More

    ವಾಯು ಮಾಲಿನ್ಯ: ದೆಹಲಿಯನ್ನು ಹಿಂದಿಕ್ಕಿದ ಬಿಹಾರ- ಬೇಗುಸರಾಯ್ ದೇಶದ ಅತ್ಯಂತ ಕಲುಷಿತ ನಗರ

    ಪಾಟ್ನಾ: ದೀಪಾವಳಿ ಸಂದರ್ಭ ಉಂಟಾಗುವ ವಾಯು ಮಾಲಿನ್ಯದ ವಿಷಯದಲ್ಲಿ ಬಿಹಾರ ದೆಹಲಿಯನ್ನು ಹಿಂದಿಕ್ಕಿದೆ. ಆ ರಾಜ್ಯದ ಬೇಗುಸರಾಯ್ ದೇಶದ ಅತ್ಯಂತ ಕಲುಷಿತ ನಗರವಾಗಿ ಗುರುತಿಸಿಕೊಂಡಿದೆ. ಹವಾಮಾನ ಬದಲಾವಣೆಯಿಂದಾಗಿ ಬಿಹಾರದಲ್ಲಿ ಮಾಲಿನ್ಯ ಪರಿಸ್ಥಿತಿ ಶನಿವಾರ ಹದಗೆಟ್ಟಿದೆ. ಬೇಗುಸರಾಯ್ 385 ರ ವಾಯು ಗುಣಮಟ್ಟ ಸೂಚ್ಯಂಕದೊಂದಿಗೆ (ಎಕ್ಯೂಐ) ದೇಶದ ಅತ್ಯಂತ ಕಲುಷಿತ ನಗರವಾಗಿದೆ.

    ಇದನ್ನೂ ಓದಿ: ದೆಹಲಿ ಜನರಿಗೆ ದೀಪಾವಳಿ ಉಡುಗೊರೆ: 8ವರ್ಷದಲ್ಲೇ ಕಡಿಮೆ ವಾಯು ಮಾಲಿನ್ಯ!

    ಇದಲ್ಲದೆ ಭಾಗಲ್ಪುರ್, ಛಾಪ್ರಾ, ಪಾಟ್ನಾ, ಕತಿಹಾರ್, ಪುರ್ನಿಯಾ, ರಾಜಗೀರ್, ಹಾಜಿಪುರ್, ಅರ್ರಾ ಮತ್ತು ಮೋತಿಹಾರ್ ಗಳಲ್ಲಿ ಗಾಳಿ ತುಂಬಾ ಕೆಟ್ಟದಾಗಿದೆ. ಮುಂದಿನ ದಿನಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.

    ಮಾಲಿನ್ಯಕ್ಕೆ ಮೂಲ ಕಾರಣವೇನು?: ಹವಾಮಾನ ಬದಲಾವಣೆಯಿಂದ ವಾಯು ಮಾಲಿನ್ಯ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಚಳಿಗಾಲದಲ್ಲಿ ರಾಜ್ಯದಲ್ಲಿ ಗಾಳಿಯು ನಿಶ್ಚಲವಾಗಿರುತ್ತದೆ, ಇದರಿಂದಾಗಿ ವಾತಾವರಣದಲ್ಲಿ ಧೂಳಿನ ಪದರವು ರೂಪುಗೊಂಡಿದೆ. ರಾಜ್ಯದಲ್ಲಿ ಮಾಲಿನ್ಯಕ್ಕೆ ಧೂಳಿನ ಕಣಗಳೇ ಮುಖ್ಯ ಕಾರಣ. ಇದರ ಪರಿಣಾಮ ಜನರು ಶೀತ ಸಂಬಂಧಿ ಮತ್ತು ಅಲರ್ಜಿ ಸೇರಿದಂತೆ ನಾನಾ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಡಿ.ಕೆ.ಶುಕ್ಲಾ ತಿಳಿಸಿದ್ದಾರೆ.

    ಇನ್ನು ರಾಜ್ಯದ ಛಾಪ್ರಾ: 378 ಪಾಟ್ನಾ: 376 ಕತಿಹಾರ್: 349 ಪೂರ್ಣಿಯಾ: 349 ಭಾಗಲ್ಪುರ್: 340 ಮೋತಿಹಾರಿ: 337 ರಾಜ್ಗೀರ್: 331 ಅರ್ರಾ: 323 ಹಾಜಿಪುರ: 308 ಎಕ್ಯೂಐ ದಾಖಲಾಗಿದೆ. ಅದೇ ರೀತಿ ದೇಶದ ಇತರ ನಗರಗಳಲ್ಲಿ ಅಂದರೆ ಇಂದೋರ್: 282 ಕೋಟಾ: 239 ನವದೆಹಲಿ: 216 ದೌಸಾ: 201 ಫರಿದಾಬಾದ್: 167 ಪಾಣಿಪತ್: 124 ಎಕ್ಯೂಐ ದಾಖಲಾಗಿದೆ.

    ವಾಯುಮಾಲಿನ್ಯ: ವಿಪರೀತ ಮಾಲಿನ್ಯದ ಸಮಯದಲ್ಲಿ ಬೆಲ್ಲದ ನೀರನ್ನು ಕುಡಿಯುವುದರಿಂದ ಶ್ವಾಸಕೋಶಕ್ಕೆ ಅನೇಕ ಲಾಭಗಳಿವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts