More

    LIVE| ಜಗತ್ ಪ್ರಕಾಶ್ ನಡ್ಡಾ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

    ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಸೋಮವಾರ ಆರಂಭವಾಗಿದೆ. ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಜೆ.ಪಿ.ನಡ್ಡಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ನಿಚ್ಚಳವಾಗಿದೆ. ಅವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಸಲು ಮುಂದಾಗದೇ ಇರುವ ಕಾರಣ ಅವಿರೋಧವಾಗಿಯೇ ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಪಕ್ಷದ ಹಿರಿಯ ನಾಯಕರು, ಕೇಂದ್ರ ಸಚಿವರು, ಬಿಜೆಪಿ ಆಳ್ವಿಕೆಯ ರಾಜ್ಯಗಳ ಮುಖ್ಯಮಂತ್ರಿಗಳು ನಡ್ಡಾ ಅವರ ಅಭ್ಯರ್ಥಿತನವನ್ನು ಬೆಂಬಲಿಸಿದ್ದಾರೆ. ಅವರು ನಾಮಪತ್ರವನ್ನು ಶೀಘ್ರವೇ ಸಲ್ಲಿಸಲಿದ್ದು, ಅಪರಾಹ್ನ ಅವರ ಆಯ್ಕೆ ವಿಚಾರ ಘೋಷಣೆಯಾಗಲಿದೆ. ಪಕ್ಷದ ಕೇಂದ್ರ ಕಚೇರಿಗೆ ಅಪರಾಹ್ನ ಪ್ರಧಾನಿ ನರೇಂದ್ರ ಮೋದಿಯವರೂ ಆಗಮಿಸಲಿದ್ದು, ಹಾಲಿ ಅಧ್ಯಕ್ಷ ಅಮಿತ್ ಷಾ ಮತ್ತು ಇತರೆ ಪ್ರಮುಖರ ಸಮ್ಮುಖದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ನಡ್ಡಾ ಅವರ ಅಧಿಕಾರಾವಧಿ ಐದೂವರೆ ವರ್ಷ ಆಗಿರಲಿದೆ. 

    2.35 PM: ಜಗತ್ ಪ್ರಕಾಶ್ ನಡ್ಡಾ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

    2.10 PM: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ- ಜೆಪಿ ನಡ್ಡಾ ಅವರು ಯಾವಾಗಲೂ ಪ್ರೇರಣಾದಾಯಿ ಕಾರ್ಯಕರ್ತರಾಗಿದ್ದು, ಇದುವರೆಗೆ ಆಡಳಿತಗಾರರಾಗಿ, ನಾಯಕರಾಗಿ ಅವರ ಅನುಭವ ಅವರನ್ನು ಈ ಹಂತಕ್ಕೆ ಕರೆತಂದಿದೆ. ಇದು ಪಕ್ಷದ ಸಂಘಟನೆಯ ದೃಷ್ಟಿಯಿಂದಲೂ ಉತ್ತಮ ಬೆಳವಣಿಗೆ. 

    12.15 AM: ಜೆಪಿ ನಡ್ಡಾ ಅವರು ರಾಷ್ಟ್ರೀಯ ಅಧ್ಯಕ್ಷರು ಎಂದು ಅಧಿಕೃತವಾಗಿ ಘೋಷಣೆಯಾದ ಬಳಿಕ ವಿವಿಧ ಬಿಜೆಪಿ ಆಳ್ವಿಕೆಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆಯನ್ನು ಅವರು ನಡೆಸಲಿದ್ದಾರೆ. ಹಿಮಾಚಲ ಪ್ರದೇಶದ ಈ ನಾಯಕ ಅಮಿತ್ ಷಾ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಲಿದ್ದಾರೆ. 

    11.45 AM: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜೆ.ಪಿ. ನಡ್ಡಾ ಅವರು ಇಂದು ಸಂಜೆ ಪಕ್ಷದ ಪ್ರಮುಖ ನಾಯಕರ ಜತೆಗೆ ಸಭೆ ನಡೆಸಲಿದ್ದಾರೆ. 

    11.34 AM: ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ಜೆಪಿ ನಡ್ಡಾ 

     

    11.23 AM: ಬಹಳ ಮಹತ್ವದ ದಿನ ಇದು ಎಂದ ಮಲ್ಲಿಕಾ ನಡ್ಡಾ…

    11.10 AM: ಜೆಪಿ ನಡ್ಡಾ ಮತ್ತು ಅವರ ಪತ್ನಿ ಮಲ್ಲಿಕಾ ನಡ್ಡಾ ತಮ್ಮ ಮನೆಯಿಂದ ಬಿಜೆಪಿ ಕೇಂದ್ರ ಕಚೇರಿಯತ್ತ ಪ್ರಯಾಣಿಸಿದರು. ನಾಮಪತ್ರ ಸಲ್ಲಿಕೆ ಕಾರ್ಯ ಶೀಘ್ರ ಆರಂಭವಾಗಲಿದೆ. 

    11.02 AM:  ಕೇಂದ್ರ ಸಚಿವ ರಾಜನಾಥ್ ಸಿಂಗ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಜೆಪಿ ನಡ್ಡಾ ಅವರ ನಾಯಕತ್ವದಲ್ಲಿ ಪಕ್ಷ ಇನ್ನಷ್ಟು ಎತ್ತರಕ್ಕೆ ಏರಲಿದೆ. ಅವರ ಪಕ್ಷ ಸಂಘಟನಾ ಸಾಮರ್ಥ್ಯ ಮತ್ತು ಎಲ್ಲರನ್ನೂ ಜತೆಗೂಡಿಸಿಕೊಂಡು ಹೋಗುವ ಕೌಶಲ ಎಲ್ಲವೂ ಪಕ್ಷ ಸಂಘಟನೆಗೆ ವರವಾಗಲಿದೆ ಎಂದರು. 

    10.50 AM: ಹಾಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ಪಕ್ಷದ ಹಿರಿಯ ನಾಯಕರು ಮತ್ತು ಕೇಂದ್ರದ ಅನೇಕ ಸಚಿವರು, ಮುಖ್ಯಮಂತ್ರಿಗಳ ಜತೆಗೆ ಮಾತುಕತೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಯಾವುದೇ ಅಧಿಕೃತ ಸಂವಹನ ಬಹಿರಂಗವಾಗಿಲ್ಲ. ಪಕ್ಷದ ಮೂಲಗಳು, ಹಿರಿಯ ನಾಯಕರು ನೀಡುತ್ತಿರುವ ಮಾಹಿತಿ ಆಧರಿಸಿ ಸುದ್ದಿಗಳು ಪ್ರಸಾರವಾಗುತ್ತಿವೆ. 

    10.47 AM: ಬಿಜೆಪಿಯ ಹಿರಿಯ ನಾಯಕರೆಲ್ಲ ಪಕ್ಷದ ಕೇಂದ್ರ ಕಚೇರಿಯಲ್ಲಿ ಹಾಜರು. 

    10.46 AM: ಪಕ್ಷದ ಸಂಘಟನಾ ಚುನಾವಣಾ ಪ್ರಕ್ರಿಯೆ ಉಸ್ತುವಾರಿ ಹಿರಿಯ ಬಿಜೆಪಿ ನಾಯಕರ ರಾಧಾ ಮೋಹನ್ ಸಿಂಗ್ ಹೇಳಿಕೆ- ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಜನವರಿ 20ರಂದು(ಇಂದು) ನಡೆಯಲಿದೆ. ಒಂದೊಮ್ಮೆ ಸ್ಪರ್ಧೆ ಇದ್ದರೆ ಮರುದಿನ ಫಲಿತಾಂಶ ಪ್ರಕಟವಾಗಲಿದೆ. 

    10.37 AM: ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಚುನಾವಣಾ ಪ್ರಕ್ರಿಯೆಗೂ ಮೊದಲೇ ಟ್ವೀಟ್ ಮಾಡಿದ್ದು, ಜೆಪಿ ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts