More

    ದೆಹಲಿ ಜನರಿಗೆ ದೀಪಾವಳಿ ಉಡುಗೊರೆ: 8ವರ್ಷದಲ್ಲೇ ಕಡಿಮೆ ವಾಯು ಮಾಲಿನ್ಯ!

    ದೆಹಲಿ: ದೀಪಾವಳಿಗೂ ಮುನ್ನ ರಾಷ್ಟ್ರ ರಾಜಧಾನಿ ಜನರಿಗೆ ಸಂತಸದ ಸುದ್ದಿ ಹೊರಬಂದಿದೆ. 8 ವರ್ಷದಲ್ಲಿ ಹಬ್ಬದ ಮುನ್ನಾ ದಿನ ಇದೇ ಮೊದಲ ಬಾರಿಗೆ ವಾಯುಮಾಲಿನ್ಯ ಕಡಿಮೆಯಾಗಿದೆ. ಈ ವರ್ಷ ಗಾಳಿಯ ಗುಣಮಟ್ಟವು ಕಳೆದ 8 ವರ್ಷಗಳಲ್ಲಿ ಕಡಿಮೆ ವಾಯುಮಾಲಿನ್ಯ ದಾಖಲಾಗಿದೆ.

    ಇದನ್ನೂ ಓದಿ: ದಾಖಲೆ ಬರೆದ ತಿರುಪತಿ ತಿಮ್ಮಪ್ಪ; ಗೋವಿಂದನ ದರ್ಶನದ 2.25 ಲಕ್ಷ ಟಿಕೆಟ್ 21 ನಿಮಿಷದಲ್ಲಿ ಖಾಲಿ

    ಇದನ್ನೂ ಓದಿ: ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಶನಿವಾರ ಮಧ್ಯಾಹ್ನ 12 ಗಂಟೆಗೆ 228 ಆಗಿತ್ತು, ಇದು 4 ಗಂಟೆಗೆ 224 ತಲುಪಿತು. ಪಟಾಕಿ ನಿಷೇಧವನ್ನು ಜಾರಿಗೆ ತಂದರೆ, ದೀಪಾವಳಿಯಂದು ದೆಹಲಿಯ ಹವಾ ಕಳೆದ 8 ವರ್ಷಗಳಲ್ಲಿ ಅತ್ಯುತ್ತಮವಾಗಿರಬಹುದು.

    3 ವಾರದಲ್ಲೇ ಅತ್ಯುತ್ತಮ ಎಕ್ಯೂಐ ?: ದೆಹಲಿಯು ಬೆಳಿಗ್ಗೆ 7 ಗಂಟೆಗೆ 202 ಎಕ್ಯೂಐ ಅನ್ನು ದಾಖಲಿಸಿದೆ, ಇದು ಕಳೆದ 3 ವಾರಗಳಲ್ಲಿ ಅತ್ಯುತ್ತಮವಾಗಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ಆನಂದ್ ವಿಹಾರ್ ನಲ್ಲಿ ಭಾನುವಾರ ಬೆಳಗ್ಗೆ ಎಕ್ಯೂಐ 266 ಅನ್ನು ದಾಖಲಾಗಿದೆ. ಇದೇ ಸಮಯದಲ್ಲಿ ಆರ್‌ಕೆ ಪುರಂ 241, ಐಟಿಒ 227, ಫರಿದಾಬಾದ್ 166, ಗುರುಗ್ರಾಮ್ 172, ಘಾಜಿಯಾಬಾದ್ 179 ಮತ್ತು ನೋಯ್ಡಾದಲ್ಲಿ 170 ಎಕ್ಯೂಐ ದಾಖಲಾಗಿದೆ. ಹಬ್ಬಕ್ಕೆ ಪಟಾಕಿ ಸಿಡಿಸಿದರೆ ಮಾಲಿನ್ಯದ ಪರಿಸ್ಥಿತಿ ಮತ್ತೆ ಹದಗೆಡಬಹುದು.

    ಹಿಂದಿನ ವರ್ಷಗಳಲ್ಲಿ ಹೇಗಿತ್ತು?: ಸಿಪಿಸಿಬಿ ಅಂಕಿಅಂಶಗಳ ಪ್ರಕಾರ ದೆಹಲಿಯು ಕಳೆದ ವರ್ಷ ದೀಪಾವಳಿಯಲ್ಲಿ 312, 2021 ರಲ್ಲಿ 382, ​​2020 ರಲ್ಲಿ 414, 2019 ರಲ್ಲಿ 337, 2018 ರಲ್ಲಿ 281, 2017 ರಲ್ಲಿ 319 ಮತ್ತು 2016 ರಲ್ಲಿ 431 ಎಕ್ಯೂಐ ದಾಖಲಿಸಿದೆ. ಈ ಬಾರಿ ದೀಪಾವಳಿಯ ಮುಂಚೆಯೇ ಗಾಳಿಯ ಗುಣಮಟ್ಟದಲ್ಲಿ ತೀವ್ರ ಸುಧಾರಣೆ ಕಂಡುಬಂದಿರುವುದಕ್ಕೆ ಮುಖ್ಯ ಕಾರಣ ನ.10 ರಂದು ಮಧ್ಯಂತರ ಮಳೆ ಮತ್ತು ಗಾಳಿಯ ವೇಗ ಹೆಚ್ಚಿರುವುದು ಎನ್ನಲಾಗುತ್ತಿದೆ.

    ದೆಹಲಿ ಸರ್ಕಾರ ಹೊರಡಿಸಿದ ಸಲಹೆ:
    ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಕೆಲವು ಸಲಹೆ ನೀಡಿದೆ. ಜನರು ಬೆಳಗಿನ ಜಾವದ ನಡಿಗೆ ಮತ್ತು ಇತರ ದೈಹಿಕ ವ್ಯಾಯಾಮಗಳನ್ನು ಮುಕ್ತ ವಾತಾವರಣದಲ್ಲಿ ಮಾಡಬಾರದು. ವಿಶೇಷವಾಗಿ ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಹೆಚ್ಚು ಜಾಗರೂಕರಾಗಿರಬೇಕು. ವಾಯು ಮಾಲಿನ್ಯದ ಸಮಯ ಹೊರಗೆ ಹೋಗಬಾರದು ಎಂದಿದೆ.

    ಎಕ್ಯೂಐ ಅನ್ನು ಯಾವ ವರ್ಗಗಳಾಗಿ ವಿಂಗಡಿಸಲಾಗಿದೆ?:
    ಸಿಬಿಸಿಪಿ ಪ್ರಕಾರ, 0-50 ನಡುವಿನ ಎಕ್ಯೂಐ ‘ಉತ್ತಮ’, 51-100 ನಡುವೆ ‘ತೃಪ್ತಿದಾಯಕ’, 101-200 ನಡುವೆ ‘ಮಧ್ಯಮ’, 201-300 ನಡುವೆ ‘ಕಳಪೆ’, 301-400 ನಡುವೆ ‘ಬಹಳ ಕಳಪೆ’. 401-450 ನಡುವೆ ‘ತೀವ್ರ’ ಮತ್ತು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

    ಪಟಾಕಿ ನಿಷೇಧ: ಮಾಲಿನ್ಯದ ದೃಷ್ಟಿಯಿಂದ ದೆಹಲಿ ಸರ್ಕಾರವು ನವೆಂಬರ್ 13 ರಿಂದ ಬೆಸ-ಸಮ ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರ ಅದನ್ನು ಮುಂದೂಡಿದೆ. ನ.20 ಮತ್ತು 21ರಂದು ಕೃತಕ ಮಳೆ ಸುರಿಯುವ ಉದ್ದೇಶವನ್ನೂ ಸರ್ಕಾರ ಹೊಂದಿದ್ದು, ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಮಾಲಿನ್ಯದ ದೃಷ್ಟಿಯಿಂದ ಈ ವರ್ಷವೂ ದೆಹಲಿಯಲ್ಲಿ ಎಲ್ಲಾ ರೀತಿಯ ಪಟಾಕಿಗಳನ್ನು ನಿಷೇಧಿಸಲಾಗುವುದು ಎಂದಿದೆ.

    ಅಯೋಧ್ಯೆ ದೀಪೋತ್ಸವ ವಿಶ್ವ ದಾಖಲೆ: ಏಕಕಾಲಕ್ಕೆ 22 ಲಕ್ಷಕ್ಕೂ ಅಧಿಕ ಹಣತೆ ಬೆಳಗಿಸಿದ 25 ಸಾವಿರ ಸ್ವಯಂಸೇವಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts