More

    ಮತ್ತೆ ‘ಕೈ’ ಕುಲುಕಿದ ಪೈಲಟ್: ಇಂದು ವಿಶೇಷ ಅಧಿವೇಶನದಲ್ಲಿ ಗೆಹ್ಲೋಟ್ ‘ವಿಶ್ವಾಸ’ ಪಣಕ್ಕೆ..

    ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಬಂಡಾಯವೆದ್ದು ಈಗ ಪಕ್ಷಕ್ಕೆ ಮರಳಿರುವ ನಾಯಕ ಸಚಿನ್ ಪೈಲಟ್ ಗುರುವಾರ ಭೇಟಿಯಾಗಿ ಹಸ್ತಲಾಘವ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ. ಪೈಲಟ್ ಬಣ ಬಂಡೆದ್ದಿದ್ದರಿಂದ ಸರ್ಕಾರ ಪತನಗೊಳ್ಳುವ ಭೀತಿ ಎದುರಾಗಿ ಒಂದು ತಿಂಗಳಿಗೂ ಅಧಿಕ ಕಾಲ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು.

    ವಿಧಾನಸಭೆಯ ವಿಶೇಷ ಅಧಿವೇಶನ ಶುಕ್ರವಾರ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಶಾಸಕರ ಸಭೆಯ ನಂತರ ಗೆಹ್ಲೋಟ್-ಪೈಲಟ್ ಭೇಟಿಯಾದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ನಡೆಸಿದ ಸಂಧಾನ ಸಫಲವಾಗಿ ಪೈಲಟ್ ಬಣ ಬಂಡಾಯದ ಬಾವುಟ ಕೆಳಗಿಳಿಸಿತ್ತು.

    ಪಕ್ಷದ ಮುಖಂಡರಾದ ಕೆ.ಸಿ. ವೇಣುಗೋಪಾಲ್, ಅವಿನಾಶ್ ಪಾಂಡೆ, ರಣದೀಪ್ ಸುರ್ಜೆವಾಲಾ, ಅಜಯ್ ಮಾಕನ್ ಮತ್ತು ರಾಜ್ಯ ಘಟಕದ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ಸಭೆಯಲ್ಲಿ ಇದ್ದರು. ಪೈಲಟ್ ಬಣದಲ್ಲಿದ್ದ 18 ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.
    200 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ 107 ಶಾಸಕರನ್ನು ಹೊಂದಿದೆ. ಬಿಜೆಪಿಗೆ 72 ಸದಸ್ಯರ ಬಲವಿದೆ.

    ವಿಶ್ವಾಸಮತ ಗೆದ್ದರೆ 6 ತಿಂಗಳು ಚಿಂತೆ ಇಲ್ಲ: ಗೆಹ್ಲೋಟ್ ಸದನದಲ್ಲಿ ವಿಶ್ವಾಸಮತ ಗೊತ್ತುವಳಿ ಮಂಡಿಸುವ ಅವಕಾಶವನ್ನು ಮೊದಲಿಗೆ ಪಡೆಯಲಿದ್ದಾರೆ. ಒಂದು ವೇಳೆ ಅದರಲ್ಲಿ ಗೆದ್ದರೆ ಕಾನೂನು ಪ್ರಕಾರ ಮುಂದಿನ ಆರು ತಿಂಗಳವರೆಗೆ ಅದನ್ನು ಪ್ರಶ್ನಿಸುವಂತಿಲ್ಲ. ಇದು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಲಿದೆ.

    ಗೆಹ್ಲೋಟ್​ಗೆ ಬಲ: ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ತೊರೆದು ಕಾಂಗ್ರೆಸ್ ಸೇರಿದ್ದ ಆರು ಶಾಸಕರು ವಿಧಾನಸಭೆಯಲ್ಲಿ ವಿಶ್ವಾಸಮತ ಅಥವಾ ಅವಿಶ್ವಾಸಮತ ಮಂಡನೆಯಾದರೆ ಮತಚಲಾಯಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದರಿಂದ ಗೆಹ್ಲೋಟ್ ನೇತೃತ್ವದ ಸರ್ಕಾರಕ್ಕೆ ಬಲ ಹೆಚ್ಚಿದೆ. ಈ ಆರು ಸದಸ್ಯರ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಬೇಕೆಂದು ಕೋರಿ ಬಿಜೆಪಿ ಮುಂಖಡರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಜಸ್ಥಾನ ಹೈಕೋರ್ಟ್​ನ ಏಕ ಸದಸ್ಯ ಪೀಠ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಸವೋನ್ನತ ನ್ಯಾಯಾಲಯದ ತ್ರಿಸದಸ್ಯ ಪೀಠ ಹೇಳಿದೆ. ಇದನ್ನೂ ಓದಿ: ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂಥ ಕ್ರಮಗಳು ಬೇಡ; ಭಾರತಕ್ಕೆ ಚೀನಾದ ಎಚ್ಚರಿಕೆ

    ಅಮಾನತು ರದ್ದು: ಶಾಸಕರಾದ ಭನ್ವರ್​ಲಾಲ್ ಮತ್ತು ವಿಶ್ವೇಂದ್ರ ಸಿಂಗ್ ಮೇಲೆ ಹೇರಿದ್ದ ಅಮಾನತನ್ನು ಕಾಂಗ್ರೆಸ್ ಪಕ್ಷ ಗುರುವಾರ ವಾಪಸ್ ಪಡೆದಿದೆ. ಏಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಇದನ್ನು ತಿಳಿಸಿದ್ದಾರೆ.

    ಬಿಜೆಪಿಯಿಂದ ಅವಿಶ್ವಾಸ ಗೊತ್ತುವಳಿ: ಬಿಜೆಪಿ ಕೂಡ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಶುಕ್ರವಾರ ಆರಂಭವಾಗುವ ಸದನದಲ್ಲಿ ಗೆಹ್ಲೋಟ್ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ನೋಟಿಸ್ ನೀಡುವುದಾಗಿ ತಿಳಿಸಿದೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೆಚ್ಚು ಕಾಲ ಬಾಳುವುದಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮಾಹಿ ಸಿಎಂ, ಬಿಜೆಪಿ ನಾಯಕಿ ವಸುಂಧರಾ ರಾಜೇ ಹೇಳಿದ್ದಾರೆ.

    ಬಿಎಸ್​ವೈ ಹೆಸರಿನ ನಕಲಿ ಟ್ವಿಟ್ಟರ್ ಖಾತೆ ವಿರುದ್ಧ ಪ್ರಕರಣ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts