More

    1 ಕಿ.ಮೀ ದೂರ ವ್ಯಕ್ತಿಯನ್ನು ಎಳೆದೊಯ್ದ ಬೈಕ್ ಸವಾರ; ಸತ್ಯ ಬಾಯ್ಬಿಟ್ಟ ಸಾಹಿಲ್​!

    ಬೆಂಗಳೂರು: ದೆಹಲಿಯಲ್ಲಿ ಮಹಿಳೆಯನ್ನು ಒಂದು ಗಂಟೆಗೂ ಹೆಚ್ಚು ಕಾಲ ಎಳೆದೊಯ್ದು, ಆಕೆ ಸಾವಿಗೀಡಾದ ಆಘಾತಕಾರಿ ಪ್ರಕರಣವೊಂದು ಮಾಸುವ ಮುನ್ನವೇ ನಿನ್ನೆ ರಾಜ್ಯ ರಾಜಧಾನಿಯಲ್ಲಿ ಇದೇ ಮಾದರಿಯ ಘಟನೆಯೊಂದು ನಡೆದಿತ್ತು.

    ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಟಾಟಾ ಸುಮೋ ಕಾರಿಗೆ ಡಿಕ್ಕಿ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಕಾರಿನ ‌ಡ್ರೈವರ್ ಪ್ರಶ್ನಿಸುತ್ತಿದ್ದಂತೆ ಸವಾರ ಸ್ಕೂಟರ್ ಹತ್ತಿ ಎಸ್ಕೇಪ್ ಆಗಲು ಮುಂದಾಗಿದ್ದ. ಈ ವೇಳೆ ಬೈಕ್ ಸವಾರನನ್ನು ಹಿಡಿಯಲು ಟಾಟಾ ಸುಮೋ ಚಾಲಕ ಮುಂದಾಗಿದ್ದು ಸ್ಕೂಟರ್​ಅನ್ನು ಹಿಂದಿನಿಂದ ಹಿಡಿದುಕೊಂಡಿದ್ದಾನೆ. ಆದರೆ ಸ್ಕೂಟರ್ ಸವಾರ ಮಾತ್ರ ಸ್ಥಳದಿಂದ ಪರಾರಿಯಾಗುವ ಯತ್ನದಲ್ಲಿ ಚಾಲಕನನ್ನು ಎಳೆದೊಯ್ದಿದ್ದಾನೆ. ಸಾಹಿಲ್ ಎಂಬ ಯುವಕ ಈ ಕೃತ್ಯ ಎಸಗಿದ್ದು ಮುತ್ತಪ್ಪ ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.

    ಇದೀಗ ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿರುವ ಸಾಹಿಲ್​, ನಿನ್ನೆ ಯಾಕಾಗಿ ಕೃತ್ಯವನ್ನು ಎಸಗಿದ್ದ ಎಂದು ಹೇಳಿದ್ದಾನೆ. ಆರೋಪಿ ಸಾಹಿಲ್​, ಯಶವಂತಪುರದ ಯುನೈಟೆಡ್ ಕಂಪೆನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿದ್ದಾನಂತೆ. ನಿನ್ನೆ ಕೆಲಸ ಮುಗಿಸಿ ಗಂಗೊಂಡನಹಳ್ಳಿ ಮನೆಗೆ ತೆರಳಲು ಬೈಕ್ ಹತ್ತಿ ಬಂದಿದ್ದ. ವೆಸ್ಟ್ ಆಫ್ ಕಾರ್ಡ್ ರೋಡ್ ಬಳಿಯ ಅಂಡರ್ ಪಾಸ್ ಗೂ ಮುನ್ನ ಬೊಲೆರೋ ಕಾರು ನಿಂತಿತ್ತು. ಸ್ವಲ್ಪ ಬೈಕ್ ಸ್ಪೀಡ್ ಇದ್ದಿದ್ದರಿಂದ ಹಾಗೂ ಎದುರಿನ ರಸ್ತೆ ಉಬ್ಬು (ಹಂಪ್​) ಇದ್ದಿದ್ದರಿಂದ ಬೈಕ್ ನಿಯಂತ್ರಣ ತಪ್ಪಿತ್ತು.

    ನಿಯಂತ್ರಣ ತಪ್ಪಿದ್ದರಿಂದ ಬೈಕ್ ಬೊಲೇರೋ ಕಾರಿಗೆ ಡಿಕ್ಕಿ ಹೊಡೆದಿದೆ‌. ತಕ್ಷಣ ಕಾರಿನಲ್ಲಿದ್ದ ಮುತ್ತಪ್ಪ ದಬಾಯಿಸಿ ಮಾತಾಡೋಕೆ ಹೋಗಿದ್ದಾರೆ. ಅಕ್ಕಪಕ್ಕದಲ್ಲಿ ಜನರೂ ಸೇರಲು ಶುರುಮಾಡಿದ್ದರು. ಅಲ್ಲೇ ನಿಂತರೆ ಹಣ ಕೇಳಬಹುದು ಅಥವಾ ಜನರು ಹೊಡೆಯಬಹುದು ಎಂದು ಭಯದಲ್ಲಿ ಬೈಕ್ ಸ್ಟಾರ್ಟ್ ಮಾಡಿ ಕಾಲು ಕೀಳೋಕೆ ಮುಂದಾಗಿದ್ದಾನೆ.

    ಈ ವೇಳೆ ಬೈಕನ್ನ ಜೋರಾಗಿ ಮುತ್ತಪ್ಪ ಹಿಡಿದಿದ್ದರಿಂದ ಏನ್ ಮಾಡೋದು ಅಂತ ಗೊತ್ತಾಗದೇ ಸ್ಪೀಡಾಗಿ ಹೋದ ಆತನನ್ನು ಆಟೋ ಚಾಲಕ ಹಾಗೂ ಕೆಲ ವ್ಯಕ್ತಿಗಳು ಹಿಡಿದಿದ್ದಾರೆ ಎಂದು ಹೇಳಿದ್ದಾನೆ. ‘ಭಯದಲ್ಲಿ ಅದೇನ್ ಮಾಡಿದ್ನೋ ಗೊತ್ತಿಲ್ಲ ಸರ್’ ಎಂದು ಅಳಲು ತೋಡಿಕೊಳ್ಳುತ್ತಾ ತಪ್ಪೊಪ್ಪಿಕೊಂಡಿದ್ದಾನೆ.

    ವಿಜಯನಗರ ಎಸಿಪಿ ರವಿಕುಮಾರ್ ಆರೋಪಿ ಸಾಹಿಲ್ ವಿಚಾರಣೆ ನಡೆಸುತ್ತಿದ್ದು ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿಸಿದ 24 ಗಂಟೆಗಳ ಒಳಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಬೇಕಾಗಿದ್ದು ಗೋವಿಂದರಾಜ ನಗರ ಪೊಲೀಸರು ಸಾಹಿಲ್​ನನ್ನು ನ್ಯಾಯಾಧೀಶರ ಮುಂದೆ ಹಾಜರು ಮಾಡಲು ಸಿದ್ಧತೆ ನಡೆಸಿದ್ದಾರೆ.

    ಸಾಹಿಲ್ ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಪೋಲಿಸರು ಸಾಹಿಲ್​ನನ್ನ ಪೊಲೀಸರು ವಶಕ್ಕೆ ಪಡೆಯುವುದು ಬಹುತೇಕ ಅನುಮಾನವೇ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts