಿತಾರೂಡ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಗೆಹ್ಲೋಟ್ ಸರ್ಕಾರ ಪತನ ಭೀತಿಯನ್ನು ಎದುರಿಸುತ್ತಿದೆ. ಈ ನಡುವೆ, ಪೈಲಟ್ ಮತ್ತು ಅವರಿಗೆ ನಿಷ್ಠ 18 ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಯೂ ನಡೆದಿದೆ. ಇದರ ಜತೆಜತೆಗೆ ಉಳಿದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್​ನಲ್ಲಿ ಇರಿಸಿಕೊಂಡಿರುವ ಗೆಹ್ಲೋಟ್​, ಸರ್ಕಾರ ಉಳಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. (ಏಜೆನ್ಸೀಸ್)

    ರಾಜಸ್ಥಾನ ರಾಜಕೀಯ: ಪಕ್ಷಗಳ ವಿಲೀನ ಒಕೆ, ಶಾಸಕರ ವಿಲೀನಕ್ಕೆಲ್ಲಿ ಅವಕಾಶ- ಬಿಎಸ್​ಪಿ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts