More

    ಬಿಜೆಪಿ ಪದಾಧಿಕಾರಿಗಳ ಸಭೆ : ಅಂತಃಕಲಹದ‌ ಅಡ್ಡ‌ಪರಿಣಾಮ ತಪ್ಪಿಸಲು ಕಸರತ್ತು

    ಬೆಂಗಳೂರು: ಕೆಲವು ಶಾಸಕರ ವ್ಯತಿರಿಕ್ತ ಹೇಳಿಕೆ, ಅಂತಃಕಲಹಗಳು ರಾಜ್ಯದ ಆಡಳಿತ ಪಕ್ಷ ಬಿಜೆಪಿಯ ಸಂಘಟನೆ ಮೇಲೆ ಅಡ್ಡಪರಿಣಾಮ ಬೀರುವುದನ್ನು ತಪ್ಪಿಸಿ, ಸಂಘಟನೆ ಕ್ರಿಯಾಶೀಲಗೊಳಿಸುವ ಕಸರತ್ತು ನಡೆದಿದೆ. ಗೊಂದಲ ಬಗೆಹರಿಸಿ, ಸರ್ಕಾರ ಮತ್ತು ಪಕ್ಷವನ್ನು ಒಟ್ಟಿಗೆ ಕೊಂಡೊಯ್ಯುವಂತೆ ಮಾಡಲು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಶ್ರಮಿಸುತ್ತಿದ್ದಾರೆ.

    ಸಿಂಗ್​ ಅವರ ರಾಜ್ಯಪ್ರವಾಸದ ಮೂರನೇ ದಿನವಾದ ಇಂದು, ಪಕ್ಷದ ರಾಜ್ಯ ಕಚೇರಿಯಲ್ಲಿ ರಾಜ್ಯ ಸಮಿತಿ ಪದಾಧಿಕಾರಿಗಳು ಹಾಗೂ ಯುವ ಮೋರ್ಚಾಗಳ ಅಧ್ಯಕ್ಷರ ಸಭೆ ನಡೆಸುತ್ತಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಭಾಗವಹಿಸಿದ್ದಾರೆ.

    ಇದನ್ನೂ ಓದಿ: ಯೋಗೇಶ್ವರ್​ ಹೇಳಿದ್ದು ಸತ್ಯ, ವಿಜಯೇಂದ್ರ ಹಸ್ತಕ್ಷೇಪ ಇದೆ, ನಾಯಕತ್ವ ಬದಲಾವಣೆ ಆಗ್ಲೇಬೇಕು…

    ಪಕ್ಷ ಸಂಘಟನೆ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳ ತಯಾರಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕರೊನಾ ಹಾಗೂ ಪಕ್ಷದ ಆಂತರಿಕ ಭಿನ್ನಮತ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ.‌ ಇದು ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ತಳ ಮಟ್ಟದಲ್ಲಿ ಪಕ್ಷದ ಸಂಘಟನೆಯಲ್ಲಿ ಆತ್ಮವಿಶ್ವಾಸ ತುಂಬಿ, ಹುರುಪು ಹೆಚ್ಚಿಸುವ ಕಾರ್ಯತಂತ್ರ ರೂಪಿಸಲಾಗುತ್ತಿದೆ.

    ಕರೊನಾ ಸಂದರ್ಭದಲ್ಲಿ ಪಕ್ಷದ ವತಿಯಿಂದ ಯಾವ ರೀತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಪಂದನೆ ಹೇಗಿರಬೇಕು ಎಂಬ ಕುರಿತಾಗಿ ಅರುಣ್ ಸಿಂಗ್ ಕೆಲವೊಂದು ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.

    ನಂತರ ಪದಾಧಿಕಾರಿಗಳ ಸಭೆಯೂ ನಡೆಯಲಿದೆ. ಮಹತ್ವದ ಹಾಗೂ ನಿರ್ಣಾಯಕ ಕೋರ್ ಕಮಿಟಿ ಸಭೆ ಸಂಜೆ 4 ಕ್ಕೆ ಅರುಣ್ ಸಿಂಗ್ ಉಪಸ್ಥಿತಿಯಲ್ಲಿ ನಡೆಯಲಿದ್ದು, ಅವರು ಸರ್ಕಾರ ಮತ್ತು ಪಕ್ಷಕ್ಕೆ ಪ್ರಮುಖ ಸೂಚನೆಗಳನ್ನು ನೀಡುವ ಸಾಧ್ಯತೆಗಳಿವೆ.

    ಕೋಮುಸೌಹಾರ್ದ ಕೆಡಿಸುವ ಟ್ವೀಟ್ಸ್​ : ಟ್ವಿಟರ್​ ಇಂಡಿಯ ಎಂಡಿಗೆ ಪೊಲೀಸ್ ನೋಟೀಸ್

    ‘ನಾವು ಸರ್ಟಿಫೈಡ್​ ಗೂಂಡಾಗಳು’ ಎಂದ ಶಿವಸೇನಾ ನಾಯಕ ಸಂಜಯ್​ ರಾವತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts