ಅರಕಲಗೂಡು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಜೀವನ ಮಿಷನ್ ಯೋಜನೆ ಕಾಮಗಾರಿಗೆ ಶಾಸಕ ಎ.ಮಂಜು ಭೂಮಿಪೂಜೆ ನಡೆಸಿದರು.
ಹನ್ಯಾಳು ಗ್ರಾಮದಲ್ಲಿ 5.42 ಕೋಟಿ ರೂ., ರಾಮನಾಥಪುರ ಗ್ರಾಪಂ ವ್ಯಾಪ್ತಿಯ ಬಿಳಗೂಲಿ, ಕೋಟವಾಳು ಗ್ರಾಮದಲ್ಲಿ 9.52 ಕೋಟಿ ರೂ.ಹಾಗೂ ಬೋಳಕ್ಯಾತನಹಳ್ಳಿ ಬಳಿಯ ದೊಡ್ಡಗಾವನಹಳ್ಳಿ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಕಸಬಾ ಹಾಗೂ ಹಳ್ಳಿಮೈಸೂರು ಹೋಬಳಿ ವ್ಯಾಪ್ತಿಯ 138 ಗ್ರಾಮಗಳಿಗೆ ಶುದ್ಧ ನೀರು ಪೂರೈಸುವ 94.71 ಕೋಟಿ ರೂ ವೆಚ್ಚದ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.