More

    ಮಹಿಳೆಯರನ್ನು ಪ್ರೆಗ್ನೆಂಟ್​ ಮಾಡಿದ್ರೆ 13 ಲಕ್ಷ ರೂ. ಆಫರ್​! ಇಷ್ಟವಾದವರನ್ನು ಆಯ್ದುಕೊಳ್ಳಲು ಅವಕಾಶ

    ಪಟನಾ: ಗರ್ಭ ಧರಿಸದ ಮಹಿಳೆಯರನ್ನು ಪ್ರೆಗ್ನೆಂಟ್​ ಮಾಡಲು ಪುರುಷರಿಗೆ ಬರೋಬ್ಬರಿ 13 ಲಕ್ಷ ರೂ. ಆಫರ್ ನೀಡಿದ 8 ಮಂದಿಯ ಬಿಹಾರಿ ಗ್ಯಾಂಗ್​ ಅನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

    ಅಖಿಲ ಭಾರತೀಯ ಗರ್ಭಿಣಿ ಉದ್ಯೋಗ ಸೇವೆ (ಆಲ್​ ಇಂಡಿಯಾ ಪ್ರೆಗ್ನೆಂಟ್​ ಸರ್ವೀಸ್​) ಹೆಸರಿನಲ್ಲಿ ಬಿಹಾರಿ ಗ್ಯಾಂಗ್​​ ದಂಧೆ ನಡೆಸುತ್ತಿತ್ತು. ಇದೀಗ ಬಿಹಾರ ಪೊಲೀಸರ ಕಾರ್ಯಾಚರಣೆಯಲ್ಲಿ ದಂಧೆ ಬೆಳಕಿಗೆ ಬಂದಿದ್ದು, ಬಿಹಾರದ ನಾವಡದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

    ನಾವು ಹೇಳಿದ ಸೇವೆ ನೀಡಿದರೆ ಲಕ್ಷಾಂತರ ರೂಪಾಯಿ ಗಳಿಸಬಹುದೆಂದು ವಾಟ್ಸ್​ಆ್ಯಪ್​ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಪುರುಷರಿಗೆ ಬಿಹಾರಿ ಗ್ಯಾಂಗ್​ ಆಫರ್​ ನೀಡುತ್ತಿತ್ತು. ಹಣದ ಅವಶ್ಯಕತೆ ಇದ್ದ ಪುರುಷರು 799 ರೂ. ನೀಡಿ ನೋಂದಣಿ ಮಾಡಿಕೊಳ್ಳುತ್ತಿದ್ದರು. ನೋಂದಣಿ ಮಾಡಿಕೊಳ್ಳುತ್ತಿದ್ದಂತೆಯೇ ಮಹಿಳೆಯರ ಫೋಟೋಗಳನ್ನು ಕಳುಹಿಸಿ, ಯಾರನ್ನು ಪ್ರೆಗ್ನೆಂಟ್​ ಮಾಡಲು ಬಯಸಿದ್ದೀರಾ ಅವರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಗ್ಯಾಂಗ್​ ಕೇಳುತ್ತಿತ್ತು.

    ಮಹಿಳೆಯರು ನೋಡಲು ಎಷ್ಟು ಆಕರ್ಷಕವಾಗಿದ್ದಾರೆ ಎಂಬ ಆಧಾರದ ಮೇಲೆ 5 ರಿಂದ 20 ಸಾವಿರ ರೂ.ವರೆಗೆ ಭದ್ರತಾ ಮೊತ್ತವನ್ನು ಠೇವಣಿ ಇಡುವಂತೆ ಪುರುಷರ ಬಳಿಕ ಕೇಳಲಾಗುತ್ತಿತ್ತು. ಅಲ್ಲದೆ, ಮಹಿಳೆಯರನ್ನು ಪ್ರೆಗ್ನೆಂಟ್​ ಮಾಡಿದರೆ, 13 ಲಕ್ಷ ರೂ. ನೀಡುವುದಾಗಿ ಆಫರ್​ ನೀಡಲಾಗುತ್ತಿತ್ತು. ಪ್ರೆಗ್ನೆಂಟ್​ ಮಾಡಲು ಫೇಲ್​ ಆದರೂ ಕೂಡ ಸಮಾಧಾನಕರ ಮೊತ್ತವಾಗಿ 5 ಲಕ್ಷ ರೂ. ಕೊಡುವುದಾಗಿ ಗ್ಯಾಂಗ್​ ಭರವಸೆ ನೀಡಿತ್ತು ಎಂದು ನಾವಾಡದ ಪೊಲೀಸ್​ ವರಿಷ್ಠಾಧಿಕಾರಿ ಕಲ್ಯಾಣ್​ ಆನಂದ್​ ತಿಳಿಸಿದ್ದಾರೆ.

    ನಾವಾಡದಲ್ಲಿ ವಿಶೇಷ ತನಿಖಾ ತಂಡ ನಡೆಸಿದ ದಾಳಿಯ ವೇಳೆ 8 ಮಂದಿಯ ಗ್ಯಾಂಗ್​ ಅನ್ನು ಬಂಧಿಸಲಾಗಿದೆ. ಬಂಧಿತರಿಂದ ಮೊಬೈಲ್​ ಫೋನ್​ಗಳು ಮತ್ತು ಒಂದು ಪ್ರಿಂಟರ್​ ಅನ್ನು ವಶಕ್ಕೆ ಪಡೆಯಲಾಗಿದೆ. ಮಾಸ್ಟರ್​ ಮೈಂಡ್​ ಸೇರಿದಂತೆ ಇನ್ನಿತರ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. (ಏಜೆನ್ಸೀಸ್​)

    ಹೊಸ ವರ್ಷದಂದೇ ಜಪಾನ್​ಗೆ ಅಪ್ಪಳಿಸಿದ ಸುನಾಮಿ! ಜೀವ ಉಳಿಸಿಕೊಳ್ಳಲು ಎತ್ತರದ ಸ್ಥಳಕ್ಕೆ ಓಡುತ್ತಿರುವ ಜನರು

    ದುಬಾರಿ ಮೊತ್ತಕ್ಕೆ ಸೇಲಾಯ್ತು ಅಲ್ಲು ಅರ್ಜುನ್​ ನಟನೆಯ ‘ಪುಷ್ಪ 2’ ಡಿಜಿಟಲ್ ಹಕ್ಕು!

    5980 ಡೇಟಾ ಎಂಟ್ರಿ ಅಪರೇಟರ್ ನೇಮಕಕ್ಕೆ ತಾತ್ಕಾಲಿಕ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts