More

    ಅಮೆರಿಕ​ ಅಧ್ಯಕ್ಷೀಯ ಚುನಾವಣೆ: ಅಭ್ಯರ್ಥಿ ಸ್ಥಾನ ಭದ್ರಪಡಿಸಿಕೊಂಡ ಬೈಡೆನ್, ಗೆಲುವಿನ ಸನಿಹದಲ್ಲಿ ಟ್ರಂಪ್​

    ವಾಷಿಂಗ್ಟನ್​: ಯುನೈಟೆಡ್​ ಸ್ಟೇಟ್ಸ್​ನಲ್ಲಿ ಚುನಾವಣಾ ಕಣ ರಂಗೇರಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಡೆಮೊಕ್ರೆಟಿಕ್​ ಪಾರ್ಟಿಯ ಅಭ್ಯರ್ಥಿಯಾಗಿ ಹಾಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಅವರು ತಮ್ಮ ನಾಮನಿರ್ದೇಶನವನ್ನು ಬುಧವಾರ ಭದ್ರಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ ರಿಪಬ್ಲಿಕನ್​ ಪಕ್ಷದ ಡೊನಾಲ್ಡ್​ ಟ್ರಂಪ್​ ಕೂಡ ಸ್ಥಾನ ಭದ್ರಪಡಿಸಿಕೊಳ್ಳುವ ಸಮೀಪದಲ್ಲಿದ್ದು, ಈ ಬಾರಿಯೂ ಬೈಡೆನ್​ vs ಟ್ರಂಪ್​ ಕಾಳಗ ನಡೆಯುವ ಸಾಧ್ಯತೆ ದಟ್ಟವಾಗಿದೆ.

    ಯುಎಸ್​ ಮಾಧ್ಯಮ ಪ್ರಕಾರ ಬೈಡೆನ್​ ನಾಮನಿರ್ದೇಶನಗೊಳ್ಳಲು 1,968 ಪ್ರತಿನಿಧಿಗಳ ಅವಶ್ಯಕತೆ ಇತ್ತು. ಜಾರ್ಜಿಯಾದಲ್ಲಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಆ ನಂಬರ್​ ಅನ್ನು ಪಾಸ್​ ಮಾಡುವ ಮೂಲಕ ನಾಮನಿರ್ದೇಶನ ಭಧ್ರಪಡಿಸಿಕೊಂಡಿದ್ದಾರೆ. ಮಿಸ್ಸಿಸ್ಸಿಪ್ಪಿ, ವಾಷಿಂಗ್ಟನ್​ ಮತ್ತು ಉತ್ತರ ಮರಿಯಾನಾ ಐಸ್​ಲ್ಯಾಂಡ್​ಗಳಲ್ಲೂ ಇದೇ ರೀತಿಯ ಫಲಿತಾಂಶದ ನಿರೀಕ್ಷೆ ಇದೆ.

    ಅಂದಹಾಗೆ ಅಮೆರಿಕದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು, ಪರೋಕ್ಷ ಅಥವಾ ಪ್ರಾಥಮಿಕ ಚುನಾವಣೆಯನ್ನು ನಡೆಸಲಾಗುತ್ತದೆ. ಪ್ರತಿ ಪಕ್ಷ ಸ್ವೀಕರಿಸುವ ಪ್ರತಿನಿಧಿಗಳ ಸಂಖ್ಯೆಯನ್ನು ಮತದಾರರು ನಿರ್ಧರಿಸುತ್ತಾರೆ. ಬಳಿಕ ಪ್ರತಿನಿಧಿಗಳು ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಪ್ರಾಥಮಿಕ ಚುನಾವಣೆಗಳಲ್ಲಿ ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನವನ್ನು ಗೆಲ್ಲಲು ಅಭ್ಯರ್ಥಿಗಳಿಗೆ ಬಹುಪಾಲು ಪ್ರತಿನಿಧಿ ಮತಗಳ ಅಗತ್ಯವಿದೆ.

    ಗೆಲುವಿನ ಬೆನ್ನಲ್ಲೇ ಮಾತನಾಡಿದ ಬೈಡೆನ್​, ಈ ದೇಶದ ಭವಿಷ್ಯದ ಬಗ್ಗೆ ಮತದಾರರಿಗೆ ಈಗ ಆಯ್ಕೆ ಇದೆ. ನಾವು ಎದ್ದುನಿಂತು ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತೇವೆಯೇ ಅಥವಾ ಇತರರು ಅದನ್ನು ಕಿತ್ತುಹಾಕಲು ಬಿಡುತ್ತೇವೆಯೇ? ನಮ್ಮ ಸ್ವಾತಂತ್ರ್ಯವನ್ನು ಆಯ್ಕೆ ಮಾಡುವ ಮತ್ತು ರಕ್ಷಿಸುವ ಹಕ್ಕನ್ನು ನಾವು ಪುನಃಸ್ಥಾಪಿಸುತ್ತೇವೆಯೇ ಅಥವಾ ಉಗ್ರಗಾಮಿಗಳು ಅವುಗಳನ್ನು ಕಸಿದುಕೊಳ್ಳಲು ಬಿಡುತ್ತೇವೆಯೇ? ಎಂಬುದನ್ನು ಮತದಾರರೇ ನಿರ್ಧರಿಸುತ್ತಾರೆ ಎಂದು ಹೇಳಿದರು.

    ಇನ್ನೂ ರಿಪಬ್ಲಿಕನ್ ನಾಮನಿರ್ದೇಶನಕ್ಕಾಗಿ ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ ಪೈಪೋಟಿ ನಡೆಸುತ್ತಿದ್ದು, ಗೆಲುವಿನ ಹೊಸ್ತಿಲಲ್ಲಿದ್ದಾರೆ. ಟ್ರಂಪ್​ ಅವರ ಕೊನೆಯ ಪ್ರತಿಸ್ಪರ್ಧಿ ನಿಕ್ಕಿ ಹೇಲಿ ವಿರುದ್ಧ ಕಳೆದ ವಾರ 15 ರಾಜ್ಯಗಳಲ್ಲಿ 14 ರಲ್ಲಿ ಜಯಗಳಿಸಿದ್ದಾರೆ. ಈ ಮೂಲಕ ಬೈಡೆನ್​ ರೀತಿಯ ಯಶಸ್ಸನ್ನು ಪುನರಾವರ್ತಿಸುವ ನಿರೀಕ್ಷೆಯಿದೆ. ಈ ಬಾರಿಯೂ ಬೈಡೆನ್​ ಮತ್ತು ಟ್ರಂಪ್​ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ಹೀರೋಯಿನ್ಸ್​ ಅಲ್ಲಿಗೆ ಹೋದರೆ… ತಾಪ್ಸಿಯಿಂದ ಬಾಲಿವುಡ್​ ನೈಟ್​ ಪಾರ್ಟಿಗಳ ಕರಾಳ ರಹಸ್ಯ ಬಯಲು

    ಆನ್​ಲೈನ್​​ ಟ್ರೋಲ್​ಗಳಿಗೆ ಬೇಸತ್ತು ಸಾವಿಗೆ ಶರಣಾದ ಮಹಿಳೆ!? ಸಿಎಂ ಜಗನ್ ಕಂಬನಿ, 20 ಲಕ್ಷ ರೂ. ಪರಿಹಾರ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts