More

    ಸ್ಮಾಲ್​ ಕ್ಯಾಪ್​ ಮ್ಯುಚೂವಲ್​ ಫಂಡ್​ಗಳಲ್ಲಿದೆ ದೊಡ್ಡ ಲಾಭ: ಎನ್​ಎಫ್​ಒ ಎಂದರೇನು? ಇದರಲ್ಲಿ ಹಣ ತೊಡಗಿಸಿದರೆ ಸಿಗುವ ಲಾಭ ಎಷ್ಟು?

    ಮುಂಬೈ: ಸ್ಮಾಲ್ ಕ್ಯಾಪ್‌ ಫಂಡ್​ಗಳು ಕೆಲವು ಸಮಯದಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅತ್ಯಂತ ರೋಮಾಂಚಕತೆ ಸೃಷ್ಟಿಸಿವೆ. ಸ್ಮಾಲ್​ ಕ್ಯಾಪ್​ಗಳೆಂದರೆ, ಸಣ್ಣ ಕಂಪನಿಗಳ ಷೇರುಗಳು. ಇತ್ತೀಚಿನ ವರ್ಷಗಳಲ್ಲಿ ಈ ಸಣ್ಣ ಕಂಪನಿಗಳ ಷೇರು ದೊಡ್ಡ ಪ್ರಮಾಣದ ಲಾಭವನ್ನು ಹೂಡಿಕೆದಾರರಿಗೆ ತಂದುಕೊಟ್ಟಿವೆ. ಹೀಗಾಗಿ, ಸ್ಮಾಲ್​ ಕ್ಯಾಪ್​ ಮ್ಯುಚೂವಲ್​ ಫಂಡ್​ಗಳು ಉಳಿದ ವಿಭಾಗಗಳ ಫಂಡ್​ಗಳಿಗಿಂತ ಹೆಚ್ಚಿನ ಲಾಭ ನೀಡಿವೆ.

    ಈಗ ಸ್ಮಾಲ್​ ಕ್ಯಾಪ್​ ಮ್ಯುಚೂವಲ್​ ಫಂಡ್​ಗಳ ಎನ್​ಎಫ್​ಒಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

    ಎನ್​ಎಫ್​ಒ ಎಂದರೆ ನ್ಯೂ ಫಂಡ್ ಆಫರ್. ಮ್ಯೂಚುಯಲ್ ಫಂಡ್‌ಗಳ ಲೋಕದಲ್ಲಿ ಸಾಮಾನ್ಯವಾಗಿ ಬಳಸುವ ಪದ ಇದಾಗಿದೆ. ಯಾವುದಾದರೂ ಮ್ಯೂಚುಯಲ್ ಫಂಡ್ ಕಂಪನಿಯು ಹೊಸ ಫಂಡ್​ ಆರಂಭಿಸಿದರೆ ಅದನ್ನು ಎನ್​ಎಫ್​ಒ ಎನ್ನುತ್ತಾರೆ. ಹೂಡಿಕೆದಾರರು ಪ್ರತಿ ಘಟಕಕ್ಕೆ (ಒಂದು ಯೂನಿಟ್​ಗೆ) 10 ರೂಪಾಯಿ ಬೆಲೆ ನೀಡಿ ತಮ್ಮ ಹೂಡಿಕೆ ಸಾಮರ್ಥ್ಯಕ್ಕೆ ತಕ್ಕಷ್ಟು ಯೂನಿಟ್​ಗಳನ್ನು ಖರೀದಿಸಬಹುದು.

    ಹೂಡಿಕೆದಾರರ ಪರವಾಗಿ ಈ ಮ್ಯೂಚುಯಲ್ ಫಂಡ್ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುತ್ತವೆ. ಅವು ಲಾಭ ಮಾಡುತ್ತಾ ಸಾಗಿದರೆ 10 ರೂಪಾಯಿ ಯೂನಿಟ್​ನ​ ಬೆಲೆ ಹೆಚ್ಚಾಗುತ್ತದೆ ಹೋಗುತ್ತದೆ. ಒಂದು ವೇಳೆ ನಷ್ಟವಾಗುತ್ತ ಹೋದರೆ, 10 ರೂಪಾಯಿ ಯೂನಿಟ್​ ಬೆಲೆ ಅದಕ್ಕೆ ಅನುಗುಣವಾಗಿ ಕಡಿಮೆ ಆಗುತ್ತದೆ. ಈ ರೀತಿ ಹೆಚ್ಚು-ಕಡಿಮೆಯಾಗುವ ಒಂದು ಯೂನಿಟ್​ ಬೆಲೆಯನ್ನು ಎನ್​ಎವಿ (ನೆಟ್​ ಅಸೆಟ್​ ವ್ಯಾಲ್ಯು) ಎನ್ನುತ್ತಾರೆ. ಒಂದು ಮ್ಯುಚೂವಲ್​ ಫಂಡ್​ ಆರಂಭವಾದ ನಂತರದ ದಿನಗಳಲ್ಲಿ ಹಣ ತೊಡಗಿಸಬೇಕಾದರೆ ಎನ್​ಎವಿ ಬೆಲೆ ಆಧಾರದಲ್ಲಿ ಖರೀದಿಸಬೇಕಾಗುತ್ತದೆ.

    ಭಾರತೀಯ ಮಾರುಕಟ್ಟೆಯಲ್ಲಿ 26 ಸ್ಮಾಲ್‌ಕ್ಯಾಪ್ ಫಂಡ್​ ಯೋಜನೆಗಳಲ್ಲಿ ನವೆಂಬರ್ 30ರವರೆಗೆ 2.2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿರುವುದು ಗಮನಾರ್ಹ ಸಂಗತಿಯಾಗಿದೆ.

    ಸ್ಮಾಲ್‌ ಕ್ಯಾಪ್ ಫಂಡ್​ಗಳಲ್ಲಿ ಹೂಡಿಕೆಯಾಗುವ ಹಣದ ಪೈಕಿ ಕನಿಷ್ಠ 65 ಪ್ರತಿಶತವನ್ನು ಸ್ಮಾಲ್‌ ಕ್ಯಾಪ್ ಷೇರುಗಳಲ್ಲಿ ತೊಡಗಿಸಲಾಗುತ್ತದೆ,

    ಕಳೆದ ಮೂರು ವರ್ಷಗಳಲ್ಲಿ ಸ್ಮಾಲ್​ ಕ್ಯಾಪ್​ ಮ್ಯೂಚುಯಲ್ ಫಂಡ್​ಗಳು ಸರಾಸರಿಯಾಗಿ ಶೇಕಡಾ 33.1ರಷ್ಟು ವಾರ್ಷಿಕ ಲಾಭವನ್ನು ಹೂಡಿಕೆದಾರರಿಗೆ ನೀಡಿರುವುದು ಆಕರ್ಷಕ ಸಂಗತಿಯಾಗಿದೆ. ಇತರೆ ವರ್ಗಗಳ ಮ್ಯೂಚುಯಲ್ ಫಂಡ್​ಗಳಿಗೆ ಹೋಲಿಸಿದರೆ ಈ ಲಾಭ ಪ್ರಮಾಣ ಅತ್ಯಧಿಕವಾಗಿದೆ.

    ಈಗ ಮೋತಿಲಾಲ್ ಓಸ್ವಾಲ್ ಸ್ಮಾಲ್ ಕ್ಯಾಪ್ ಫಂಡ್ ಮತ್ತು ಡಿಎಸ್​ಪಿ ನಿಫ್ಟಿ ಸ್ಮಾಲ್‌ ಕ್ಯಾಪ್ 250 ಕ್ವಾಲಿ ಟಿ50 ಇಂಡೆಕ್ಸ್ ಫಂಡ್‌, ಬಂಧನ್ ನಿಫ್ಟಿ ಸ್ಮಾಲ್‌ಕ್ಯಾಪ್ 250 ಇಂಡೆಕ್ಸ್ ಫಂಡ್​ಗಳ ಎನ್​ಎಫ್​ಒಗಳು (ಹೊಸ ನಿಧಿ ಕೊಡುಗೆಗಳು) ಚಂದಾದಾರಿಕೆಗೆ ತೆರೆದಿವೆ. ಇವುಗಳಲ್ಲಿ ಸಾಕಷ್ಟು ಲೆಕ್ಕಾಚಾರ, ಜಾಣ್ಮೆಯಿಂದ ಹೂಡಿಕೆ ಮಾಡಿ ಲಾಭ ಮಾಡಿಕೊಳ್ಳಲು ಅವಕಾಶವಿದೆ.

    ರೂ 2,800 ಕೋಟಿಯ ರಾಕೆಟ್ ಲಾಂಚರ್‌ ಖರೀದಿಗೆ ರಕ್ಷಣಾ ಸಚಿವಾಲಯ ಅನುಮತಿ; ಈ ಷೇರುಗಳಿಗೆ ಸಿಗಲಿದೆ ಲಾಭ…

    ಇಂಡಿಯಾ ಮೈತ್ರಿಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ: ಹೀಗಿದೆ ಮಮತಾ ಬ್ಯಾನರ್ಜಿ ಪ್ರಸ್ತಾಪ

    ಬಿಟ್‌ಕಾಯಿನ್ ವಂಚನೆ ಯೋಜನೆಯಲ್ಲಿ ಮಹಿಳೆ ಬಂಧನ: ಈ ದಂಧೆಯಲ್ಲಿ ವಂಚಿಸಿದ ಮೊತ್ತ ಎಷ್ಟು ಸಾವಿರ ಕೋಟಿ ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts