More

    ಕರೊನಾ ಸೋಂಕು: ಬಿಜೆಪಿ ವಕ್ತಾರ ಸಂಬಿತ್​ ಪಾತ್ರಾ ಆಸ್ಪತ್ರೆಗೆ

    ನವದೆಹಲಿ: ಕರೊನಾ ವೈರಸ್​ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
    ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ ಎಂದು ವರದಿಗಳು ಹೇಳಿವೆ. ಬಿಜೆಪಿಯಲ್ಲಿ ಪ್ರಮುಖ ನಾಯಕರಾಗಿರುವ ಸಂಬಿತ್ ಪಾತ್ರಾ, ಪಕ್ಷದ ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದಾರೆ.

    46 ವರ್ಷದ ಪಾತ್ರಾ ಅವರು, ವೃತ್ತಿಯಲ್ಲಿ ವೈದ್ಯರು. ಜತೆಗೆ, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್ (ಒಎನ್‌ಜಿಸಿ) ಮಂಡಳಿಯ ನಾನ್​ ಆಫೀಷಿಯಲ್​ ರ್ದೇಶಕರು ಕೂಡ.

    ಇದನ್ನೂ ಓದಿ: ಕರೊನಾದ ವರ್ಷ ಭವಿಷ್ಯ ತಿಳಿಸಿದ್ದಾರೆ ನಿಮ್ಹಾನ್ಸ್​ ತಜ್ಞ: ಇದರಲ್ಲೇನಿದೆ ಗೊತ್ತಾ?

    2012ರಲ್ಲಿ ದೆಹಲಿಯ ಕಾಶ್ಮೀರಿ ಗೇಟ್‌ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಪಾತ್ರಾ ಅವರು ಪುರಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಅವರು ಚುನಾವಣೆಯಲ್ಲಿ ಸೋತರು. ಅದೇ ಸಮಯದಲ್ಲಿ ಪೂರ್ಣ ಸಮಯದ ರಾಜಕೀಯದಲ್ಲಿ ಮುಂದುವರೆಯುವ ಸಲುವಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಈ ಚುನಾವಣೆಗೆ ಮುಂಚೆಯೇ, ಅಂದರೆ 2010 ರಲ್ಲಿ, ಅವರನ್ನು ಬಿಜೆಪಿಯ ದೆಹಲಿ ಘಟಕದ ವಕ್ತಾರರಾಗಿ ನೇಮಕ ಮಾಡಲಾಗಿತ್ತು.

    2014ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಾತ್ರಾ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಂಡರು. ನಂತರ ಬಿಜೆಪಿ ಅಧಿಕಾರಕ್ಕೆ ಬಂದಾಗ ಇವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿತ್ತು. 2017 ರಲ್ಲಿ, ಸಚಿವ ಸಂಪುಟದ ನೇಮಕಾತಿ ಸಮಿತಿಯು (ಎಸಿಸಿ) ಅವರನ್ನು ಒಎನ್‌ಜಿಸಿಯ ನಾನ್​ ಆಫೀಷಿಯಲ್​ ನಿರ್ದೇಶಕರಾಗಿ ನೇಮಿಸಿತು. (ಏಜೆನ್ಸೀಸ್​)

    ಚೀನಾಕ್ಕೆ ಸೆಡ್ಡು- ಭಾರತದಲ್ಲಿ ತಯಾರಾಯ್ತು ಕೋಟಿಗೂ ಅಧಿಕ ಸ್ವದೇಶಿ ಪಿಪಿಇ ಕಿಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts