More

    ಮಧ್ಯಪ್ರದೇಶ ಚುನಾವಣೆ| ಐದನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ; ಹಲವು ಶಾಸಕರಿಗೆ ಟಿಕೆಟ್​ ನಿರಾಕರಣೆ

    ನವದೆಹಲಿ: ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ ರಾಜ್ಯ ವಿಧಾನಸಭೆ ಚುನವಣೆ ಭಾರೀ ಜಿದ್ದಿನಿಂದ ಕೂಡಿದ್ದು, ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇನ್ನೂ ಚುನಾವಣೆಗೆ ಸಂಬಂಧಿಸಿದಂತೆ ಆಡಳಿತರೂಢ ಬಿಜೆಪಿ ಇಂದು ತನ್ನ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಇಂದು (ಅಕ್ಟೋಬರ್ 21)ರಂದು ಬಿಡುಗಡೆಯಾಗಿರುವ ಐದನೇ ಪಟ್ಟಿಯಲ್ಲಿ ಬಿಜೆಪಿ 92 ಅಭ್ಯರ್ಥಿಗಳ ಹೆಸರನ್ನೂ ಘೋಷಿಸಿದೆ. ಈ ಮೂಲಕ 230 ಕ್ಷೇತ್ರಗಳ ಪೈಕಿ ಬಿಜೆಪಿ 228 ಅಭ್ಯರ್ಥಿಗಳನ್ನು ಘೋಷಿಸಿದೆ. ಗುಣ ಹಾಗೂ ವಿಧಿಶ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ.

    ಇದನ್ನೂ ಓದಿ: ನಕಲಿ ವೋಟರ್ ಐಡಿ ತಯಾರಿಕೆ ಪ್ರಕರಣ; ಕರ್ನಾಟಕದಲ್ಲಿ ಕಾಂಗ್ರೆಸ್​ ಗೆದ್ದ ಫಾರ್ಮುಲಾ ಈಗ ಬಯಲಾಗಿದೆ: ಬಿಜೆಪಿ

    ಇಂದು (ಅಕ್ಟೋಬರ್ 21) ಬಿಡುಗಡೆಯಾದ ಐದನೇ ಪಟ್ಟಿಯಲ್ಲಿ 12 ಮಹಿಳೆಯರಿಗೆ ಟಿಕೆಟ್​ ನೀಡಲಾಗಿದ್ದು, ಹಲವು ಮಂದಿ ಹಾಲಿ ಶಾಸಕರಿಗೆ ಟಿಕೆಟ್​ ನಿರಾಕರಿಸಲಾಗಿದೆ. ಈ ಪೈಕಿ ಮಾಜಿ ಸಚಿವ ಜಯಂತ್ ಮಲೈಯಾ (75) ಬಿಜೆಪಿ ಟಿಕೆಟ್​ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದು, ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.

    ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಚುನಾವಣೆಗೆ ಸೆಮಿಫಿನಾಲೆ ಎಂದೇ ಬಿಂಬಿತವಾಗಿದೆ. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts